More

    ಅಮೆರಿಕದಲ್ಲಿರೋ ತೆಲುಗು ದಂಪತಿ ನಂಬಿದ ವಿದ್ಯಾರ್ಥಿಗಳಿಗೆ 10 ಕೋಟಿ ರೂ. ಪಂಗನಾಮ..!

    ವಿಜಯವಾಡ: ಅಮೆರಿಕದಲ್ಲಿ ವಾಸವಿರುವ ತೆಲುಗು ದಂಪತಿ ಎಚ್​1-ಬಿ ವೀಸಾ ಕೊಡಿಸುವುದಾಗಿ ನಂಬಿಸಿ ಆಂಧ್ರ ಪ್ರದೇಶದ ವಿದ್ಯಾರ್ಥಿಗಳಿಗೆ ಬರೋಬ್ಬರಿ 10 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.

    ವಂಚಕ ದಂಪತಿಯನ್ನು ಮುತ್ಯಾಲಾ ಸುನೀಲ್​ ಮತ್ತು ಪ್ರಣೀತಾ ಎಂದು ಗುರುತಿಸಲಾಗಿದೆ. ತಮ್ಮ ಕನ್ಸಲ್ಟೆನ್ಸಿಯಲ್ಲಿ ಎಚ್​1-ಬಿ ಮತ್ತು ಎಫ್​ 1 ವೀಸಾ ಒದಗಿಸುವುದಾಗಿ ಸುಮಾರು 30 ತೆಲುಗು ವಿದ್ಯಾರ್ಥಿಗಳಿಂದ ತಲಾ 25 ಸಾವಿರ ಡಾಲರ್​ (18,45,137 ರೂಪಾಯಿ) ಸಂಗ್ರಹಿಸಿರುವುದಾಗಿ ತಿಳಿದುಬಂದಿದೆ.

    ಹಣವನ್ನು ಪಡೆದ ಬಳಿಕ ಸುನೀಲ್​ ತನ್ನ ತಂದೆ ಮುತ್ಯಾಲಾ ಸತ್ಯನಾರಾಯಣ ಬ್ಯಾಂಕ್​ ಖಾತೆಗೆ ವರ್ಗಾಯಿಸಿದ್ದಾನೆ. ಅಲ್ಲದೆ, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಸಹ ಸುನೀಲ್​ ಡೆಪಾಸಿಟ್​ ಮಾಡಿರುವುದು ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಶೌಚಕ್ಕೆಂದು ಕಚೇರಿಯಿಂದ ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿಯ ದುರಂತ ಸಾವು..!

    ವೀಸಾ ಪಡೆಯಲು ಹಣ ನೀಡಿ ವಂಚನೆಗೊಳಗಾಗಿದ್ದೇವೆ ಎಂಬುದು ವಿದ್ಯಾರ್ಥಿಗಳ ಅರಿವಿಗೆ ಬರುತ್ತಿದ್ದಂತೆ ಅವರಿಗೆ ಶಾಕ್​ ಆಗಿದೆ. ತಕ್ಷಣ ದಂಪತಿ ವಿರುದ್ಧ ಅಟ್ಲಾಂಟ ಹೋಮ್​​ಲ್ಯಾಂಡ್​ ಸೆಕ್ಯುರಿಟಿಯಲ್ಲಿ ದೂರು ದಾಖಲಿಸಿದ್ದಾರೆ.

    ಸದ್ಯ ಸುನೀಲ್​ ಮತ್ತು ಪ್ರಣೀತಾ ನಾಪತ್ತೆಯಾಗಿದ್ದು, ಇಬ್ಬರು ಯೂರೋಪ್​ಗೆ ಹೋಗಿ ತಲೆಮರೆಸಿಕೊಂಡಿರುವ ಸಂಶಯ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ದೂರಿನ ಆಧಾರದ ಮೇಲೆ ಇಂಟರ್ಪೋಲ್​ ಇಲಾಖೆ ದಂಪತಿಗೆ ಲುಕೌಟ್​ ನೋಟಿಸ್​ ನೀಡಿದೆ. ಇತ್ತ ಪಶ್ಚಿಮ ಗೋದಾವರಿ ಜಿಲ್ಲೆಯ ಸತ್ಯನಾರಾಯಣ ಸಹ ನಾಪತ್ತೆಯಾಗಿದ್ದಾರೆ.

    ವಿದ್ಯಾರ್ಥಿಗಳಿಗೆ ಸಲಹೆ ನೀಡಿರುವ ಪೊಲೀಸರು ಯಾವುದೇ ಅಧಿಕೃತವಲ್ಲದ ಕನ್ಸಲ್ಟೆಂಟ್ಸ್​​ಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಹನಿಮೂನ್​ ಪ್ರವಾಸಕ್ಕೆ 1 ರೂಪಾಯಿ ಖರ್ಚು ಮಾಡಿಲ್ವಂತೆ ಕಾಜಲ್​ ದಂಪತಿ: ಐಷಾರಾಮಿ ಸೌಲಭ್ಯ ಫ್ರೀ ಸಿಕ್ಕಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts