More

    ಜ್ಞಾನವಾಪಿಯಲ್ಲಿ ಪೂಜೆ ವಿರೋಧಿಸಿ ಮುಸ್ಲಿಂ ಧರ್ಮಗುರು ಪ್ರತಿಭಟನೆಗೆ ಕರೆ: ಬರೇಲಿ ಉದ್ವಿಗ್ನ

    ಲಖನೌ: ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಜೈಲ್ ಭರೋ’ ಪ್ರತಿಭಟನೆಗೆ ಕರೆ ನೀಡಿದ್ದಕ್ಕಾಗಿ ಇಸ್ಲಾಮಿಕ್ ಧರ್ಮಗುರುವನ್ನು ಪೊಲೀಸರು ಬಂಧಿಸಿದ್ದು, ನಂತರ ಉತ್ತರ ಪ್ರದೇಶದ ಬರೇಲಿಯಲ್ಲಿ ಉದ್ವಿಗ್ನತೆ ಉಂಟಾಗಿದೆ.

    ಇದನ್ನೂ ಓದಿ:‘ಚಿರಂಜೀವಿ ಹೇಗೆ ಒಪ್ಪಿಕೊಳ್ತಾನೋ ಎಂದು ಭಯಯಾಗಿತ್ತು’ : ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್​ ಹೀಗಂದಿದ್ದೇಕೆ?

    ಜ್ಞಾನವಾಪಿ ಮಸೀದಿಯೊಳಗೆ ಹಿಂದುಗಳು ಪೂಜೆ ಸಲ್ಲಿಸುವುದನ್ನು ವಿರೋಧಿಸಿ, ಬರೇಲಿಯಲ್ಲಿ ಧರ್ಮಗುರು ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಕೀರ್ ರಜಾ ಖಾನ್ ಶುಕ್ರವಾರದ ಪ್ರಾರ್ಥನೆಯ ನಂತರ ‘ಜೈಲ್ ಭರೋ’ ಚಳವಳಿಗೆ ಕರೆ ನೀಡಿದ್ದು, ಪೊಲೀಸರು ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರು. ಪ್ರತಿಭಟನೆ ತಡೆಗೆ ಭದ್ರತೆ ಬಿಗಿಗೊಳಿಸಿದರು.

    ಬರೇಲಿ ನಗರದಲ್ಲಿನ ಇಸ್ಲಾಮಿಯಾ ಮೈದಾನಕ್ಕೆ ಸಾರ್ವಜನಿಕರ ಪ್ರವೇಶ ನಿರಾಕರಿಸಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರಾದೇಶಿಕ ಸಶಸ್ತ್ರ ಪಡೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್)ಯನ್ನು ನಿಯೋಜಿಸಲಾಗಿದೆ. “ಶುಕ್ರವಾರ ಯಾವುದೇ ಸ್ಥಳದಲ್ಲಿ ಜನರು ಜಮಾಯಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

    ಮುಸ್ಲಿಂ ಧರ್ಮಗುರುವಿನ ಅನುಯಾಯಿಗಳು ಕರಪತ್ರಗಳನ್ನು ಹಂಚಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ, “ನ್ಯಾಯಾಲಯದ ತೀರ್ಪನ್ನು ಬಳಸಿಕೊಂಡು ಬಾಬ್ರಿ ಮಸೀದಿಯನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ. ಈಗ ಅವರು ಜ್ಞಾನವಾಪಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದ್ದಾರೆ. 700 ವರ್ಷಗಳಷ್ಟು ಹಳೆಯದಾದ ನಮ್ಮ ಮಸೀದಿಯನ್ನು ಮಧ್ಯರಾತ್ರಿಯಲ್ಲಿ ಧ್ವಂಸಗೊಳಿಸಲಾಗಿದೆ” ಎಂದು ಈತನ ಅನುಯಾಯಿಗಳು ಅಪಪ್ರಚಾರ ಮಾಡುತ್ತಿದ್ದಾರೆ.

    ಉದ್ಯೋಗಿಗಳಿಗಿಂತ ಕೃತಕ ಬುದ್ಧಿಮತ್ತೆ(AI) ಉತ್ತಮವೇ? ಆಸಕ್ತಿಕರ ವರದಿ ನೀಡಿದ ಎಂಐಟಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts