More

    ಹೋಟೆಲ್​​ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿ: ಕನಿಷ್ಠ 20 ಮಂದಿ ಸಾವು, ಸುಮಾರು 40 ಜನರಿಗೆ ಗಾಯ..

    ಸೊಮಾಲಿಯಾ: ಹೋಟೆಲ್​​ವೊಂದರಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದು, ಸುಮಾರು 40 ಜನರು ಗಾಯಗೊಂಡಿದ್ದಾರೆ. ಸೊಮಾಲಿಯಾದ ರಾಜಧಾನಿ ಮೊಗಡಿಶುವಲ್ಲಿನ ಹಯಾತ್ ಹೋಟೆಲ್​ನಲ್ಲಿ ಈ ಗುಂಡಿನ ಚಕಮಕಿ ನಡೆದಿದೆ.

    ಶುಕ್ರವಾರ ತಡರಾತ್ರಿ ಈ ಗುಂಡಿನ ದಾಳಿ ನಡೆದಿದೆ. ಶಸ್ತ್ರಧಾರಿಗಳು ಹೋಟೆಲ್​ಗೆ ಪ್ರವೇಶಿಸುವ ಮೊದಲು ಹೋಟೆಲ್​ ಮುಂಭಾಗದಲ್ಲಿ ಸ್ಫೋಟ ಕೂಡ ಸಂಭವಿಸಿತ್ತು. ನಿನ್ನೆ ರಾತ್ರಿಯೇ ಈ ದಾಳಿ ನಡೆದಿದ್ದರೂ ಅಲ್ಲಿನ ಭದ್ರತಾ ಪಡೆ ಹೋಟೆಲನ್ನು ಸಂಪೂರ್ಣ ಸುಪರ್ದಿಗೆ ಪಡೆಯಲು ಇನ್ನೂ ಪೂರ್ತಿಯಾಗಿ ಯಶಸ್ವಿಯಾಗಿಲ್ಲ. ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಹೋಟೆಲ್​ನ ಕೊನೆಯ ಮಹಡಿಯಲ್ಲಿ ಇದ್ದಿದ್ದರಿಂದ ಇಂದು ಕೂಡ ಗುಂಡಿನ ಮೊರೆತ ಕೇಳಿಸಿದೆ.

    ತೀವ್ರಗಾಮಿ ಸಂಘಟನೆ ಅಲ್​-ಶಬಾಬ್​ ಈ ದಾಳಿಗೆ ಕಾರಣವೆಂದು ಘೋಷಿಸಿಕೊಂಡಿದೆ. ಈ ಸಂಘಟನೆ ಅಲ್​-ಖೈದ ಜತೆ ಸಂಪರ್ಕವನ್ನು ಹೊಂದಿದೆ. ಮೇ ತಿಂಗಳಲ್ಲಿ ಇಲ್ಲಿ ಹಸನ್​ ಶೇಖ್ ಮೊಹಮದ್ ಅಧಿಕಾರಕ್ಕೆ ಬಂದ ಬಳಿಕ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ.

    ವಿಚಾರಣೆಗಾಗಿ ಕೋರ್ಟ್​ಗೆಂದು ಬಂದಿದ್ದ ಪಾತಕಿ ಪ್ರೇಯಸಿ ಜತೆ ಸರಸಕ್ಕಿಳಿದ!; ಲಾಡ್ಜ್​ ಮೇಲೆ ಪೊಲೀಸರ ದಾಳಿ..

    ಮದ್ಯಪಾನ-ಧೂಮಪಾನ ಪ್ರಿಯರಿಗಿದು ಆಘಾತಕಾರಿ ಸುದ್ದಿ; ಸಮೀಕ್ಷೆಯೊಂದು ಹೊರಗೆಡಹಿದೆ ಭೀಕರ ಸಂಗತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts