More

    ಮಕ್ಕಳಿಗೆ ಸಂವಿಧಾನದ ಮಹತ್ವ ತಿಳಿಸಿ

    ಸಾಗರ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ಬಹಳ ಮಹತ್ವವಿದೆ. ಸಂವಿಧಾನವು ಹಕ್ಕಿನ ಜತೆ ಕರ್ತವ್ಯದ ಕುರಿತು ಬೋಧನೆ ಮಾಡಿದೆ. ಅದನ್ನು ಅರ್ಥೈಸಿಕೊಳ್ಳುವುದು ಅಗತ್ಯ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.
    ಸಾಗರದ ಕೆಳದಿ ರಾಣಿ ಚನ್ನಮ್ಮ ವೃತ್ತದಲ್ಲಿ ನಗರಸಭೆಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಸಾಗರಕ್ಕೆ ಬುಧವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
    ಸಂವಿಧಾನದ ಮಹತ್ವವನ್ನು ಆಗಾಗ ನೆನಪು ಮಾಡಿಕೊಡುವ ಅಗತ್ಯವಿದೆ. ಯುವಜನತೆ, ಮಕ್ಕಳಿಗೆ ಸಂವಿಧಾನದ ಶ್ರೇಷ್ಠತೆ ಮತ್ತು ಮಹತ್ವವನ್ನು ತಿಳಿಸಿಕೊಡಬೇಕು. ಸ್ವತಂತ್ರವಾಗಿ ಬದುಕುವ ಹಕ್ಕು ಸಂವಿಧಾನ ನಮಗೆ ನೀಡಿದ್ದು ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತ ಸದೃಢವಾಗಿರಲು ಮುಖ್ಯ ಕಾರಣ ಸಂವಿಧಾನ. ಸಂವಿಧಾನವನ್ನು ಸದಾ ಸ್ಮರಿಸಿಕೊಳ್ಳುವ ಜತೆಗೆ ಅದರ ಮಹತ್ವ ಅರಿತು ನಡೆಯಬೇಕು ಎಂದರು.
    ಸಮಾಜ ಕಲ್ಯಾಣಾಽಕಾರಿ ಸುರೇಶ್ ಸಹಾನೆ, ನಗರಸಭೆ ಅಽಕಾರಿಗಳಾದ ಮದನ್, ಶೈಲೇಶ್, ಪ್ರಮುಖರಾದ ಕೆ.ಆರ್.ಗಣೇಶಪ್ರಸಾದ್, ಲಕ್ಷ÷್ಮಣ್ ಸಾಗರ್, ರವಿ ಜಂಬಗಾರು, ಎಲ್.ಚಂದ್ರಪ್ಪ, ಪ್ರದೀಪ್ ಆಚಾರಿ, ಪುಷ್ಪಲತಾ ಇತರರಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ರಥ ಸಂಚಾರ ನಡೆಸಲಾಯಿತು. ಪಥಸಂಚಲನದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts