More

    ಟಿಎಚ್‌ಡಿಸಿಯಲ್ಲಿ ನೇಮಕಾತಿ; 100 ಹುದ್ದೆಗಳು, ಆಯ್ಕೆ ಪ್ರಕ್ರಿಯೆ, ವೇತನ, ಅರ್ಹತೆ ವಿವರ

    ಬೆಂಗಳೂರು: ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಟಿಎಚ್‌ಡಿಸಿ) ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ. ತೆಹ್ರಿ ಹೈಡ್ರೋ ಪವರ್ ಕಾಂಪ್ಲೆಕ್ಸ್ ಮತ್ತು ಜಲವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸಿ, ನಿರ್ವಹಿಸುವ ಸಲುವಾಗಿ ಜುಲೈ 1988ರಲ್ಲಿ ಇದನ್ನು ಸ್ಥಾಪಿಸಲಾಯಿತು. ಪ್ರಸ್ತುತ ಈ ಸಂಸ್ಥೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

    ಒಟ್ಟು ಹುದ್ದೆಗಳು: 100

    ಹುದ್ದೆಗಳ ವಿವರ
    ಗ್ರ್ಯಾಜುಯೆಟ್ ಆ್ಯಂಡ್ ಟೆಕ್ನೀಷಿಯನ್ ಅಪ್ರೆಂಟೀಸ್

    ವಿದ್ಯಾರ್ಹತೆ
    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾ ಸಂಸ್ಥೆಯಿಂದ ಬಿಇ, ಬಿ.ಟೆಕ್/ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

    ವಯೋಮಿತಿ
    ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷವಾಗಿದ್ದು, ಗರಿಷ್ಠ ವಯಸ್ಸು ಸಾಮಾನ್ಯ/ಇಡಬ್ಲ್ಯುಎಸ್ ವರ್ಗದ ಅಭ್ಯರ್ಥಿಗಳಿಗೆ 27 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ, ಬುಡಕಟ್ಟು ಜನಾಂಗದವರಿಗೆ 32 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ನಿಗದಿಪಡಿಸಲಾಗಿದೆ.

    ವೇತನ
    ಪದವೀಧರ ಅಪ್ರೆಂಟೀಸ್ ಹುದ್ದೆಗೆ 9000ರೂ.,ಟೆಕ್ನೀಷಿಯನ್ ಅಪ್ರೆಂಟೀಸ್ ಹುದ್ದೆಗೆ 8000ರೂ. ಮಾಸಿಕ ವೇತನ ಇರಲಿದೆ.

    ಆಯ್ಕೆ ಪ್ರಕ್ರಿಯೆ
    ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಸಲ್ಲಿಸಲು ಕೊನೇ ದಿನ
    15-03-2024

    ಹೆಚ್ಚಿನ ಮಾಹಿತಿಗಾಗಿ 
    https://thdc.co.in/.

    ಅಧಿಸೂಚನೆಗೆ

    ದೊಡ್ಡ ಅಪ್​​​ಡೇಟ್ ಕೊಟ್ಟ ಗೂಗಲ್‌ ಸಿಇಒ; ಕೊನೆಗೂ ಮೌನ ಮುರಿದ ಸುಂದರ್‌ ಪಿಚೈ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts