More

    ವಿಜ್ಞಾನದ ಮಹತ್ವ ಪೂರ್ವಜರಿಗೂ ಅರಿವಿತ್ತು

    ಲಿಂಗದಹಳ್ಳಿ: ಪ್ರಕೃತಿ ವಿಜ್ಞಾನದ ಕಣಜವಾಗಿದ್ದು, ಅದರಲ್ಲಿ ಅಡಗಿರುವುದನ್ನು ಹೊರತೆಗೆಯುವುದೇ ವಿಜ್ಞಾನದ ಕಾರ್ಯ. ಗಣಿತ ಮತ್ತು ವಿಜ್ಞಾನದ ಆವಿಷ್ಕಾರಗಳನ್ನು ಭಾರತೀಯರು ಬಹಳ ಹಿಂದೆಯೇ ಕಲಿತಿದ್ದರಿಂದ ಅಂಗಳಕ್ಕೆ ಹಸುವಿನ ಸಗಣಿಯಿಂದ ಸಾರಿಸಿ, ಬಾಗಿಲಿಗೆ ಮಾವಿನ ತೋರಣ ಮತ್ತು ಬಾಳೆ ಗಿಡಗಳನ್ನು ಕಟ್ಟುವುದರ ಮೂಲಕ ಕ್ರಿಮಿ, ಕೀಟಗಳ ದಾಳಿಯಿಂದ ರಕ್ಷಣೆ ಪಡೆಯುತ್ತಿದ್ದರು ಎಂದು ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್ ಹೇಳಿದರು.

    ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿರಿಯರು ಗ್ರಾಮಗಳ ವ್ಯಾಪ್ತಿಯಲ್ಲಿ ತುಳಸಿ ಗಿಡ, ಬೇವಿನಮರ, ಮಾವಿನ ಮರ, ಎಕ್ಕದ ಗಿಡಗಳನ್ನು ಬೆಳೆಸಿ ಅವುಗಳಿಂದ ಶುದ್ಧ ಗಾಳಿ ಪಡೆದುಕೊಳ್ಳುತ್ತಿದ್ದರು ಎಂದು ಹೇಳಿದರು.
    ಸಮಾಜಸೇವಕ ಗೋಪಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಿಸಿದರೆ ವಿಸ್ಮಯಗಳನ್ನು ಕಾಣಬಹುದು. ಹುಲ್ಲುಕಡ್ಡಿಯಿಂದ ಮರಗಳವರೆಗೆ ಬೆಳವಣಿಗೆಯನ್ನು ಅಧ್ಯಯನ ಮಾಡಿ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
    ಶಾಲಾ ವಿದ್ಯಾರ್ಥಿಗಳು ನಿರ್ಮಿಸಿದ್ದ ಭದ್ರಾ ಅಣೆಕಟ್ಟೆ ಮಾದರಿ, ಕೊಳವೆಬಾವಿ ಕೊರೆಯುವ ವಾಹನ ಮುಂತಾದವುಗಳು ನೋಡುಗರ ಗಮನ ಸೆಳೆದವು. ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ, ಬೀದಿ ನಾಟಕ ಆಯೋಜಿಸಲಾಗಿತ್ತು.
    ಮುಖ್ಯಶಿಕ್ಷಕ ಜಯಣ್ಣ, ಲಿಂಗದಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಇಂದ್ರಾ, ಸದಸ್ಯೆ ನಾಗರತ್ನಾ ಭದ್ರಾಚಾರ್, ಶಿಕ್ಷಕರಾದ ಅನಿಲ್, ಗಿರೀಶ್, ನಾಗರಾಜಪ್ಪ, ಬಿ.ಸಿ.ಚಂದ್ರಶೇಖರ, ಎಸ್‌ಡಿಎಂಸಿ ಪದಾಧಿಕಾರಿಗಳು, ಪಾಲಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts