More

    ರೈತರ ಸೇವೆಯೇ ಗುರಿಯಾಗ ಬೇಕು

    ಕಡೂರು: ರೈತರು ಆರ್ಥಿಕ ಉನ್ನತಿ ಸಾಧಿಸಲು ಕೃಷಿಯಲ್ಲಿ ಸೂಕ್ತ ಜೀವನೋಪಾಯಗಳನ್ನು ಕಂಡುಕೊಳ್ಳುವ ಮಾರ್ಗದೊಂದಿಗೆ ರೈತರ ಸೇವೆಯೇ ಕೃಷಿ ವಿದ್ಯಾರ್ಥಿಗಳ ಗುರಿಯಾಗಬೇಕು ಎಂದು ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಹೇಮ್ಲನಾಯಕ್ ತಿಳಿಸಿದರು.
    ಪಿಳ್ಳೇನಹಳ್ಳಿ ಗ್ರಾಮದಲ್ಲಿ ಕೃಷಿ ವಿದ್ಯಾರ್ಥಿಗಳು ನಿರ್ಮಿಸಿದ್ದ ಮಾಹಿತಿ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಹಳ್ಳಿಯಲ್ಲಿ ರೈತರ ಏಳಿಗೆಗಾಗಿ ಶ್ರಮಿಸಬೇಕು, ರೈತರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸೂಕ್ತ ಪರಿಹಾರಗಳನ್ನು ಒದಗಿಸುವ ಕಡೆ ಗಮನಹರಿಸ ಬೇಕು. ರೈತರು ಸಮಾಜಕ್ಕೆ ನೀಡುವ ಕೊಡುಗೆ ಬಗ್ಗೆ ಜಾಗೃತಿ ಮೂಡಿಸುವುಸರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.
    ಕೃಷಿ ಪದ್ದತಿಯಲ್ಲಿ ಆಗಿರುವ ಬದಲಾವಣೆಗಳ ಸಮಗ್ರ ಚಿತ್ರಣವನ್ನು ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಕೃಷಿ ವಿಭಾಗದ ವಿದ್ಯಾರ್ಥಿಗಳು ಒಂದು ವಾರದಿಂದ ವಿವಿಧ ಗ್ರಾಮಗಳಲ್ಲಿ ಕೃಷಿ ಬೇಸಾಯ ಪದ್ದತಿಯಲ್ಲಿ ರೈತರೊಡನೆ ನಡೆಸಿದ ಸಂವಾದ ಕಾರ್ಯಗಾರಗಳು ಹೆಚ್ಚು ಪರಿಣಾಮಕಾರಿಯಾಗಿ ರೈತರ ಗಮನಸೆಳೆದಿರುವುದು ಶ್ಲಾಘನೀಯ ಎಂದರು.
    ಹಸಿರು ಕ್ರಾಂತಿಯಾದಾಗ ಆಹಾರ ಉತ್ಪಾದನೆ ಹೆಚ್ಚಿಸಲು ಸಂಪೂರ್ಣ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು, ನಂತರ ಅರ್ಧ ರಾಸಾಯನಿಕ ಅರ್ಧ ಸಾವಯವ ಕೃಷಿಯತ್ತ ಮುಖ ಮಾಡಿದರು, ಮುಂದುವರಿದಂತೆ ಆರೋಗ್ಯದ ಕಾಳಜಿಯಿಂದ ಜನರು ಸಾವಯವ ಕೃಷಿಯತ್ತ ಹೆಚ್ಚು ಮುಖ ಮಾಡಲು ಆರಂಭಿಸಿದರು. ಇಂದು ನೈಸರ್ಗಿಕ ಕೃಷಿಯವರೆಗೂ ಕೃಷಿ ಪದ್ಧತಿಗಳು ಬಂದು ನಿಂತಿವೆ. ಹೆಚ್ಚು ರೈತರು ಸಾವಯವ ಕೃಷಿ ಕಡೆಗೆ ಮುಖಮಾಡಿರುವುದಿಂದ ಮಣ್ಣನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ನೀಡಬಹುದು ಎಂದು ರೈತರಿಗೆ ಸಲಹೆ ನೀಡಿದರು.ಪಿಳ್ಳೇನಹಳ್ಳಿ,ಹುಲಿಕೆರೆ, ಕೇತುಮಾರನಹಳ್ಳಿ, ಬ್ಯಾಡರಹಳ್ಳಿ, ಕುನ್ನಾಳು , ಐದು ಹಳ್ಳಿಗಳ ಮಾಹಿತಿ ಕೇಂದ್ರಗಳಿಗೆ ಭೇಟಿ ವಿದ್ಯಾರ್ಥಿಗಳ ಕಾರ್ಯವೈಖರಿ ಪರಿಶೀಲಿಸಿದರು. ಮಾಹಿತಿ ಕೇಂದ್ರದ ಮಾದರಿಗಳನ್ನು ಗಮನಿಸಿ ಅದರಲ್ಲಿ ಬೇಕಾಗಿರುವ ಸುಧಾರಣಾ ಕ್ರಮಗಳು ಮತ್ತು ವಿದ್ಯಾರ್ಥಿಗಳ ಕಾರ್ಯಕ್ಷಮತೆ ಬಗ್ಗೆ ಪ್ರಶಂಸಿದರು.
    ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸಂಕಲ್ಪ, ಡಾ. ಮಲ್ಲಿಕಾ ಹಾಗೂ ಅಂತಿಮ ವರ್ಷದ ತೋಟಗಾರಿಕಾ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts