More

    ಸಿಂಗಾಪುರ ಓಪನ್ ಬ್ಯಾಡ್ಮಿಂಟನ್: ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಪಿ ವಿ ಸಿಂಧು

    ಸಿಂಗಾಪುರ: ಸಿಂಗಾಪುರ ಓಪನ್​ ಬ್ಯಾಡ್ಮಿಂಟನ್​ ಫೈನಲ್​ ಪಂದ್ಯದಲ್ಲಿ ಅಂತಿಮ ಸುತ್ತಿನಲ್ಲಿ ಚೀನಾದ ಆಟಗಾರ್ತಿ ವಾಂಗ್​ ಝಿ ಯಿ ಅವರನ್ನು ಮಣಿಸುವ ಮೂಲಕ ಭಾರತದ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ ವಿ ಸಿಂಧು ಸಿಂಗಾಪುರ ಓಪನ್​ ಸೂಪರ್​ 500 ಮಹಿಳೆಯರ ಸಿಂಗಲ್ಸ್​ನಲ್ಲಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಸಿಂಧು, 22 ವರ್ಷದ ವಾಂಗ್​ ಝಿ ಯಿ ಅವರನ್ನು 21-9,11-21,21-15 ಸೆಟ್​ಗಳಿಂದ ಮಣಿಸಿದ್ದಾರೆ.

    ಈ ವರ್ಷದಲ್ಲಿ ಸಿಂಧು ಅವರು ಪ್ರಶಸ್ತಿ ಗೆಲ್ಲುತ್ತಿರುವುದು ಇದು ಮೂರನೇ ಬಾರಿ. ಎರಡು ಒಲಂಪಿಕ್​ ಪದಕಗಳು ಮಾತ್ರವಲ್ಲದೇ ವಿಶ್ವ ಚಾಂಪಿಯನ್​ ಶಿಪ್​ನಲ್ಲಿ ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಸಿಂಧು ಪಡೆದುಕೊಂಡಿದ್ದಾರೆ. ಇದೇ ಜುಲೈ 28ರಂದು ಬರ್ಮಿಂಗ್ಹಾಮ್​ನಲ್ಲಿ ಆರಂಬವಾಗಲಿರುವ ಕಾಮನ್​ವೆಲ್ತ್​ ಗೇಮನಲ್ಲಿ ಪಿವಿ ಸಿಂಧು ಅವರಿಗೆ ಈ ಗೆಲುವು ಮತ್ತಷ್ಟು ಹುರುಪು ನೀಡಿದೆ. (ಏಜೆನ್ಸೀಸ್​)

    ಸಿಂಗಾಪುರ ಓಪನ್ ಬ್ಯಾಡ್ಮಿಂಟನ್: ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಪಿ ವಿ ಸಿಂಧು

     

    ಕಳಪೆ ಪ್ರದರ್ಶನದ ಬಗ್ಗೆ ಕೊನೆಗೂ ಮೌನ ಮುರಿದ ಕೊಹ್ಲಿ, ಟ್ವೀಟ್​ ಮಾಡಿ ಹೇಳಿದ್ದೇನು?

    3ನೇ ಮಗುವಿಗೆ ತಾಯಿಯಾಗಲಿದ್ದಾರಾ ಕರೀನಾ!: ಈ ಫೋಟೋ ಹೇಳೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts