More

    4 ಜಿಲ್ಲೆಗಳಲ್ಲಿ 40ರ ಗಡಿ ದಾಟಿದ ಉಷ್ಣಾಂಶ

    ಬೆಂಗಳೂರು: ರಾಜ್ಯದಲ್ಲಿ ಹೆಚ್ಚಳವಾಗಿರುವ ಬಿಸಿಲು ಧಗೆಗೆ ಜನತೆ ತತ್ತರಿಸಿದ್ದು, ಭಾನುವಾರ 4 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಟಿದೆ.

    ಬಾಗಲಕೋಟೆ 41.2, ರಾಯಚೂರು 40.4, ಕಲಬುರಗಿ 40.9, ಬೆಂ.ಗ್ರಾಮಾಂತರ ತಾಲೂಕಿನ ಚಿಕ್ಕನಹಳ್ಳಿ 40.2 ಡಿ.ಸೆ.ಉಷ್ಣಾಂಶ ದಾಖಲಾಗಿದೆ. ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ದಾವಣಗೆರೆಯಲ್ಲಿ 40ರ ಅಸುಪಾಸಿನಲ್ಲಿ ತಾಪಮಾನ ದಾಖಲಾಗುತ್ತಿದೆ. ಚಾಮರಾಜನಗರ 38.2, ಬೀದರ್​ 38, ಚಿತ್ರದುರ್ಗ 37.9, ಬೆಳಗಾವಿ 37.4, ಮಂಡ್ಯ 37.2, ಶಿವಮೊಗ್ಗ 37.2, ಚಿಂತಾಮಣಿ 36.8, ಬೆಂಗಳೂರು 36.6 ಡಿ.ಸೆ.ತಾಪಮಾನ ವರದಿಯಾಗಿದೆ. ಮೇಲಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ 2-3 ಡಿ.ಸೆ.ಅಧಿಕ ಉಷ್ಣಾಂಶ ಕಂಡುಬಂದಿದೆ.

    ಜ್ಞಾನಭಾರತಿ ಆವರಣದಲ್ಲಿ ಬೆಂಕಿ: ಆರಣ್ಯ ನಾಶ
    ಮುಂದಿನ 2-3 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 3 ಡಿ.ಸೆ.ಹೆಚ್ಚಾಗಲಿದೆ. ಕಲಬುರಗಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳದಲ್ಲಿ ಹೀಟ್​ ವೇವ್​ ಉಂಟಾಗಲಿದೆ. ಈ ಮಧ್ಯೆಯೂ ರಾಜ್ಯದ ಕೆಲವೆಡೆ ಸಾಧಾರಣ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ.ಹಗಲು ವೇಳೆ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಭಾಗಿಯಾಗದಂತೆ ಸಾರ್ವಜನಿಕರಿಗೆ ಇಲಾಖೆ ಸಲಹೆ ಕೊಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts