More

    ವಿದ್ಯಾಗಮ ಕಲಿಕೆಗೆ ಸಂಪರ್ಕ ಸೇತುವೆ

    ತೇರದಾಳ: ವಿದ್ಯಾಗಮ ಯೋಜನೆ ಮಕ್ಕಳ ಕಲಿಕೆಗೆ ನಿರಂತರ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಕೋವಿಡ್-19 ನಡುವೆಯೂ ಸರ್ಕಾರ ಮನೆ ಬಾಗಿಲಿಗೆ ಶಿಕ್ಷಣವನ್ನು ತಲುಪಿಸುವುದರೊಂದಿಗೆ ಮಕ್ಕಳ ಕಲಿಕೆ ಶಕ್ತಿ ಸುಧಾರಣೆಗೆ ಶ್ರಮಿಸುತ್ತಿದೆ ಎಂದು ಸಿಆರ್‌ಪಿ ಭರತೇಶ ಯಲ್ಲಟ್ಟಿ ಹೇಳಿದರು.

    ಸಮೀಪದ ಗೋಲಭಾವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗೋಲಭಾವಿ ವಲಯದ ಮುಖ್ಯಗುರುಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಲೆ ಶಿಸ್ತು ಹಾಗೂ ಸಮಯ ಪಾಲನೆಗೆ ಪ್ರಥಮ ಆದ್ಯತೆ ನೀಡಿರಿ. ಶಾಲೆ ಸ್ವಚ್ಛತೆ ಕಡೆ ಗಮನಹರಿಸಿ. ವಿದ್ಯಾಗಮದಲ್ಲಿ ಮಕ್ಕಳು ಸ್ಯಾನಿಟೈಸರ್, ಪರಸ್ಪರ ಅಂತರ ಕಾಯ್ದುಕೊಳ್ಳಬೇಕೆಂದು ಹೇಳಿದರು.

    ಎಚ್.ಎಂ ಗಳಿಗೆ, ಗೋಲಭಾವಿ ವಲಯದ ಮುಖ್ಯಗುರುಗಳಾದ ಎಸ್.ಜಿ. ನವಿಲ್ಯಾಳ, ಸಿ.ಸಿ ಹಿರೇಮಠ, ವೈ.ಎಂ.ಕಮ್ಮಾರ, ಎಸ್.ಬಿ. ಪುಲೋಜಿ, ಸಿದ್ದು ಕಮದಿನ್ನಿ, ಎನ್.ಎಂ.ಘಾಷನ್, ಐ.ಎನ್. ಲಟ್ಟಿ, ಬಿ.ಎಸ್. ಮಾಸ್ತಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts