More

    ಕೆಜಿಎಫ್​ ಅಧೀರ ಪಾತ್ರಕ್ಕೆ ಕನ್ನಡ ಮತ್ತು ತೆಲುಗಿಗೆ ಇವರೇ ನೋಡಿ ಡಬ್ಬಿಂಗ್ ಆರ್ಟಿಸ್ಟ್​

    ಬೆಂಗಳೂರು: ಕೆಜಿಎಫ್​ ಚಾಪ್ಟರ್ 2 ಸಿನಿಮಾ ಬಹುತೇಕ ಕೊನೇ ಹಂತದ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದೆ. ಕ್ಲೈಮ್ಯಾಕ್ಸ್​ ಕೆಲಸಗಳು ನಡೆಯುತ್ತಿರುವುದರಿಂದ ಇನ್ನೇನು ಶೀಘ್ರದಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ಅಪ್​ಡೇಟ್ ಮಾಹಿತಿ ನೀಡಲಿದೆ ತಂಡ. ಇದೀಗ ಇದೇ ಬಳಗದಿಂದ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅದೇನೆಂದರೆ, ಸಂಜಯ್ ದತ್ ಅಧಿರ ಪಾತ್ರಕ್ಕೆ ಡಬ್ ಮಾಡುವವರಾರು ಎಂಬುದು. ಅದಕ್ಕೀಗ ಉತ್ತರ ಸಿಕ್ಕಿದೆ.

    ಇದನ್ನೂ ಓದಿ: ನಿಗೂಢವಾಗಿ ಮೃತಪಟ್ಟ’ಡರ್ಟಿ ಪಿಕ್ಚರ್’ ನಟಿ ಆರ್ಯಾ ಬ್ಯಾನರ್ಜಿ ಮರಣೋತ್ತರ ಪರೀಕ್ಷೆಯಲ್ಲಿ ಅಸಲಿಯತ್ತು ಬಯಲು…

    ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾಕ್ಕೆ ಹಿಂದಿಯಲ್ಲಿ ಸ್ವತಃ ಸಂಜಯ್ ದತ್ ಡಬ್​ ಮಾಡಿದರೆ, ಕನ್ನಡ ಮತ್ತು ತೆಲುಗಿನಲ್ಲಿ ಬೇರೆ ಬೇರೆ ಖಳರೇ ದತ್​ಗೆ ಧ್ವನಿ ನೀಡಲಿದ್ದಾರೆ. ಕನ್ನಡದಲ್ಲಿ ಮಧು ಗುರುಸ್ವಾಮಿ ಡಬ್​ ಮಾಡುವ ಬಗ್ಗೆ ಮಾತುಗಳು ಕೇಳಿಬಂದಿದ್ದು, ತೆಲುಗಿನಲ್ಲಿ ಕಂಚಿನ ಕಂಠದ ಬೊಮ್ಮಾಲಿ ಖ್ಯಾತಿಯ ರವಿಶಂಕರ್​ ಡಬ್​ ಮಾಡಲಿದ್ದಾರೆ.

    ಕೆಜಿಎಫ್​ ಅಧೀರ ಪಾತ್ರಕ್ಕೆ ಕನ್ನಡ ಮತ್ತು ತೆಲುಗಿಗೆ ಇವರೇ ನೋಡಿ ಡಬ್ಬಿಂಗ್ ಆರ್ಟಿಸ್ಟ್​ ಕೆಜಿಎಫ್​ ಅಧೀರ ಪಾತ್ರಕ್ಕೆ ಕನ್ನಡ ಮತ್ತು ತೆಲುಗಿಗೆ ಇವರೇ ನೋಡಿ ಡಬ್ಬಿಂಗ್ ಆರ್ಟಿಸ್ಟ್​

    ಇದನ್ನೂ ಓದಿ: ಟ್ರೇಲರ್ ಹೊತ್ತು ಬಂದ ‘ಆರ್​ಎಚ್​ 100’; ಡಿ.18ಕ್ಕೆ ಸಿನಿಮಾ ಬಿಡುಗಡೆ

    ಖಳನಾಯಕನಾಗಿ ನಟಿಸುವುದರ ಜತೆಗೆ ಧ್ವನಿ ಮೂಲಕವೂ ಸಾಕಷ್ಟು ಸದ್ದು ಮಾಡಿದ್ದಾರೆ ಈ ಇಬ್ಬರು ಕಲಾವಿದರು. ಇದೀಗ ಇದೇ ನಟರು ಕೆಜಿಎಫ್​ ಚಿತ್ರದ ಭಾಗವಾಗುತ್ತಿದ್ದಾರೆ. ಇನ್ನೇನು ಶೀಘ್ರದಲ್ಲಿ ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಹೇಳಿಕೊಳ್ಳಲಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.

    ಬಾಲಿವುಡ್​ನಲ್ಲಿ ಚೆಸ್ ಮಾಂತ್ರಿಕನ ಬಯೋಪಿಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts