ಜೈಪುರ: ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ವೇಳೆ ಬ್ಯಾಟರ್ ಮಾರ್ಟಿನ್ ಗುಪ್ಟಿಲ್ ಮತ್ತು ವೇಗಿ ದೀಪಕ್ ಚಹರ್ ನಡುವಿನ ದೃಷ್ಟಿ ಸಮರ ಸಾಕಷ್ಟು ಗಮನ ಸೆಳೆಯಿತು.
ಕಿವೀಸ್ ತಂಡಕ್ಕೆ ಆಸರೆಯಾಗಿ ಭರ್ಜರಿ ಅರ್ಧಶತಕ ಸಿಡಿಸಿದ ಮಾರ್ಟಿನ್ ಗುಪ್ಟಿಲ್, ಇನಿಂಗ್ಸ್‌ನ 17ನೇ ಓವರ್ ಎಸೆಯಲು ಬಂದ ದೀಪಕ್ ಚಹರ್ ಅವರ ಮೊದಲ ಎಸೆತದಲ್ಲಿ ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್ ಸಿಡಿಸಿದರು. ಇದರ ಬೆನ್ನಲ್ಲೇ ದೀಪಕ್ ಚಹರ್ ಅವರನ್ನು ಗುಪ್ಟಿಲ್ ದುರುಗುಟ್ಟಿ ನೋಡಿದರು.
ಮರು ಎಸೆತದಲ್ಲೇ ಗುಪ್ಟಿಲ್ ಅವರನ್ನು ಔಟ್ ಮಾಡಿದ ದೀಪಕ್ ಚಹರ್ ಸೇಡು ತೀರಿಸಿಕೊಂಡಿದ್ದಲ್ಲದೆ, ಅವರೂ ಗುಪ್ಟಿಲ್‌ರನ್ನು ದಿಟ್ಟಿಸಿ ನೋಡಿದರು. ಗುಪ್ಟಿಲ್ ಸತತ 2ನೇ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿದ್ದ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ನೀಡಿ ಕೈಸುಟ್ಟುಕೊಂಡರು. ಗುಪ್ಟಿಲ್-ದೀಪಕ್ ನಡುವಿನ ಈ ಜಟಾಪಟಿ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಮನರಂಜನೆ ಉಣಬಡಿಸಿತು.
https://twitter.com/therealdheera/status/1461031782493556741
https://twitter.com/cl_me_deep/status/1461024442566414337
Revenge 😎🔥@deepak_chahar9 @BCCI pic.twitter.com/pjoQNBouUF
— Bapi Das (@BapiDas65706955) November 17, 2021
ದ್ರಾವಿಡ್-ರೋಹಿತ್ ಜೋಡಿ ಶುಭಾರಂಭ; ಭಾರತಕ್ಕೆ ನ್ಯೂಜಿಲೆಂಡ್ ಎದುರು 5 ವಿಕೆಟ್ ಜಯ