More

    ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ವೈಮಾನಿಕ ದಾಳಿಗಳು ಕೇವಲ ಮಿಲಿಟರಿ ಸ್ಟ್ರೈಕ್ ಅಲ್ಲ, ವಿರೋಧಿಗಳಿಗೆ ನೀಡಿದ ಸಂದೇಶ

    ನವದೆಹಲಿ: 2016ರ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಬಾಲಕೋಟ್ ವೈಮಾನಿಕ ದಾಳಿಗಳು ಕೇವಲ ಮಿಲಿಟರಿ ಸ್ಟ್ರೈಕ್ ಮಾತ್ರವಲ್ಲ, ವಿರೋಧಿಗಳಿಗೆ ಗಡಿಯುದ್ದಕ್ಕೂ ನೀಡಿದ ಬಲವಾದ ಸಂದೇಶ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

    ಬಾಲಾಕೋಟ್​ನ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಲ್ವಾಮಾ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರು ಮತ್ತು ಸಶಸ್ತ್ರ ದಳದ ಯೋಧರ ಸ್ಮರಣೆ ಮಾಡಿದರು.

    ದೇಶವು ಅವರ ತ್ಯಾಗವನ್ನು ಎಂದೂ ಮರೆಯುವುದಿಲ್ಲ. ಬಾಲಾಕೋಟ್ ವೈಮಾನಿಕ ದಾಳಿಯಿಂದಾಗಿ ದೊರೆತ ಪ್ರತಿಫಲ ಹೇಗಿದೆ ಎಂದರೆ, ಎಲ್‌ಒಸಿಯಾದ್ಯಂತ ಅನೇಕ ಸಿದ್ಧಾಂತಗಳನ್ನು ಪುನಃ ಬರೆಯುವಂತೆ ಮಾಡಿದೆ. ಭಾರತದ ಎದುರಾಳಿ ಭವಿಷ್ಯದ ಯಾವುದೇ ದುಷ್ಕೃತ್ಯ ಎಸಗಲು 100 ಬಾರಿ ಯೋಚಿಸುವಂತಾಗಿದೆ ಎಂದರು.

    ದೇಶದ ಹೊರಗಿನಿಂದ ಬಂದ ಪ್ರತಿಕ್ರಿಯೆಗಳು ಭಾರತದ ರಕ್ಷಣಾ ಸಾಮರ್ಥ್ಯವನ್ನು ಮೆಚ್ಚಿವೆ. ಅಲ್ಲದೆ ಭಾರತ ದೇಶವು ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮಾರ್ಥ್ಯವನ್ನು ವಿಶ್ವಾದ್ಯಂತ ದೃಢಪಡಿಸಿದೆ ಎಂದು ಅವರು ಹೇಳಿದರು.

    ಭವಿಷ್ಯದಲ್ಲಿ ಭಾರತದ ರಾಷ್ಟ್ರೀಯ ಭದ್ರತೆಗೆ ಯಾವುದೇ ಬೆದರಿಕೆ ಬಂದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತದೆ. ಭವಿಷ್ಯದಲ್ಲಿ ಬರಬಹುದಾದ ಯಾವುದೇ ಬೆದರಿಕೆಗಳನ್ನು ನಿಭಾಯಿಸಲು ಸರ್ಕಾರವು ಪ್ರಮುಖ ರಚನಾತ್ಮಕ ಬದಲಾವಣೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

    ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ವಿಶ್ವವೇ ಸಾಥ್​ ನೀಡುತ್ತಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ತಡೆಯಲು ಸಾಮೂಹಿಕ ರಾಜತಾಂತ್ರಿಕತೆ ಅವಶ್ಯ ಎಂದು ರಾಜನಾಥ​ ಸಿಂಗ್​ ಪ್ರತಿಪಾದಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts