ಬೈಲಹೊಂಗಲ: ಪಟ್ಟಣದ ಹನುಮಂತದೇವರ ದೇವಸ್ಥಾನದ ಹುಂಡಿಯಲ್ಲಿರುವ ಹಣ ಕಳ್ಳತನವಾಗಿರುವ ಪ್ರಕರಣ ಭಾನುವಾರ ವರದಿಯಾಗಿದೆ. ಸುಮಾರು 20 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು ಎಂದು ದೇವಸ್ಥಾನದ ಅರ್ಚಕ ದೇವೇಂದ್ರ ಪೂಜೇರಿ ದೂರು ದಾಖಲಿಸಿದ್ದಾರೆ.
ಹುಂಡಿ ಒಡೆಯಲಾಗಿದ್ದು ಚಿಲ್ಲರೆ ಹಣ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.