More

    ಜ್ಞಾನಭಾರತಿ ಆವರಣದಲ್ಲಿ ಬೆಂಕಿ: ಆರಣ್ಯ ನಾಶ

    ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಬಳಿ ಕಿಡಿಗೇಡಿಗಳ ಕೃತ್ಯದಿಂದ ಜ್ಞಾನಭಾರತಿ ಆವರಣದಲ್ಲಿ ಅರಣ್ಯ ನಾಶವಾಗಿದೆ.

    ಭಾನುವಾರ ಬೆಳಗ್ಗೆ 9.30ರ ಸುಮಾರಿಗೆ ಆಕಸ್ಮಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಯಾರೊಬ್ಬರಿಗೂ ಗೊತ್ತಾಗದ ಕಾರಣ ಬೆಂಕಿಯ ಜ್ವಾಲೆಯು ಹರಡಿದೆ. ಸುಮಾರು ಒಂದು ಎಕರೆಗೂ ಹೆಚ್ಚಿನ ಪ್ರದೇಶ ಬೆಂಕಿಯ ಕೆನ್ನಾಲಿಗೆ ನಾಶವಾಗಿದೆ. ಅದಾದ ನಂತರ ಅಗ್ನಿಶಾಮಕ ದಳ ಮತ್ತು ಹೋಮ್‌ಗಾರ್ಡ್ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಂಕಿಯಿಂದ ಯಾವುದೇ ರೀತಿಯ ಮಾನಹಾನಿಯಾಗಿಲ್ಲ. ಆದರೆ, ಪ್ರತಿ ವರ್ಷ ಜ್ಞಾನಭಾರತಿಯಲ್ಲಿ ಇಂತಹ ಪ್ರಕರಣಗಳು ಕಂಡುಬರುತ್ತಲೇ ಇವೆ. ಆದರೆ, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮಾತ್ರ ಎಚ್ಚೆತ್ತುಕೊಂಡಿಲ್ಲ. ಕಳೆದ ವಾರ ಕೂಡ ಜ್ಞಾನಭಾರತಿ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ಜ್ಞಾನಭಾರತಿ ಆವರಣದಲ್ಲಿ ಸಾಕಷ್ಟು ವೈವಿಧ್ಯಮಯ ಸಸ್ಯಗಳಿವೆ. ಹತ್ತಾರು ವರ್ಷ ಹಳೆಯದಾದ ಮರಗಳಿವೆ. ಪಕ್ಷಿ ಸಂಕುಲವಿದೆ. ಇದನ್ನೆಲ್ಲಾ ರಕ್ಷಿಸುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ಆದರೆ, ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಇಂತಹ ಘಟನೆಗಳು ಪದೇ ಪದೇ ಜರುತ್ತಲೇ ಇವೆ. ಕೆಲವು ಕಿಡಿಗೇಡಿಗಳ ಕೃತ್ಯ ಕೂಡ ಇದರಲ್ಲಿರುತ್ತದೆ. ಅಂತಹವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts