More

    2026ರ ಫಿಫಾ ವಿಶ್ವಕಪ್‌ಗೆ ಡೇಟ್ ಫಿಕ್ಸ್: ನ್ಯೂ ಜೆರ್ಸಿಯಲ್ಲಿ ಫೈನಲ್ ಪಂದ್ಯ

    ನ್ಯೂಯಾರ್ಕ್: ಮುಂಬರುವ 2026ರ ಫಿಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಆತಿಥ್ಯ ಅಮೆರಿಕದ ನ್ಯೂ ಜೆರ್ಸಿಯ ಮೆಟ್‌ಲ್ೈ ಸ್ಟೇಡಿಯಂಗೆ ಒಲಿದಿದೆ. ಇದೇ ಮೊದಲ ಮೊದಲ ಬಾರಿಗೆ 48 ರಾಷ್ಟ್ರಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, ಮೆಕ್ಸಿಕೊದ ಎಸ್ಟಾಡಿಯೊ ಅಜ್‌ಟೆಕ್ ಕ್ರೀಡಾಂಗಣಲ್ಲಿ ಜೂನ್ 11ರಂದು ಟೂರ್ನಿಗೆ ಚಾಲನೆ ದೊರೆಯಲಿದ್ದು, ಜುಲೈ 19ರಂದು ೈನಲ್ ಪಂದ್ಯ ನಿಗದಿಯಾಗಿದೆ. ಮೆಕ್ಸಿಕೊ, ಅಮೆರಿಕ ಹಾಗೂ ಕೆನಡ ದೇಶಗಳು ಟೂರ್ನಿಗೆ ಜಂಟಿ ಆತಿಥ್ಯ ವಹಿಸಿವೆ. 39 ದಿನಗಳ 20ನೇ ಆವೃತ್ತಿಯ ಜಾಗತಿಕ ುಟ್‌ಬಾಲ್ ಹಬ್ಬ 3 ರಾಷ್ಟ್ರಗಳ ಒಟ್ಟು 16 ತಾಣಗಳಲ್ಲಿ ಆಯೋಜನೆಗೊಂಡಿದೆ.

    ತಂಡಗಳ ಸಂಖ್ಯೆ ಹೆಚ್ಚಾದಂತೆ ಈ ಬಾರಿ ಪಂದ್ಯಗಳ ಸಂಖ್ಯೆಯೂ 108ಕ್ಕೆ ಏರಿಕೆಯಾಗಲಿವೆ. ಕಳೆದ ಬಾರಿ ಕತಾರ್‌ನಲ್ಲಿ ನಡೆದ ಟೂರ್ನಿಯಲ್ಲಿ 32 ತಂಡಗಳು 64 ಪಂದ್ಯಗಳನ್ನು ಆಡಿದ್ದವು.ಮೆಕ್ಸಿಕೊ 3ನೇ ಬಾರಿ ಟೂರ್ನಿಗೆ ಆತಿಥ್ಯವಹಿಸಿದ್ದು, ಅಮೆರಿಕ ಹಾಗೂ ಕೆನಡ ಚೊಚ್ಚಲ ಬಾರಿ ಫಿಾ ಪಂದ್ಯಗಳನ್ನು ಆಯೋಜಿಸಲಿವೆ. ಡಲ್ಲಾಸ್, ಅಟ್ಲಾಂಟದಲ್ಲಿ ಸೆಮಿೈನಲ್ ಮತ್ತು ಲಾಸ್ ಏಂಜಲಿಸ್, ಕಾನ್ಸಾಸ್ ಸಿಟಿ, ಮಿಯಾಮಿ ಮತ್ತು ಬೋಸ್ಟನ್‌ನಲ್ಲಿ ಕ್ವಾರ್ಟರ್‌ೈನಲ್ ಸುತ್ತಿನ ಪಂದ್ಯ ನಡೆಯಲಿವೆ.

    ಕೆನಡ ಹಾಗೂ ಮೆಕ್ಸಿಕೊದಲ್ಲಿ 10 ಲೀಗ್ ಪಂದ್ಯಗಳು ಸೇರಿ ತಲಾ 13 ಪಂದ್ಯಗಳು ನಿಗದಿಯಾಗಿದ್ದು, ಉಳಿದ ಪಂದ್ಯಗಳು ಅಮೆರಿಕದ 11 ನಗರಗಳಲ್ಲಿ ನಡೆಯಲಿವೆ. ಉದ್ಘಾಟನಾ ಪಂದ್ಯ ನಡೆಯಲಿರುವ ಮೆಕ್ಸಿಕೊದ ಎಸ್ಟೆಡಿಯೊ ಅಜ್‌ಟೆಕಾ ಕ್ರೀಡಾಂಗಣ 83 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು, ಮೂರು ವಿಶ್ವಕಪ್ ಆವೃತ್ತಿಗೆ ಆತಿಥ್ಯವಹಿಸಿದ್ದ ಮೊದಲ ದೇಶ ಎನಿಸಲಿದೆ. 1970 ಹಾಗೂ 1986ರ ೈನಲ್ ಪಂದ್ಯಗಳನ್ನು ಇದೇ ಅಂಗಣದಲ್ಲಿ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts