More

    ಖ್ಯಾತ ಟೆನಿಸ್​ ಆಟಗಾರ ರೋಜರ್ ಫೆಡರರ್​ ನಿವೃತ್ತಿ ಘೋಷಣೆ: ಆದರೆ…

    ನವದೆಹಲಿ: ಖ್ಯಾತ ಟೆನಿಸ್​ ಆಟಗಾರ ರೋಜರ್ ಫೆಡರರ್ ಇಂದು ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಗೂ ಪತ್ರ ಹಂಚಿಕೊಂಡಿರುವ ಅವರು ಈ ಮೂಲಕ ತಮ್ಮ ನಿವೃತ್ತಿಯನ್ನು ಸಾರಿದ್ದಾರೆ. ಇದು ಅವರ ಕ್ರೀಡಾಭಿಮಾನಿಗಳಿಗೆ ಬೇಸರದ ಸಂಗತಿಯಾದರೂ ಅವರು, ಇನ್ನೊಂದು ಸಮಾಧಾನದ ವಿಚಾರವನ್ನೂ ತಿಳಿಸಿದ್ದಾರೆ.

    ‘ಸ್ಪರ್ಧಾತ್ಮಕ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಮಯ ಬಂದಾಗ ನಾನು ಅದನ್ನು ಮಾಡಲೇಬೇಕು. ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್ ನನ್ನ ಅಂತಿಮ ಎಟಿಪಿ ಇವೆಂಟ್’ ಎನ್ನುವ ಮೂಲಕ ಅವರು ನಿವೃತ್ತಿ ಘೋಷಿಸಿದ್ದಾರೆ. ಆದರೆ ನಾನು ಮುಂದೆಯೂ ಟೆನಿಸ್ ಆಡುತ್ತೇನೆ. ಆದರೆ ಗ್ರ್ಯಾಂಡ್ ಸ್ಲಾಮ್‌ಗಳಲ್ಲಿ ಅಥವಾ ಪ್ರವಾಸದಲ್ಲಿ ಆಡುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

    ಸದ್ಯ 41 ವರ್ಷ ಪ್ರಾಯದ ರೋಜರ್, ತಾನು 24 ವರ್ಷಗಳಲ್ಲಿ 1,500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾಗಿ ಹೇಳಿಕೊಂಡಿದ್ದಾರೆ. 20 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಫೆಡರರ್‌ 2022ರ ಲೇವರ್ ಕಪ್ ಬಳಿಕ ಸಿಂಗಲ್ಸ್ ಟೆನಿಸ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ಲೇವರ್ ಕಪ್‌ನ ಐದನೇ ಆವೃತ್ತಿ ಸೆ. 23ರಿಂದ 25ರವರೆಗೆ ಲಂಡನ್‌ನಲ್ಲಿ ನಡೆಯಲಿದೆ.

    ಕೆಜಿಎಫ್​-2 ಚಿತ್ರದ ಪ್ರೇರಣೆ; 72 ಗಂಟೆಗಳಲ್ಲಿ 3 ಸೆಕ್ಯುರಿಟಿ ಗಾರ್ಡ್​ಗಳ ಕೊಲೆ: ನಿದ್ರೆಗೆಟ್ಟ ಕೈದಿಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts