More

    ಹುಕ್ಕೇರಿ: ದೇವಸ್ಥಾನಗಳು ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಶ್ರದ್ಧಾ ಕೇಂದ್ರಗಳು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಶನೇಶ್ವರ ಮಂದಿರದ ಜೀರ್ಣೋದ್ಧಾರದ ಚೌಕಟ್ಟು ಕೂಡಿಸುವ ಪೂಜಾ ಸಮಾರಂಭದಲ್ಲಿ ಮಾತನಾಡಿದರು. ಆಧ್ಯಾತ್ಮದ ತಳಹದಿಯಿಂದಲೇ ಭಾರತ ಸದಢ ಹಾಗೂ ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದೆ. ಶಾಸಕರ 40 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶನಿಮಂದಿರ ನಿರ್ಮಾಣ ಮಾಡಲಾಗುವುದು ಎಂದರು.

    ಪ್ರತಿಯೊಬ್ಬರೂ ದೈನಂದಿನ ಚಟುವಟಿಕೆಗಳ ಜತೆಗೆ ಸ್ವಲ್ಪ ಸಮಯ ಆಧ್ಯಾತ್ಮಕ್ಕೆ ಮೀಸಲಿಟ್ಟರೆ ನೆಮ್ಮದಿ ಸಿಗುತ್ತದೆ. ಯಶಸ್ವಿ ಜೀವನ ಬದುಕಲಿಕ್ಕೆ ಅಧ್ಯಾತ್ಮ ಸಹಾಯ ಮಾಡಲಿದೆ. ಪ್ರಸ್ತುತ ಸಮಾಜ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಮಾನವನ ಬದುಕು ಕೇವಲ ಹೊಟ್ಟೆಪಾಡಿಗಾಗಿ ಸೀಮಿತವಾಗದೆ ಸಾಮಾಜಿಕ ಕಳಕಳಿ ಇದ್ದರೆ ಜೀವನದಲ್ಲಿ ಪರಿಪೂರ್ಣತೆ ಬರುತ್ತದೆ ಎಂದರು.

    ರಾಜೇಶ್ವರಿ ವಿಶ್ವನಾಥ ಕತ್ತಿ ಧರ್ಮಾರ್ಥ ಟ್ರಸ್ಟ್ ವತಿಯಿಂದ ಆಸ್ಪತ್ರೆ ಒಳರೋಗಿಗಳಿಗೆ ಉಚಿತವಾಗಿ ವಿತರಿಸುವ ಊಟದ ವ್ಯವಸ್ಥೆ ಪರಿಶೀಲಿಸಿದರು. ವಿವಿಧ ವಾರ್ಡ್‌ಗಳಿಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧೋಪಚಾರ ಕುರಿತು ರೋಗಿಗಳಿಂದ ಮಾಹಿತಿ ಪಡೆದರು. ನಿರ್ಮಾಣ ಹಂತದ ವೈದ್ಯ-ಸಿಬ್ಬಂದಿ ವಸತಿ ಸಮುಚ್ಛಯ ಕಾಮಗಾರಿ ಪರಿಶೀಲಿಸಿ ಗುಣಮಟ್ಟ ಕಾಮಗಾರಿ ಕೈಗೊಂಡು ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

    ಹಿರಾಶುಗರ್ಸ್ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಆಸ್ಪತ್ರೆ ಸಿಎಂಒ ಡಾ.ಎಂ.ಎಂ.ನರಸನ್ನವರ, ಪಿಡಬ್ಲುೃಡಿ ಅಭಿಯಂತ ಪ್ರಭಾಕರ ಕಾಮತ, ನಿವೃತ್ತ ಅಧಿಕಾರಿ ಎ.ಬಿ.ಪಟ್ಟಣಶೆಟ್ಟಿ, ಗುತ್ತಿಗೆದಾರ ಪುಂಡಲೀಕ ನಂದಗಾಂವಿ, ರಾಜು ಪಾಟೀಲ, ಬಸವರಾಜ ಗಂಗಣ್ಣವರ, ಮುಖಂಡರಾದ ರಾಜು ಮುನ್ನೋಳಿ, ಗುರು ಕುಲಕರ್ಣಿ, ಪ್ರಜ್ವಲ ನಿಲಜಗಿ, ಸುಹಾಷ ನೂಲಿ, ಮಧುಕರ ಕರನಿಂಗ, ಕುಮಾರ ಜುಟಾಳೆ, ಗಿರೀಶ ಕುಲಕರ್ಣಿ, ಚನ್ನಪ್ಪ ಗಜಬರ, ಉದಯ ಹಜಾರೆ, ಸರಸ್ವತಿ ದೊಡಭಂಗಿ, ಶ್ರೀದೇವಿ ಶಿರೆಪ್ಪನ್ನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts