More

    ಪಾಕಿಸ್ತಾನದ ಜಿಡಿಪಿಗಿಂತ ಈ ಒಬ್ಬನ ಆಸ್ತಿ ಹೆಚ್ಚು! ಹೊಸ ದಾಖಲೆ ಮಾಡಿದ ಟೆಸ್ಲಾ ಸಿಇಒ

    ನ್ಯೂಯಾರ್ಕ್​: ಇಂದು ಟೆಸ್ಲಾ ಕಂಪೆನಿ ಸಿಇಒ ಹಾಗೂ ಬಿಸಿನೆಸ್​ ಮಾಗ್ನೆಟ್ ಎಲಾನ್​ ಮಸ್ಕ್​ 300 ಬಿಲಿಯನ್​ ಡಾಲರ್​ಗಳಿಗಿಂತ ಹೆಚ್ಚು ನಿವ್ವಳ ಆರ್ಥಿಕ ಮೌಲ್ಯ ಹೊಂದಿದ ಜಗತ್ತಿನ ಮೊದಲ ವ್ಯಕ್ತಿಯಾಗಿದ್ದಾರೆ. ಈ ವಾರದಲ್ಲಿ ಟೆಸ್ಲಾ ಶೇರುಗಳ ಮೌಲ್ಯ ಮತ್ತಷ್ಟು ಏರಿದಂತೆ ಜಗತ್ತಿನ ಅತಿಶ್ರೀಮಂತ ಪುರುಷರಾದ ಮಸ್ಕ್​ರ ಆದಾಯ ಕೂಡ ದಾಖಲೆ ಮಟ್ಟದಲ್ಲಿ ಏರಿದೆ ಎಂದು ವರದಿಗಳು ತಿಳಿಸಿವೆ.

    ಈ ವಾರದ ಮೊದಲಲ್ಲಿ ಟೆಸ್ಲಾ 1 ಟ್ರಿಲಿಯನ್​ ಡಾಲರ್​ಗಳ ಮಾರ್ಕೆಟ್​ ಕ್ಯಾಪಿಟಲೈಸೇಷನ್​ ಮಟ್ಟವನ್ನು ದಾಟಿತ್ತು. ತಮ್ಮ ಕಂಪೆನಿಯ ಮೌಲ್ಯದೊಂದಿಗೆ ಮಸ್ಕ್​ರ ನೆಟ್​ ವರ್ತ್​ ಕೂಡ ಹೆಚ್ಚಾಗುತ್ತಿದ್ದು, ಇದೀದ ಅದು ಪಾಕಿಸ್ತಾನದ ಜಿಡಿಪಿಗಿಂತಲೂ ಹೆಚ್ಚಾಗಿದೆ. ಪಾಕ್​ ಜಿಡಿಪಿ 280 ಬಿಲಿಯನ್​ ಡಾಲರ್​ಗಳಿಷ್ಟಿದ್ದರೆ, ಮಸ್ಕ್​​ರ ಆಸ್ತಿಗಳ ಮೌಲ್ಯ 302 ಬಿಲಿಯನ್ ಡಾಲರ್​ ಆಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಶಿವಣ್ಣನನ್ನ ತಬ್ಬಿಕೊಂಡು Jr.NTR ಕಣ್ಣೀರು! ನಾನು ಕರೆದಾಗಲೆಲ್ಲ ಪುನೀತ್​ ಬರ್ತಿದ್ರು…

    ಗ್ರಾವಿಟಿ ಪೇಮೆಂಟ್ಸ್​ ಕಂಪೆನಿಯ ಮಾಲಿಕ ಡಾನ್​ ಪ್ರೈಸ್​ ಈ ಬಗ್ಗೆ ಟ್ವೀಟ್​ ಮಾಡಿದ್ದು, “ನಿಮ್ಮ ಸಂಬಳವು ವರ್ಷಕ್ಕೆ 1 ಮಿಲಿಯನ್ ಡಾಲರ್​ ಆಗಿದ್ದರೆ ಮತ್ತು ನೀವೂ ಅದರಲ್ಲಿ ಏನನ್ನೂ ಖರ್ಚು ಮಾಡದೆ ಕೂಡಿಹಾಕಿದರೆ ಮಸ್ಕ್​ರ ಹಾಲಿ 302 ಬಿಲಿಯನ್​ ಡಾಲರ್​ ನೆಟ್​ ವರ್ತ್​ಅನ್ನು ಈಗಿನಿಂದ 302 ಸಾವಿರ ವರ್ಷಗಳಲ್ಲಿ ತಲುಪುತ್ತೀರಿ” ಎಂದಿದ್ದಾರೆ. (ಏಜೆನ್ಸೀಸ್)

    ‘ನಾಟಿಕೋಳಿ ಸಾಂಬಾರ್​, ಮಟನ್​ ಫ್ರೈ ಅಂದ್ರೆ ಪಂಚಪ್ರಾಣ’; ಗಾಜನೂರಿನಲ್ಲಿ ಅಪ್ಪು ನೆನಪು

    ವೋಟ್​ ಹಾಕಿ ಫೋಟೋ ಶೇರ್ ಮಾಡುತ್ತಿರೋ ಮತದಾರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts