More

    ಕರಾವಳಿ ದೇವಳಗಳಲ್ಲಿ ಸೇವೆ ಆರಂಭ, ಭಕ್ತರ ದಟ್ಟಣೆ ಹೆಚ್ಚಳ, ಸದ್ಯಕ್ಕಿಲ್ಲ ಅನ್ನ ಪ್ರಸಾದ ಸೇವೆ

    ಮಂಗಳೂರು/ಉಡುಪಿ: ಕೋವಿಡ್-19 ಕಾರಣಕ್ಕೆ ಐದು ತಿಂಗಳುಗಳಿಂದ ಕರಾವಳಿಯ ದೇವಾಲಯಗಳಲ್ಲಿ ಸ್ಥಗಿತಗೊಂಡಿದ್ದ ಸೇವೆಗಳು ಆರಂಭ ಗೊಂಡಿವೆ. ಮುಂಜಾಗ್ರತಾ ಕ್ರಮದೊಂದಿಗೆ ಭಕ್ತರ ದಟ್ಟಣೆಯೂ ಕಂಡುಬಂತು.

    ದ.ಕ.ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು, ಮಂಗಳಾದೇವಿ, ಕದ್ರಿ, ಕುದ್ರೋಳಿ, ಪೊಳಲಿ, ಶ್ರೀ ಶರವು ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಸೇವೆಗಳು ಆರಂಭಗೊಂಡಿವೆ. ಎಳೆಯ ಮಕ್ಕಳ ಉಪಸ್ಥಿತಿಯಲ್ಲಿ ನಡೆಸಬೇಕಾದ ಅನ್ನಪ್ರಾಶನ, ಅಕ್ಷರಾಭ್ಯಾಸ ಮೊದಲಾದ ಸೇವೆಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ. ಕಟೀಲು ಕ್ಷೇತ್ರದಲ್ಲಿ ಅನ್ನಪ್ರಾಶನ ಸೇವೆ ರಶೀದಿ ಮಾಡಿಸಿದವರಿಗೆ ಅನ್ನಪ್ರಾಶನಕ್ಕೆ ನೀಡಲಾಗುವ ಗುಡಾನ್ನ ಪಾಯಸವನ್ನು ಪ್ರಸಾದವಾಗಿ ನೀಡಲಾಗುತ್ತದೆ.

    ಪಾಲಕರು ಮನೆಗೆ ಕೊಂಡೊಯ್ದು ಮಕ್ಕಳಿಗೆ ನೀಡಬಹುದು. ವಾಲಯಗಳಲ್ಲಿ ಅನ್ನ ಪ್ರಸಾದ ಆರಂಭವಾಗಿಲ್ಲ. ಕೆಲವು ದೇವಾಲಯಗಳಲ್ಲಿ ಹಣ್ಣುಕಾಯಿ ಸೇವೆಯೂ ಆರಂಭವಾಗಿಲ್ಲ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರದವರೆಗೆ ಸೇವೆಗಳನ್ನು ಆರಂಭಿಸಲಾಗಿಲ್ಲ, ಈ ಕುರಿತು ಸಿದ್ಧತೆಗಳು ನಡೆದಿವೆ, ಒಂದೆರಡು ದಿನಗಳಲ್ಲಿ ಆರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

    ಉಡುಪಿ ಜಿಲ್ಲೆಯ ಆನೆಗುಡ್ಡೆ, ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ಸೀಮಿತ ಸೇವೆಗಳನ್ನು ಆರಂಭಿಸಲಾಗಿದೆ. ಇನ್ನೂ ಕೆಲವು ದೇವಳದಲ್ಲಿ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಉಡುಪಿ ಕೃಷ್ಣ ಮಠದಲ್ಲಿ ಸೇವೆಗಳನ್ನು ಆರಂಭಿಸುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ ಎಂದು ದೇವಳದ ಮೂಲಗಳು ತಿಳಿಸಿದೆ.

    ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಯಕ್ಷಗಾನ ಮತ್ತೆ ರಂಗಪೂಜೆ ಹೊರತುಪಡಿಸಿ ನಿತ್ಯ ಪೂಜೆ, ಇತರೆ ಸೇವೆಗಳು ನಡೆಯುತ್ತಿವೆ. ಕಟೀಲು ಕ್ಷೇತ್ರದಲ್ಲಿ ಮದುವೆಯ ಶುಭ ದಿನದಂದು ದೇವಳ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಸರದಿಯಂತೆ ಏಕಕಾಲದಲ್ಲಿ ಒಂದೇ ಮದುವೆ ನಡೆಸುವ ಅವಕಾಶ ಕಲ್ಪಿಸಲಾಗುತ್ತದೆ. ಮೊದಲಾಗಿ ನಿಗದಿಪಡಿಸಿದ ಸಮಯವನ್ನು ಭಕ್ತರು ಕಾದಿರಿಸಬೇಕಾಗುತ್ತದೆ.

    ಮದುವೆ ಸಿದ್ಧತೆ: ಕಟೀಲು ಕ್ಷೇತ್ರದಲ್ಲಿ ಮದುವೆಯ ಶುಭ ದಿನದಂದು ದೇವಳ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಸರದಿಯಂತೆ ಏಕಕಾಲದಲ್ಲಿ ಒಂದೇ ಮದುವೆ ನಡೆಸುವ ಅವಕಾಶ ಕಲ್ಪಿಸಲಾಗುತ್ತದೆ. ಮೊದಲಾಗಿ ನಿಗದಿಪಡಿಸಿದ ಸಮಯವನ್ನು ಭಕ್ತರು ಕಾದಿರಿಸಬೇಕಾಗುತ್ತದೆ. ವಾಹನ ಪೂಜೆಗಳು ಈ ಹಿಂದಿನಂತೆ ನಿರಾತಂಕವಾಗಿ ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts