More

    ಭಾರತದ ಮೊದಲ ಹಳ್ಳಿಗೆ ತಲುಪಿತು ದೂರ ಸಂಪರ್ಕ ಜಾಲ!

    ನವದೆಹಲಿ: ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ ಈಗ ದೂರಸಂಪರ್ಕ ಜಾಲ ತಲುಪಿದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪೀತಿ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ 14,931 ಅಡಿ ಎತ್ತರದಲ್ಲಿ ಈ ಹಳ್ಳಿಗಳಿವೆ. ಈ ಗ್ರಾಮಗಳಿಗೆ ಟೆಲಿಕಾಂ ಕನೆಕ್ಟಿವಿಟಿ ದೊರಕಿಸಿಕೊಟ್ಟಿರುವ ಬಗ್ಗೆ ಕೇಂದ್ರ ದೂರಸಂಪರ್ಕ ಇಲಾಖೆ ತನ್ನ ‘X’ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದೆ.

    ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ ಮೆರವಣಿಗೆ ಮೇಲೆ ಬಾಂಬ್​ ದಾಳಿ: ಮೂವರ ಸ್ಥಿತಿ ಗಂಭೀರ!

    ಕೌರಿಕ್ ಹಳ್ಳಿಯು ಟಿಬೆಟ್ ಗಡಿ ಸಮೀಪ ಸ್ಪೀತಿ ನದಿಯ ಉಪನದಿ ಪರೆ ಚು ನದಿಯ ಕಣಿವೆಯಲ್ಲಿ ಇದೆ. ಗುಯೆಯು ಸ್ಪೀತಿ ನದಿ ಕಣಿವೆಯ ಹಳ್ಳಿಯಾಗಿದೆ. ಚೀನಾದ ಗಡಿಯಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಗುಯೆ ಇದೆ. ಪ್ರಖ್ಯಾತ ಟಾಬೋ ಮಾನಸ್ಟರಿಯಿಂದ 40 ಕಿಮೀ ದೂರದಲ್ಲಿ ಈ ಗ್ರಾಮವಿದೆ.

    ವರದಿಗಳ ಪ್ರಕಾರ 1975ರಲ್ಲಿ ಸ್ಪೀತಿಯಲ್ಲಿ ಭೂಕಂಪ ಸಂಭವಿಸಿತ್ತು. ಆಗ ಸಂಘಾ ತೆನ್​ಜಿನ್ ಹೆಸರಿನ ಬೌದ್ಧ ಭಿಕ್ಷುವೊಬ್ಬರ ಸಂರಕ್ಷಿತ ದೇಹ ಪತ್ತೆಯಾಗಿತ್ತು. ಆಗ ಜನರಿಗೆ ಇಂಥದ್ದೊಂದು ಗ್ರಾಮ ಅಸ್ತಿತ್ವದಲ್ಲಿತ್ತು ಎಂಬುದು ಗೊತ್ತಾಗಿತ್ತು. ಸುಮಾರು 25 ವರ್ಷ ಸ್ಥಳೀಯರು ಮತ್ತು ಐಟಿಬಿಪಿ ಅರೆಸೇನಾ ಪೊಲೀಸ್ ಪಡೆ ಈ ಗ್ರಾಮದ ಬಗ್ಗೆ ರಹಸ್ಯ ಪಾಲನೆ ಮಾಡಿದ್ದರು. 2000ರ ಇಸವಿ ಬಳಿಕ ಗುಯೇ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳಗಳಲ್ಲೊಂದೆನಿಸಿದೆ.

    ಕೌರಿಕ್ ಗ್ರಾಮ 25 ವರ್ಷದ ಹಿಂದೆ ಭೂಕಂಪ ಮತ್ತು ಪ್ರವಾಹದ ಕಾರಣ ನಿರ್ಜನ ಪ್ರದೇಶವಾಗಿ ಹೋಗಿತ್ತು. ಎಲ್ಲಾ ಜನರು ಬೇರೆಡೆಗೆ ವಲಸೆ ಹೋಗಿದ್ದರು. ಇವತ್ತು ಹಿಂದಿನ ಹಳ್ಳಿಯನ್ನು ನೆನಪಿಸುವ ಹಾಳಾದ ಮನೆ, ರಸ್ತೆ ಇತ್ಯಾದಿ ಕುರುಹುಗಳನ್ನು ಮಾತ್ರ ಕಾಣಬಹುದು. ಈ ಪ್ರದೇಶವೂ ಕೂಡ ಇಂಡೋ ಟೆಬೇಟಿಯನ್ ಬಾರ್ಡರ್ ಪೊಲೀಸ್ ಪಡೆಗಳ ಸುಪರ್ದಿಯಲ್ಲಿದೆ.

    ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ.. ಕೋಳಿಗಳನ್ನು ಕೊಲ್ಲಲು ಸರ್ಕಾರ ಆದೇಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts