More

    ತನುಶ್ರೀ ಮುಡಿಗೆ ಮತ್ತೊಂದು ವಿಶ್ವದಾಖಲೆ, 43 ನಿಮಿಷದಲ್ಲಿ 245 ಯೋಗಾಸನ !

    ಉಡುಪಿ: ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಮತ್ತೊಂದು ವಿಶ್ವ ದಾಖಲೆ ಮುಡಿಗೇರಿಸಿಕೊಂಡಿದ್ದಾರೆ. ನಲವತ್ತು ಮೂರು ನಿಮಿಷ 18 ಸೆಕೆಂಡ್‌ನಲ್ಲಿ 245 ಯೋಗಾಸನಗಳನ್ನು ಮಾಡುವ ಮೂಲಕ ಗೋಲ್ಡನ್‌ಬುಕ್ ಆಫ್ ರೆಕಾರ್ಡ್‌ನಲ್ಲಿ ಮತ್ತೊಂದು ಮಹತ್ವದ ವಿಶ್ವ ದಾಖಲೆ ಬರೆದಿದ್ದಾರೆ.

    75ನೇ ಸ್ವಾತಂತ್ರೊೃೀತ್ಸವ ಸವಿನೆನಪಿಗಾಗಿ ಭಾನುವಾರ ಶ್ರೀಕೃಷ ್ಣಮಠದ ರಾಜಾಂಗಣದಲ್ಲಿ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿತ್ತು. ದೇಶಾದ್ಯಂತ ಚಾಲ್ತಿಯಲ್ಲಿರುವ ಯೋಗದ 245 ಭಂಗಿಗಳನ್ನು ಒಂದೆಡೆ ಸೇರಿಸುವ ವಿಶಿಷ್ಟ ಪ್ರಯೋಗ ಇಲ್ಲಿ ನಡೆಯಿತು. 145ಕ್ಕೂ ಅಧಿಕ ಕ್ಲಿಷ್ಟಕರ ಯೋಗಾಸನ ಕ್ರಿಯೆಯನ್ನು ಲೀಲಜಾಲವಾಗಿ ಮಾಡುವ ಮೂಲಕ ವಿಶಿಷ್ಟ ದಾಖಲೆಪಟ್ಟವನ್ನು ಗಿಟ್ಟಿಸಿಕೊಂಡರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಏಷ್ಯಾ ವಿಭಾಗದ ಮುಖ್ಯಸ್ಥ ಡಾ.ಮನೀಷ್ ಬಿಶ್ನೋಯ್ ತನುಶ್ರೀ ಅವರಿಗೆ ವಿಶ್ವ ದಾಖಲೆ ಪ್ರಮಾಣಪತ್ರ ವಿತರಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಬಿಶ್ನೋಯ್, ನಾನು ಇಲ್ಲಿವರೆಗೆ ವಿವಿಧ ಬಗೆಯ ಎರಡು ಸಾವಿರ ದಾಖಲೆಗಳಿಗೆ ಸಾಕ್ಷಿಯಾಗಿದ್ದೇನೆ. ತನುಶ್ರೀಯ ಈ ಸಾಧನೆ ಅದ್ಬುತ ಎಂದು ಬಣ್ಣಿಸಿದರು. ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗದ, ನೂರು ದಾಖಲೆಗೆ ಸಮವಾಗಿರುವ ದಾಖಲೆ ಇದಾಗಿದೆ ಎಂದು ಶ್ಲಾಘಿಸಿದರು. ಈಗಾಗಲೇ ಹಲವು ದಾಖಲೆಗಳ ಯೋಗ ಪ್ರದರ್ಶನ ಮಾಡಿರುವ ತನುಶ್ರೀ, ಕಿರಿಯ ವಯಸ್ಸಿನಲ್ಲಿಯೇ ವಿಶಿಷ್ಟ ಯೋಗ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ. ಉದ್ಯಾವರ ಪಿತ್ರೋಡಿ ಉದಯ್ ಕುಮಾರ್ ಮತ್ತು ಸಂಧ್ಯಾ ದಂಪತಿ ಪುತ್ರಿ ತನುಶ್ರೀ ಉಡುಪಿಯ ಸೇಂಟ್ ಸಿಸಿಲಿಯಕನ್ನಡ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.

    ಅದಮಾರು ಪರ್ಯಾಯ ಶ್ರೀ ಈಶಪ್ರಿಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts