More

    ಬಿಬಿಎಂಪಿಯಿಂದ ಘನತ್ಯಾಜ್ಯ ನಿರ್ವಹಣೆ ಕಾರ್ಯಕ್ಕೆ ಮತ್ತೆ ಟೆಂಡರ್

    ಬೆಂಗಳೂರು: ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ಚುರುಕುಗೊಳಿಸಲು ಭೂಭರ್ತಿ ಕೇಂದ್ರಗಳಲ್ಲಿ ಮೂಲಸೌಕರ್ಯ, ರಕ್ಷಣಾ ತಡೆಗೋಡೆ ನಿರ್ಮಾಣ, ಡಿಜಿಟಲ್ ಮ್ಯಾಪಿಂಗ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪಾಲಿಕೆಯು 43.82 ಕೋಟಿ ರೂ. ಮೊತ್ತದ ಟೆಂಡರ್ ಆಹ್ವಾನಿಸಿದೆ.

    ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುಮೋದನೆಯಾಗಿರುವ ಕಾರ್ಯಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಭೂಭರ್ತಿ ಕೇಂದ್ರ ಹಾಗೂ ಘನತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲು ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ. ಮೂರು ಪ್ಯಾಕೇಜ್‌ಗಳಲ್ಲಿ ಆಹ್ವಾನಿಸಿರುವ ಟೆಂಡರ್‌ಗಳನ್ನು ಆಸಕ್ತ ಬಿಡ್‌ದಾರರ ಮೂಲಕ ಜಾರಿಗೆ ತರಲಾಗುತ್ತದೆ. ಇತ್ತೀಚಿಗಷ್ಟೇ ಭೂಭರ್ತಿ ಕೇಂದ್ರಗಳ ಸುತ್ತಲಿನ ಹಳ್ಳಿಗಳಲ್ಲಿ ಮೂಲಸೌಕರ್ಯ ಒದಗಿಸಲು 87.11 ಕೋಟಿ ರೂ. ವೆಚ್ಚದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

    ಈ ಕಾರ್ಯಕ್ರಮಗಳು ಸ್ವಚ್ಚ ಬೆಂಗಳೂರು, 15ನೇ ಹಣಕಾಸು ಆಯೋಗ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲುೃಎಂಎಲ್) ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

    ದತ್ತಾಂಶ ಸಂಗ್ರಹ:

    ಪಾಲಿಕೆಯ 198 ವಾರ್ಡ್‌ಗಳಿಗೆ ಘನತ್ಯಾಜ್ಯ ನಿರ್ವಹಣೆ ಅಧ್ಯಯನದ ಸ್ಥಿತಿಯೊಂದಿಗೆ ತ್ಯಾಜ್ಯ ಜನರೇಟರ್‌ನ ಸಮೀಕ್ಷೆಯನ್ನು ನಡೆಸುವುದು ಹಾಗೂ ಡಿಜಿಟಲ್ ಮ್ಯಾಪಿಂಗ್ ನಡೆಸಲಾಗುತ್ತದೆ. ಈ ಅಧ್ಯಯನ ನಡೆಸಲು ತಂತ್ರಾಂಶದ ಸಂಗ್ರಹ, ಸಮೀಕ್ಷೆಗಾ ಐಟಿ ಕ್ಷೇತ್ರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಸಂಸ್ಕರಣಾ ಘಟಕಗಳಲ್ಲಿ ಬೆಂಕಿ ಉಂಟಾದಲ್ಲಿ ಅಪಾಯವನ್ನು ಕಡಿಮೆ ಮಾಡಲು ಅಗ್ನಿಶಾಮಕ ಉಪಕರಣಗಳನ್ನು ಒದಗಿಸಲಾಗುತ್ತದೆ. ಜತೆಗೆ ಯಲಹಂಕ ಬಳಿಯ ಕೋಗಿಲು ತ್ಯಾಜ್ಯ ನಿರ್ವಹಣೆ ಘಟಕಕ್ಕೆ ರಕ್ಷಣಾ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts