More

    5 ರಿಂದ 11 ವರ್ಷ ಮಕ್ಕಳಿಗೆ ಫೈಜರ್​ ಲಸಿಕೆ ನೀಡಲು ಅಮೆರಿಕ ನಿರ್ಧಾರ

    ವಾಷಿಂಗ್ಟನ್​​: ಜಗತ್ತಿನಾದ್ಯಂತ ಕರೊನಾ ಲಸಿಕಾಕರಣದ ಮೂಲಕ ಸಹಜ ಜೀವನಶೈಲಿಗೆ ಮರಳುವ ಪ್ರಯತ್ನ ನಡೆಯುತ್ತಿದೆ. ವಯಸ್ಕರಿಗೆ ಲಸಿಕೆ ಹೊರಬಿದ್ದು ಹಲವು ತಿಂಗಳುಗಳ ನಂತರ ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಮಕ್ಕಳಿಗೂ ಕರೊನಾ ಲಸಿಕೆ ಅನುಮೋದನೆ ಪಡೆಯುತ್ತಿದೆ.

    ಅಮೆರಿಕದಲ್ಲಿ ಈವರೆಗೆ 12 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆಯ ಬಳಕೆಗೆ ಅವಕಾಶವಿತ್ತು. ಇದೀಗ 5 ವರ್ಷದಿಂದ 11 ವರ್ಷ ವಯೋಮಾನದ ಮಕ್ಕಳಿಗೂ ಫೈಜರ್​ ಕಂಪೆನಿಯ ಕರೊನಾ ಲಸಿಕೆಗೆ ಅಮೆರಿಕ ಅನುಮೋದನೆ ನೀಡಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಆಹಾರ ಮತ್ತು ಔಷಧಿ ಇಲಾಖೆಯ ಮುಖ್ಯಸ್ಥೆ ಜಾನೆಟ್​ ವುಡ್​ಕಾಕ್​, “ಕಿರಿಯ ವಯಸ್ಸಿನ ಮಕ್ಕಳಿಗೆ ಕರೊನಾ ಲಸಿಕೆ ನೀಡುವುದು ನಾವು ಸಹಜ ಸ್ಥಿತಿಗೆ ಮರಳುವ ಪ್ರಯತ್ನಕ್ಕೆ ಪೂರಕವಾಗಿದೆ” ಎಂದಿದ್ದಾರೆ. ಶೀಘ್ರವೇ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್)

    ನಗರದ ವಿದ್ಯಾರ್ಥಿಗೆ ಕರೊನಾ ಪಾಸಿಟೀವ್​; ಶಾಲೆ ಭಾಗಶಃ ಬಂದ್​

    ‘ಇದು ಹೋಗುವ ವಯಸ್ಸಾಗಿರಲಿಲ್ಲ’ …ಅಪ್ಪು ಅಗಲಿಕೆಗೆ ಗಣ್ಯರ ಸಂತಾಪ

    ಹೊಟ್ಟೆಯ ಕೊಬ್ಬು ಕರಗಿಸಲು ಉಪಯುಕ್ತ ಈ ಯೋಗಾಸನ! ಮಧುಮೇಹ, ಮಲಬದ್ಧತೆ ನಿಯಂತ್ರಣಕ್ಕೂ ಸಹಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts