More

    ಸ್ಫೂರ್ತಿ ತುಂಬುವ ತನುಜಾ; ವಿಜಯವಾಣಿ ಸಿನಿಮಾ ವಿಮರ್ಶೆ

    • ಚಿತ್ರ: ತನುಜ
    • ನಿರ್ದೇಶನ: ಹರೀಶ್ ಎಂ.ಡಿ. ಹಳ್ಳಿ
    • ನಿರ್ಮಾಣ: ಚಂದ್ರಶೇಖರ ಗೌಡ, ಮನೋಜ್ ಬಿ.ಜಿ
    • ತಾರಾಗಣ: ಸಪ್ತ ಪಾವೂರು, ರಾಜೇಶ್ ನಟರಂಗ, ಸಂಧ್ಯಾ ಅರೆಕೆರೆ ಮುಂತಾದವರು

    | ಚೇತನ್ ನಾಡಿಗೇರ್ ಬೆಂಗಳೂರು

    ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ದೇಶವೇ ತತ್ತರಿಸಿತ್ತು. ಇಂಥ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಹುಡುಗಿಯೊಬ್ಬಳು ನೀಟ್ ಪರೀಕ್ಷೆ ಬರೆಯುವುದಕ್ಕೆ ಹರಸಾಹಸ ಮಾಡಿದ್ದು, ಅವಳಿಗೆ ಖುದ್ದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್ ಆಕೆಯ ಬೆನ್ನಿಗೆ ನಿಂತು, ಆಕೆ ಪರೀಕ್ಷೆ ಬರೆಯುವಂತೆ ನೋಡಿಕೊಂಡಿದ್ದರು. ಆ ಘಟನೆಯೇ, ಈಗ ‘ತನುಜಾ’ ಆಗಿ ಪ್ರೇಕ್ಷಕರ ಮುಂದೆ ಬಂದಿದ್ದಾಳೆ.

    ‘ತನುಜಾ’ ಒಂದು ಸ್ಪೂರ್ತಿದಾಯಕ ಸಿನಿಮಾ. ಗಟ್ಟಿ ಮನಸ್ಸು ಮಾಡಿ, ದಿಟ್ಟ ಹೆಜ್ಜೆ ಇಟ್ಟರೆ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳುವ ಸಿನಿಮಾ ಇದು. ಒಂದೊಳ್ಳೆಯ ಸದುದ್ದೇಶಕ್ಕೆ ಹೇಗೆ, ನೆರವು ಸಿಗುತ್ತದೆ ಎಂದು ಸಾರುವ ಸಿನಿಮಾ ಇದು. ಒಬ್ಬ ಸಾಮಾನ್ಯ ಮನುಷ್ಯನಿಗೆ ಆಡಳಿತ ವ್ಯವಸ್ಥೆ ನೆರವಾದರೆ ಏನೆಲ್ಲ ಮಾಡಬಹುದು ತೋರಿಸುವ ಸಿನಿಮಾ ಇದು. ಬರೀ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಸ್ಪೂರ್ತಿಯಾಗಬಲ್ಲ ಸಿನಿಮಾ ಇದು.

    ಘಟನೆಯ ಬಗ್ಗೆ ಹೇಳಿದ ಮೇಲೆ, ಮತ್ತೊಮ್ಮೆ ಚಿತ್ರದ ಕಥೆ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ, ಆ ಘಟನೆಯಷ್ಟನ್ನೇ ಇಟ್ಟುಕೊಂಡು ಚಿತ್ರ ಮಾಡಿದ್ದಾರೆ ನಿರ್ದೇಶಕ ಹರೀಶ್ ಎಂ.ಡಿ. ಹಳ್ಳಿ. ಇದನ್ನು ಹೊರತುಪಡಿಸಿ ಎರಡು ಫ್ಲಾಶ್​ಬ್ಯಾಕ್ ಇದೆಯಾದರೂ, ಅದು ಸಹ ಕಥೆಗೆ ಪೂರಕವಾಗಿದೆ. ಹಾಗಾಗಿ, ತನುಜಾ ಎಂಬ ಹುಡುಗಿಗೆ ನೀಟ್ ಪರೀಕ್ಷೆ ಬರೆಯುವುದಕ್ಕೆ ಹಾಲ್​ಟಿಕೇಟ್ ಸಿಗಲಿಲ್ಲ ಎಂಬಲ್ಲಿಂದ ಪ್ರಾರಂಭವಾಗುವ ಕಥೆ, ಮರುದಿನ ಆಕೆ ಪರೀಕ್ಷೆೆ ಬರೆಯುವಲ್ಲಿಗೆ ಮುಕ್ತಾಯವಾಗುತ್ತದೆ. ಕಥೆ ಕೇಳಿದರೆ ಇದೊಂದು ಕಲಾತ್ಮಕ ಚಿತ್ರ ಎಂದನಿಸಬಹುದು. ಹಾಗನ್ನಿಸಬಹುದಾದ ಕಥೆಗೆ ರೋಚಕತೆಯ ಸ್ಪರ್ಶ ಕೊಟ್ಟು ಕಮರ್ಷಿಯಲ್ ಆಗಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ ಎನ್ನಬಹುದು.

    ತನುಜಾ ಪರೀಕ್ಷೆ ಬರೆಯಲು ಶಿವಮೊಗ್ಗದಿಂದ ಬೆಂಗಳೂರಿಗೆ ಬರುವ ಪ್ರಯಾಣದ ಹಾದಿಯನ್ನು ಕಟ್ಟಿಕೊಡುವ ಮೂಲಕ ಕುತೂಹಲವನ್ನು ಹೆಚ್ಚಿಸುತ್ತಾರೆ. ಆಗಾಗ ನಿಧಾನ ಎನ್ನುವುದನ್ನು ಬಿಟ್ಟರೆ, ಬರೀ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಏನಾದರೂ ಸಾಧಿಸಬೇಕು ಎಂಬ ತುಡಿತ ಇರುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುವಂತಹ ಸಿನಿಮಾ ಇದು. ‘ತನುಜಾ’ ಪಾತ್ರಧಾರಿ ಸಪ್ತಾ ಪಾವೂರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಜೇಶ್ ನಟರಂಗ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಸಂಧ್ಯಾ ಅರಕೆರೆ ಸಹ ಸೂಕ್ತ ಬೆಂಬಲ ನೀಡಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಸುಧಾಕರ್, ಪತ್ರಕರ್ತ ವಿಶ್ವೇಶ್ವರ ಭಟ್ ತೆರೆಯ ಮೇಲೂ ತಾವಾಗಿಯೇ ಮತ್ತು ನಿಜಜೀವನ ದಲ್ಲಿರು ವಂತೆಯೇ ನೈಜವಾಗಿ ಕಾಣಿಸಿಕೊಂಡಿದ್ದಾರೆ.

    ರಾಜ್ಯಕ್ಕೆ ಎದುರಾಗಿದೆ ಒಂದು ಹೊಸ ಆತಂಕ; ಸರ್ಕಾರದ ಮೊರೆ ಹೋದ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಸಂಘ

    ಗೆಳೆಯನ ಕೊಂದು ಶವ ಎಸೆಯುವಾಗ ತಾನೂ ಪ್ರಪಾತಕ್ಕೆ ಬಿದ್ದು ಹೆಣವಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts