More

    ವಿಶೇಷ ಪ್ಯಾಕೆಜ್‌ಗೆ ಒತ್ತಾಯಿಸಿ ಸಿಎಂಗೆ ಮನವಿ

    ತೇರದಾಳ: ಲಾಕ್‌ಡೌನ್‌ದಿಂದಾಗಿ ನೇಕಾರರಿಗೆ ತೀವ್ರ ತೊಂದರೆ ಆಗಿದ್ದು, ಅವರಿಗೆ ಆರ್ಥಿಕ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

    ಮೊದಲೇ ನೇಕಾರರ ಸ್ಥಿತಿ ಗಂಭೀರವಾಗಿದೆ. ಈಗ ಕರೊನಾದಿಂದಾಗಿ ನೇಕಾರರ ಬದುಕಿಗೆ ಮತ್ತೊಂದು ಬರೆ ಎಳೆದಂತಾಗಿದೆ. ಇದರಿಂದ ನೇಕಾರ ಕುಟುಂಬಗಳು ಜೀವನ ನಡೆಸುವುದು ಸವಾಲ್ ಆಗಿದೆ. ಈಗ ಘೋಷಣೆ ಮಾಡಿರುವ ಪ್ಯಾಕೇಜ್‌ನಲ್ಲಿ ನೇಕಾರರಿಗೆ ಯಾವುದೇ ಆರ್ಥಿಕ ಪ್ಯಾಕೇಜ್ ಇಲ್ಲ. ಆದ್ದರಿಂದ ಕೆಎಚ್‌ಡಿಸಿ, ವಿದ್ಯುತ್ ಮಗ್ಗಗಳು, ಸಾಯಿಜಿಂಗ್, ವಿದ್ಯುತ್ ಮಗ್ಗಗಳ ಸಹಕಾರಿ ಸಂಘಗಳ ಕೂಲಿ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಕೆಎಚ್‌ಡಿಸಿ, ವಿದ್ಯುತ್ ಮಗ್ಗಗಳಲ್ಲಿ ನೇಯ್ಗೆ ಮಾಡುವವರು, ವಿದ್ಯುತ್ ಮಗಗಳಲ್ಲಿ ಕಂಡಿಕೆ ಸುತ್ತುವವರು, ವಾಂಡರ್ ಹಾಕುವವರು, ಸಾಯಿಜಿಂಗ್‌ನಲ್ಲಿ ಕೆಲಸ ಮಾಡುವವರು ಹಾಗೂ ನೂಲಿಗೆ ಬಣ್ಣ ಹಾಕುವವರು ಸೇರಿದಂತೆ ನೇಕಾರಿಕೆಯ ವಿವಿಧ ವಿಭಾಗಗಳಲ್ಲಿ ಕೂಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೆ ತಲಾ ಮೂರು ಸಾವಿರ ರೂ. ಸಹಾಯಧನದ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಶಾಸಕ ಸವದಿ ಕೋರಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಶಾಸಕ ಸವದಿ, ನೇಕಾರರ ಸಮಸ್ಯೆಯನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಸಿಎಂ ಕೂಡ ಮನವಿಗೆ ಸ್ಪಂದಿಸಿದ್ದು, ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts