More

    ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ, ಆರೋಪ ಮಾಡೋದನ್ನ ಬಿಟ್ಟು ಸಹಕಾರ ಮಾಡಿ

    ಮೈಸೂರು: ಕರೊನಾ ನಿಯಂತ್ರಣಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಕಾನೂನು ಬಾಹಿರ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಸಂಸದ ಪ್ರತಾಪ್​ ಸಿಂಹ ಪ್ರತಿಕ್ರಿಯಿಸಿದ್ದಾರೆ. ನಮ್ಮ ರಾಜ್ಯದ ಆಡಳಿತ ಯಂತ್ರ ಕುಸಿದಿದೆ. ಈ ವೇಳೆ ಆರೋಪ ಮಾಡುವುದನ್ನು ಬಿಟ್ಟು ಸಹಕಾರ ಮಾಡಬೇಕು ಎಂದು ಹೇಳಿದ್ದಾರೆ.

    ಟಾಸ್ಕ್​ ಫೋರ್ಸ್ ಎನ್ನುವುದು ಜನಪ್ರತಿನಿಧಿಗಳಿಗೆ ಟಿಎ, ಡಿಎ, ಕಾರು ಕೊಡುವಂತಹ ಹುದ್ದೆಯಲ್ಲ. ಇದು ಕರೊನಾ ನಿಯಂತ್ರಿಸುವ ಸಲುವಾಗಿ ನಾವೇ ಸೇವೆ ಸಲ್ಲಿಸಲು ಮಾಡಿಕೊಂಡಿರುವ ಟಾಸ್ಕ್. ಆಡಳಿತದಲ್ಲಿ ವೈಫಲ್ಯ ಕಂಡಾಗ ನಾವು ತೆಗೆದುಕೊಂಡಿರುವ ನಿರ್ಧಾರ. ಜನ ಪ್ರತಿನಿಧಿಗಳು ಜನರಿಗಾಗಿ ದುಡಿಯುವ ಕೆಲಸ ಮಾಡಬೇಕಿದೆ. ಇದಕ್ಕೆ ಸಂಘ, ಸಂಸ್ಥೆಗಳ ಸಹಕಾರವೂ ಇದೆ. ಇದು ನಮ್ಮ ಜವಾಬ್ದಾರಿ ಅಷ್ಟೆ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆ ಕಾರಣಕ್ಕೆ ನಾವೇ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಕರೊನಾಗೆ ಕಡಿವಾಣ ಹಾಕಲು, ಜಿಲ್ಲಾಡಳಿತಕ್ಕೆ ಸಹಕರಿಸುತ್ತಿದ್ದೇವೆ. ಇದರ ಬಗ್ಗೆ ಆರೋಪ ಮಾಡೋದಲ್ಲ, ಸಹಕಾರ ನೀಡಿ. ನಮ್ಮ ಜನರ ಉಳಿವಿಗಾಗಿ ನಾವೇ ಸೇವೆ ಸಲ್ಲಿಸಲು ಮುಂದಾಗಿದ್ದೇವೆ. ಎಲ್ಲದಕ್ಕೂ ಟೀಕೆ ಮಾಡುವವರು ಮುಂದೆ ಬರಲಿ. ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡಲು ರೆಡಿ ಇದ್ದೇವೆ ಎಂದು ಅವರು ಹೇಳಿದ್ದಾರೆ.

    ನಮ್ಮ ಸರ್ಕಾರ ಬರೋಕೆ ನಮ್ಮ ಕಾರ್ಯಕರ್ತರು ಚಿತ್ರನ್ನ, ಮೊಸರನ್ನ ತಿಂದು ಬಾವುಟ ಕಟ್ಟಿದ್ದಾರೆ. ತಮ್ಮ ಮನೆಯಿಂದ ದುಡ್ಡು ಹಾಕಿ ಪ್ರಚಾರ ಮಾಡಿದ್ದಾರೆ. ಅವರ ಶ್ರಮದಿಂದ 106 ಜನ ಬಿಜೆಪಿ‌ ಶಾಸಕರು ಆಯ್ಕೆಯಾದರು. ಅವರು ಗೆದ್ದಿದ್ದಕ್ಕೇನೆ ಉಳಿದವರು ಬಂದು ಸೇರಿಕೊಂಡಿದ್ದು. 106 ಜನರೇ ಇಲ್ಲದಿದ್ದಿದ್ರೆ ಸರ್ಕಾರ ಎಲ್ಲಾಗುತ್ತಿತ್ತು? ನಾವು ಕೆಲಸ ಮಾಡ್ತಿದ್ದೇವೆ‌, ಹಾಗೆಯೇ ಹೊರಗಿನಿಂದ ಬಂದವರೂ ಕೆಲಸ ಮಾಡ್ತಿದ್ದಾರೆ. ಎಲ್ಲವನ್ನು‌ ನಿಭಾಯಿಸುತ್ತಿರುವ ಬಿಎಸ್‌ವೈ ಒಬ್ಬ ಸಮರ್ಥ ಲೀಡರ್ ಆಗಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಇಷ್ಟು ಶ್ರಮದಿಂದ ಕೆಲಸ ಮಾಡುವ ನಾಯಕನನ್ನು ನಾನು ನೋಡೇ ಇಲ್ಲ ಎಂದು ಸಂಸದರು ಹೇಳಿದ್ದಾರೆ. ಸಿಎಂ ನಾಯಕತ್ವ ಬದಲಾವಣೆ ಬಗ್ಗೆ ನನಗೇನು ಗೊತ್ತಿಲ್ಲ ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

    ಮದುವೆ ಮಂಟಪದಲ್ಲಿದ್ದ ವರನನ್ನು ಎಳೆದೊಯ್ದ ಪೊಲೀಸ್​! ಅಷ್ಟಕ್ಕೂ ಅಲ್ಲಾಗಿದ್ದಾದರೂ ಏನು?

    ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts