More

    ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ, ಎಂಟರಘಟ್ಟಕ್ಕೇರಿದ ಪಿವಿ ಸಿಂಧು, ಸಮೀರ್ ವರ್ಮ

    ಬ್ಯಾಂಕಾಕ್: ವಿಶ್ವ ಚಾಂಪಿಯನ್ ಪಿವಿ ಸಿಂಧು ಹಾಗೂ ಸಮೀರ್ ವರ್ಮ ಟೊಯೊಟಾ ಥಾಯ್ಲೆಂಡ್ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎಂಟರಘಟ್ಟಕ್ಕೇರಿದ್ದಾರೆ. ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ಸಾಯಿರಾಜ್ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮುನ್ನಡೆ ಸಾಧಿಸಿದರೆ, ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟ ರ್ ಫೈನಲ್‌ಗೇರಿತು. ಕಳೆದ ವಾರ ನಡೆದ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದ 6ನೇ ಶ್ರೇಯಾಂಕಿತ ಆಟಗಾರ್ತಿ ಪಿವಿ ಸಿಂಧು 21-10, 21-12 ನೇರ ಗೇಮ್‌ಗಳಿಂದ ಮಲೇಷ್ಯಾದ ಕಿಸೊನಾ ಸೆಲ್ವಾದುರೇ ಅವರನ್ನು ಸುಲಭವಾಗಿ ಸೋಲಿಸಿದರು.

    ಇದನ್ನೂ ಓದಿ: VIDEO: ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿ ತವರಿಗೆ ಮರಳಿದ ಅಜಿಂಕ್ಯ ರಹಾನೆಗೆ ಅದ್ದೂರಿ ಸ್ವಾಗತ.., 

    ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸಮೀರ್ ವರ್ಮ ಭರ್ಜರಿ ನಿರ್ವಹಣೆ ಮುಂದುವರಿಸಿದ್ದು ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.17 ಡೆನ್ಮಾರ್ಕ್ ರಾಸ್ಮಸ್ ಗೆಮ್ಕೆ ಅವರನ್ನು ಸೋಲಿಸಿದರು. ವಿಶ್ವ ನಂ.31 ಭಾರತದ ಷಟ್ಲರ್ ಸಮೀರ್ ವರ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ 8ನೇ ಶ್ರೇಯಾಂಕಿತ ಲೀ ಜೀ ಜಿಯಾ ಅವರನ್ನು ಮಣಿಸಿದ್ದರು. ಎರಡನೇ ಸುತ್ತಿನ ಪಂದ್ಯದಲ್ಲಿ ಸಮೀರ್ ವರ್ಮ 21-12, 21-9 ನೇರ ಗೇಮ್‌ಗಳಿಂದ ಕೇವಲ 39 ನಿಮಿಷಗಳಿಂದ ಗೆಮ್ಕೆ ಅವರನ್ನು ಮಣಿಸಿದರು. ಮಲೇಷ್ಯಾ ಆಟಗಾರ ಎದುರು ಸಮೀರ್ ವರ್ಮ ದಾಖಲಿಸಿದ ಮೂರನೇ ಗೆಲುವು ಇದಾಗಿದೆ.

    ಇದನ್ನೂ ಓದಿ: ಬ್ರಿಸ್ಬೇನ್ ಹೀರೋ ರಿಷಭ್ ಪಂತ್ ಈಗ ವಿಶ್ವ ನಂ. 1 ವಿಕೆಟ್​ ಕೀಪರ್-ಬ್ಯಾಟ್ಸ್‌ಮನ್

    • ಕ್ವಾರ್ಟರ್ ಫೈನಲ್‌ಗೆ ಅಶ್ವಿನಿ ಪೊನ್ನಪ್ಪ ಜೋಡಿ 

    ಮಿಶ್ರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್‌ಸಾಯಿರಾಜ್ ಜೋಡಿ 22-20, 14-21, 21-16 ಗೇಮ್‌ಗಳಿಂದ ವಿಶ್ವ ನಂ.17 ಜರ್ಮನಿಯ ಮಾರ್ಕ್ ಲ್ಯಾಮ್‌ಫೂಸ್ ಹಾಗೂ ಇಸಾಬೆಲ್ ಹೆರ್ಟಿಟ್ರಿಚ್ ಜೋಡಿಯನ್ನು ಸೋಲಿಸಿತು. ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ 21-18, 23-21 ರಿಂದ ಕೊರಿಯಾದ 7ನೇ ಶ್ರೇಯಾಂಕಿತ ಸೊಲ್‌ಗ್ಯೂ ಚೊಯಿ ಹಾಗೂ ಸೆಯುಗ್ ಜೇ ಜೋಡಿಯನ್ನು ಮಣಿಸಿತು. ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಎಚ್‌ಎಸ್ ಪ್ರಣಯ್ 17-21, 18-21 ರಿಂದ ಮಲೇಷ್ಯಾದ ಡರೆನ್ ಲೀವ್‌ಗೆ ಶರಣಾದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಎಂಆರ್ ಅರ್ಜುನ್-ಧ್ರುವ್ ಕಪಿಲಾ ಜೋಡಿ ಎರಡನೇ ಸುತ್ತಿನಲ್ಲೇ ಮುಗ್ಗರಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts