More

    ಅಂದು ಉಗ್ರನ ಪತ್ನಿ, ಇಂದು ಜಿಲ್ಲಾ ಅಭಿವೃದ್ಧಿ ಪರಿಷತ್ ಅಭ್ಯರ್ಥಿ! ಉಗ್ರ ಬದುಕಿನಿಂದ ಶಾಂತಿಯುತ ಬದುಕಿಗೆ ಬಂದವಳ ಕಥೆ

    ಶ್ರೀನಗರ: ನಮ್ಮಲ್ಲಿ ಸಾಮಾನ್ಯರು ಉಗ್ರ ತರಬೇತಿ ಪಡೆದು ಉಗ್ರರಾಗುತ್ತಿರುವ ರೀತಿಯಲ್ಲೇ ಅನೇಕ ಉಗ್ರರು ಕೂಡ ಶರಣಾಗಿ ಸಾಮಾನ್ಯರಾಗಿ ಬದಲಾಗುತ್ತಿರುತ್ತಾರೆ. ಉಗ್ರನನ್ನು ಮದುವೆಯಾಗಿ ಜೀವನ ಆರಂಭಿಸಿದ್ದ ಮಹಿಳೆಯೊಬ್ಬಳು ಇದೀಗ ಜಮ್ಮು ಕಾಶ್ಮೀರದ ಜಿಲ್ಲಾ ಜಿಲ್ಲಾ ಅಭಿವೃದ್ಧಿ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

    ಇದನ್ನೂ ಓದಿ: 11 ದಿನಗಳ ಹಿಂದೆ ಪತನಗೊಂಡ ನೌಕಾ ವಿಮಾನದ ಪೈಲಟ್​ ಮೃತ ದೇಹ ಪತ್ತೆ; ಸಮುದ್ರದ ಆಳದಲ್ಲಿತ್ತು ದೇಹ

    ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಡ್ರಾಗ್ ಮುಲ್ಲಾದಿಂದ ಜಿಲ್ಲಾ ಅಭಿವೃದ್ಧಿ ಪರಿಷತ್ ಚುನಾವಣೆಗೆ ಪಾಕಿಸ್ತಾನ ಆಕ್ರಮಿತ ಪ್ರದೇಶದ ಮುಜಾಫರಾಬದ್ ನ ಸುಮಿಯಾ ಸದಾಫ್ ಸ್ಪರ್ಧಿಸಿದ್ದಾರೆ. ಈಕೆ ಪಾಕ್​ ಆಕ್ರಮಿತ ಕಾಶ್ಮೀರ ಮೂಲದವರು. 10 ವರ್ಷಗಳ ಹಿಂದೆ ಕಾಶ್ಮೀರದ ಉಗ್ರನೊಬ್ಬನೊಂದಿಗೆ ಮದುವೆಯಾಗಿ ಕಾಶ್ಮೀರಕ್ಕೆ ಬಂದು ಅಲ್ಲೇ ಜೀವನ ಆರಂಭಿಸಿದ್ದರು. ಈಕೆಯ ಪತಿ ಶಸ್ತ್ರಾಸ್ತ್ರ ತರಬೇತಿಗಾಗಿ ಎಲ್ಒಸಿ ದಾಟಿ ಹೋಗಿದ್ದರಂತೆ. ನಂತರ ಸರ್ಕಾರದ ಪುನರ್ವಸತಿ ಯೋಜನೆಯಡಿ ಕಾಶ್ಮೀರಕ್ಕೆ ವಾಪಾಸಾಗಿದ್ದಾರೆ.

    ಹಾಗೆ ವಾಪಾಸಾದ ಪತಿ ಅಂದಿನಿಂದ ಉಗ್ರ ಚಟುವಟಿಕೆಯನ್ನು ಬಿಟ್ಟಿದ್ದಾರೆ. ಭಾರತೀಯ ಪ್ರಜೆಗಳಾಗಿ ಶಾಂತಿಯಿಂದ ಬದುಕುತ್ತಿರುವ ಈ ಕುಟುಂಬದ ಹೆಣ್ಣು ಮಗಳೀಗ ಚುನಾವಣೆಗೆ ನಿಂತಿದ್ದಾರೆ. ಇವರು ಲ್ಯಾಪ್​ಟಾಪ್​ನ್ನು ತಮ್ಮ ಗುರುತಾಗಿ ಬಳಸಿಕೊಂಡಿದ್ದಾರೆ.

    ಇದನ್ನೂ ಓದಿ: VIDEO| ಪೊಲೀಸರು ನನ್ನ ಚಪ್ಪಲಿ ಕದ್ದಿದ್ದಾರೆ! ಹೋರಾಟ ನಿರತ ರೈತ ಮಹಿಳೆಯ ಆರೋಪ ಹೇಗಿದೆ ನೋಡಿ

    ಭಯೋತ್ಪಾದಕರಾಗಿದ್ದು, ನಂತರ ಬದಲಾಗಿದ್ದ ಇಬ್ಬರ ಪತ್ನಿಯರು ಈ ಹಿಂದೆ 2018ರಲ್ಲಿ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. (ಏಜೆನ್ಸೀಸ್​)

    ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts