More

    ವೋಟ್​ ಹಾಕಿ ಫೋಟೋ ಶೇರ್ ಮಾಡುತ್ತಿರೋ ಮತದಾರರು!

    ವಿಜಯಪುರ: ಉಪಚುನಾವಣೆ ನಡೆಯುತ್ತಿರುವ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದಲ್ಲಿ ಮತ್ತು ಹಾವೇರಿಯ ಹಾನಗಲ್​ ಕ್ಷೇತ್ರದಲ್ಲಿ ಇಂದು ಬೆಳಗಿನಿಂದ ಮತದಾನ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳು ಭಾರೀ ಪ್ರಚಾರ ಅಭಿಯಾನ ನಡೆಸಿ ಇದೀಗ ಚೆಂಡನ್ನು ಮತದಾರರ ಅಂಗಳಕ್ಕೆ ದೂಡಿವೆ. ಮತದಾರರೂ ಉತ್ಸಾಹದಿಂದ ಮತದಾನ ಕೈಗೊಂಡಿದ್ದಾರೆ.

    ಹೀಗಿರುವಾಗ ಮತ ಚಲಾವಣೆ ಸ್ವತಂತ್ರವಾಗಿ ಮತ್ತು ಯಾವುದೇ ಪ್ರಭಾವಗಳಿಗೆ ಒಳಗಾಗದೆ ನಡೆಯಬೇಕೆಂದು ಮಾಡಿರುವ ನಿಯಮವನ್ನು ಮತದಾರರೇ ಉಲ್ಲಂಘಿಸುತ್ತಿರುವ ಪ್ರಸಂಗ ನಡೆಯುತ್ತಿದೆ. ಸಿಂದಗಿ ಕ್ಷೇತ್ರದಲ್ಲಿ ಮತದಾನ ಮಾಡಿದ ಹಲವು ಮತದಾರರು ತಾವು ಮತ ಚಲಾಯಿಸಿದ ಫೋಟೋ, ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ‘ಅಪ್ಪು’ಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಯುವಕ ಆತ್ಮಹತ್ಯೆ: ಅಭಿಮಾನಿಗಳೇ ದಯವಿಟ್ಟು ದುಡುಕಬೇಡಿ…

    ಗೌಪ್ಯವಾಗಿರಬೇಕಾದ ಮತದಾನವವನ್ನು ಬಹಿರಂಗಪಡಿಸುತ್ತಿರುವ ಮತದಾರರು, ಬಿಜೆಪಿಯ ರಮೇಶ ಭೂಸನೂರರಿಗೆ ಮತ್ತು ಜೆಡಿಎಸ್​ನ ನಾಜಿಯಾ ಅಂಗಡಿಗೆ ಮತ ಚಲಾಯಿಸಿದ ಪೋಟೋ-ವಿಡಿಯೋ ವೈರಲ್ ಆಗಿವೆ. ಹೀಗೆ ಎಲ್ಲೆಡೆ ಹರಿದಾಡುತ್ತಿರುವ ಪೋಟೋಗಳು ಗೌಪ್ಯ ಮತದಾನ ಪದ್ದತಿಗೆ ಧಕ್ಕೆ ತರುತ್ತವೆ ಎಂದು ಪ್ರಜ್ಞಾವಂತ ನಾಗರೀಕರು ಕಳವಳ ವ್ಯಕ್ತಪಡಿಸಿದ್ದಾರೆ.

    5 ರಿಂದ 11 ವರ್ಷ ಮಕ್ಕಳಿಗೆ ಫೈಜರ್​ ಲಸಿಕೆ ನೀಡಲು ಅಮೆರಿಕ ನಿರ್ಧಾರ

    ‘ಇದು ಹೋಗುವ ವಯಸ್ಸಾಗಿರಲಿಲ್ಲ’ …ಅಪ್ಪು ಅಗಲಿಕೆಗೆ ಗಣ್ಯರ ಸಂತಾಪ

    ನಗರದ ವಿದ್ಯಾರ್ಥಿಗೆ ಕರೊನಾ ಪಾಸಿಟೀವ್​; ಶಾಲೆ ಭಾಗಶಃ ಬಂದ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts