More

    ಜನರ ಬಳಿಗೆ ತೆರಳಿ ಜೆಡಿಎಸ್ ಸಾಧನೆ ತಿಳಿಸಿ

    ಚಿತ್ರದುರ್ಗ: ಪ್ರತಿ ಮನೆಗೂ ಪಕ್ಷದ ಸಾಧನೆಗಳನ್ನು ತಿಳಿಸುವಂತೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ ಕಾರ‌್ಯಕರ್ತರಿಗೆ ಸಲಹೆ ನೀಡಿದರು.
    ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಪಕ್ಷದ ಕಾರ‌್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪಂಚರತ್ನ ರಥಯಾತ್ರೆ ಸಂಚರಿಸುತ್ತಿದೆ.

    ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಚಳ್ಳಕೆರೆ, ಹೊಸದುರ್ಗ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಇತರ 4 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕೆ ಇಳಿಸಲಿದೆ. ವರಿಷ್ಠರು ನಂಬಿಕೆ ಇಟ್ಟು ಜಿಲ್ಲೆಯ ಉಸ್ತುವಾರಿ ವಹಿಸಿದ್ದಾರೆ. ಅಭ್ಯರ್ಥಿಗಳು ಜನರ ಬಳಿ ಹೋಗಬೇಕು, ತಾಲೂಕು, ಜಿಲ್ಲಾ ಸಂಘಟನೆಗೆ ಪದಾಧಿಕಾರಿಗಳು ನೇಮಕ ಪೂರ್ಣವಾಗಬೇಕು ಎಂದರು.

    ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಯಾರನ್ನೇ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಲಿ ಅವರ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

    ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ನೆಲಕಚ್ಚಲು ಬಿಡುವುದಿಲ್ಲ. ಚಿತ್ರದುರ್ಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು, ಲಿಂಗಾಯಿತರು ಅಭ್ಯರ್ಥಿಯಾಗುವುದಾದರೆ ಅವರ ಪರ ದುಡಿಯುತ್ತೇನೆ. ಯಾರೂ ಇಲ್ಲ ಎಂದಾಗ ನಾನೇ ಸ್ಪರ್ಧಿಸುತ್ತೇನೆ ಎಂದರು.

    ಜಿಪಂ ಮಾಜಿ ಅಧ್ಯಕ್ಷ ಎಂ.ಜಯಣ್ಣ ಮಾತನಾಡಿದರು. ಜಿ.ಬಿ.ಶೇಖರ್, ಡಿ.ಗೋಪಾಲಸ್ವಾಮಿ ನಾಯಕ, ವಿ.ಗೀತಾ, ಲಲಿತಾ ಕೃಷ್ಣಮೂರ್ತಿ, ಸಣ್ಣತಿಮ್ಮಪ್ಪ, ಬಿ.ಟಿ.ತಿಪ್ಪೇಸ್ವಾಮಿ, ಯರಗುಂಟಪ್ಪ, ಗಣೇಶ್‌ಮೂರ್ತಿ, ಹನುಮಂತರಾಯ, ಒ.ಪ್ರತಾಪ್‌ಜೋಗಿ, ಗುರುಸಿದ್ದಪ್ಪ ಜೆ.ಎನ್.ಕೋಟೆ, ಮೂಡಲಗಿರಿಯಪ್ಪ, ನಗರಸಭೆ ಸದಸ್ಯ ಸೈಯದ್ ನಸ್ರುಲ್ಲಾ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts