More

    ಶವಾಗಾರದಲ್ಲಿದ್ದ ಮೃತ ಸೋಂಕಿತ ಏಕಾಏಕಿ ಕಾಣೆ- ಪತ್ತೆಯಾದದ್ದು ಸ್ಮಶಾನದಲ್ಲಿ!

    ಮುಂಬೈ: ನಿಮ್ಮ ತಂದೆ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಬಂದ ಶವ ತೆಗೆದುಕೊಂಡು ಹೋಗಿ ಎಂದು ಬಾಲಚಂದ್ರ ಗಾಯಕ್‌ವಾಡ್ ಎಂಬ ವೃದ್ಧರೊಬ್ಬರ ಮಗನಿಗೆ ಈ ಆಸ್ಪತ್ರೆಯಿಂದ ಕರೆ ಬಂದಿದೆ. ತಂದೆ ಸತ್ತ ನೋವಿನಲ್ಲಿಯೇ ಅವರ ಮಗ ಆಸ್ಪತ್ರೆಗೆ ಶವವನ್ನು ಪಡೆಯಲು ಹೋದರೆ ಶವಾಗಾರದಲ್ಲಿ ಆ ವ್ಯಕ್ತಿಯೇ ಕಾಣೆ!

    ಅಲ್ಲಿದ್ದ ಎಲ್ಲಾ ಶವಗಳನ್ನು ನೋಡಿದರೂ, ಗಾಯಕ್‌ವಾಡ್‌ ಮಾತ್ರ ಕಾಣಿಸಲಿಲ್ಲ. ಶವಕ್ಕಾಗಿ ಸಿಬ್ಬಂದಿ ಹುಡುಕಾಟ ನಡೆಸತೊಡಗಿದರು.

    ಅದೇ ಇನ್ನೊಂದೆಡೆ, ಸಂತೋಷ್ ಸೋನಾವಾನೆ ಎಂಬ ವ್ಯಕ್ತಿ ಕೋವಿಡ್ ಸೊಂಕಿನಿಂದ ಮೃತಪಟ್ಟ ಬಗ್ಗೆ ಅವರ ಮನೆಯವರಿಗೆ ಕರೆ ಹೋಗಿದೆ. ಅವರು ಆಸ್ಪತ್ರೆಗೆ ಬಂದು ಆಸ್ಪತ್ರೆಯಿಂದ ಕೊಟ್ಟಿರುವ ಶವವನ್ನು ಪಡೆದು, ಎಲ್ಲಾ ಮಾರ್ಗಸೂಚಿ ಅನ್ವಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

    ಇದನ್ನೂ ಓದಿ: 2021ರ ಕರೊನಾದ ಭಯಾನಕ ಭವಿಷ್ಯ ನುಡಿದ ಅಮೆರಿಕದ ಸಂಶೋಧಕರು!

    ಇತ್ತ, ಗಾಯಕ್‌ವಾಡ್‌ ಅವರ ಶವ ನಾಪತ್ತೆಯಾಗುತ್ತಿರುವ ಕುರಿತು ವಿಚಾರಣೆ ನಡೆಸಿದಾಗ ಸಂತೋಷ್‌ ಸೋನಾವಾನೆ ಅವರ ಕುಟುಂಬಕ್ಕೆ ಗಾಯಕ್‌ವಾಡ್‌ ಅವರ ಶವ ಹಸ್ತಾಂತರಿಸಿರುವ ವಿಷಯ ಬೆಳಕಿಗೆ ಬಂದಿದೆ. ಈ ಆಸ್ಪತ್ರೆಯ ಎಡವಟ್ಟು ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಿಬ್ಬಂದಿ ಗಾಯಕ್‌ವಾಡ್‌ ಅವರ ಮನೆಯವರಿಗೆ ತಮ್ಮಿಂದಾಗಿರುವ ತಪ್ಪಿನ ಬಗ್ಗೆ ಹೇಳಿದ್ದಾರೆ.
    ನಂತರ ಪುರಸಭೆಯವರು ಶವವನ್ನು ಹಸ್ತಾಂತರ ಮಾಡುವಾಗ ಆದ ಎಡವಟ್ಟು ಇದು ಎಂದು ತಿಳಿದುಬಂದಿದೆ. ಪುರಸಭೆ ಸಿಬ್ಬಂದಿ ಕ್ಷಮೆ ಕೋರಿದ್ದಾರೆ.

    ನಂತರ ಸಂತೋಷ್‌ ಸೋನಾವಾನೆ ಅವರ ಮನೆಗೆ ಹೋಗಿ ಅಂತ್ಯಕ್ರಿಯೆ ನಡೆಸಿರುವ ಸ್ಮಶಾನಕ್ಕೆ ಹೋಗಿ ಗಾಯಕ್‌ವಾಡ್‌ ಕುಟುಂಬ ಕಂಬನಿ ಹರಿಸಿದೆ. ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಶವಾಗಾರದಿಂದ ನಾಪತ್ತೆಯಾಗಿದ್ದ ಗಾಯಕ್‌ವಾಡ್‌ ಅವರ ಶವ ಅಂತೂ ಸ್ಮಶಾನದಲ್ಲಿ ಅಂತ್ಯಸಂಸ್ಕಾರಗೊಂಡಿದೆ ಎಂದು ತಿಳಿದುಬಂತು.

    ಇದೇನೋ ಆಯಿತು. ಹಾಗಿದ್ದರೆ ತಾವು ಅಂತ್ಯಸಂಸ್ಕಾರ ನೆರವೇರಿಸಿದ್ದು, ಬೇರೆಯವರದ್ದಾಗಿದ್ದರೆ, ತಮ್ಮ ತಂದೆ ಎಲ್ಲಿ ಎಂದು ಸಂತೋಷ್‌ ಸೋನಾವಾನೆ ಅವರ ಮಗ ಕೇಳಿದ್ದಕ್ಕೆ, ಆಸ್ಪತ್ರೆಯವರು ನಿಮ್ಮ ತಂದೆ ಬದುಕಿದ್ದಾರೆ ಎಂದಿದ್ದಾರೆ. ಕುಟುಂಬಸ್ಥರು ತುಂಬಾ ಖುಷಿಯಿಂದ ಪುನಃ ಆಸ್ಪತ್ರೆಗೆ ಕರೆ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದಾಗ, ಆಸ್ಪತ್ರೆಯಿಂದ ಇಲ್ಲ ಕ್ಷಮಿಸಿ, ನಿಮ್ಮ ತಂದೆಯವರು ಮೃತಪಟ್ಟಿದ್ದಾರೆ ಎಂದು ಅವರ ಶವವನ್ನು ಕುಟುಂಬದವರಿಗೆ ನೀಡಿದ್ದಾರೆ!

    ಮಹಾಕಾಳ ದೇವಾಲಯದ ಸಮೀಪವೇ ಮಹಾ ಪಾತಕಿ ದುಬೆ ಅರೆಸ್ಟ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts