More

    7 ಲಕ್ಷ ರೂ. ವಿದ್ಯುತ್​ ಬಿಲ್ ನೋಡಿ ಕಂಗಾಲಾದ ರೈತ​: ಅಧಿಕಾರಿಯ ಪ್ರತಿಕ್ರಿಯೆ ಹೀಗಿತ್ತು…

    ಹೈದರಾಬಾದ್​: ಕರೊನಾ ವೈರಸ್​ ಲಾಕ್​ಡೌನ್​ ಸಮಯದಲ್ಲಿ ಇಂಧನ ಇಲಾಖೆ ಕಳುಹಿಸಿರುವ ವಿದ್ಯುತ್​ ಬಿಲ್​ ನೋಡಿ ತೆಲಂಗಾಣ ರೈತನೋರ್ವ ಕಂಗಾಲಾಗಿರುವ ಘಟನೆ ನಡೆದಿದೆ.

    ಒಂದಲ್ಲ ಎರಡಲ್ಲ ಬರೋಬ್ಬರಿ 7 ಲಕ್ಷ ರೂ. ವಿದ್ಯುತ್​ ಬಿಲ್​ ಅನ್ನು ತಾಂತ್ರಿಕ ದೋಷದಿಂದ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಇರ್ಸೋಜಿವಾಡಿ ಗ್ರಾಮದ ಸಣ್ಣ ರೈತನಿಗೆ ಕಳುಹಿಸಲಾಗಿದೆ. ವಿದ್ಯುತ್​ ಬಿಲ್​ ಸ್ವೀಕರಿಸುತ್ತಿದ್ದಂತೆ ರೈತ ಜಿ. ಶ್ರೀನಿವಾಸ್​ ಶಾಕ್​ಗೆ ಒಳಗಾದ ಪ್ರಸಂಗ ಜರುಗಿದೆ. ಇದನ್ನೂ ಓದಿ: VIDEO| ಸಿಲಿಕಾನ್​ ಸಿಟಿಗೆ ಕಾದಿದೆಯಾ ಮಹಾ ಗಂಡಾಂತರ…?!

    ಮಾರ್ಚ್​ನಿಂದ ಮೇ ವರೆಗಿನ ವಿದ್ಯುತ್​ ಬಿಲ್​ ಅನ್ನು ಕಳುಹಿಸಲಾಗಿತ್ತು. ಆದರೆ, ರೈತನ ಮನೆಯಲ್ಲಿರುವುದು ಮೂರು ಬಲ್ಬ್​, ಟಿವಿ ಹಾಗೂ ಎರಡು ಫ್ಯಾನ್​ ಮಾತ್ರ. ಸಾಮಾನ್ಯವಾಗಿ ತಿಂಗಳಿಗೆ 500 ರೂ. ಬರುತ್ತಿದ್ದ ಬಿಲ್​ ಇದೀಗ 7,29,417 ರೂ. ಬಂದಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.

    ಫೆಬ್ರವರಿಯಲ್ಲಿ 415 ರೂ. ಪಾವತಿಸಿದ್ದ ಶ್ರೀನಿವಾಸ್​ ಬಾಕಿ ಮೊತ್ತವನ್ನು ಉಳಿಸಿಕೊಂಡಿದ್ದರು. ಮಾರ್ಚ್​, ಏಪ್ರಿಲ್​ ಮತ್ತು ಮೇ ತಿಂಗಳ ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಮೀಟರ್​ ರೀಡಿಂಗ್​ ನೋಡದೇ ಬಿಲ್​ ಮಾಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಪತ್ನಿಯನ್ನು ಕೊಂದು ಪೊಲೀಸ್​ ಠಾಣೆಗೆ ಬಂದ ಭೂಪ!

    ತಾಂತ್ರಿಕ ದೋಷದಿಂದ ಹೀಗಾಗಿದ್ದು, ಸರಿಪಡಿಸಿ ಹೊಸ ಬಿಲ್​ ನೀಡುವುದಾಗಿ ಅಲ್ಲಿನ ಸಹಾಯಕ ಇಂಜಿನಿಯರ್​ ಭರವಸೆ ನೀಡಿರುವುದರಿಂದ ರೈತ ನಿಟ್ಟುಸಿರು ಬಿಟ್ಟಿದ್ದಾನೆ. (ಏಜೆನ್ಸೀಸ್​)

    ಕರೊನಾಗೆ ಸಜ್ಜಾಗಿದೆ ಲಸಿಕೆ; ಬಿಡುಗಡೆಗೆ ಅಡ್ಡಿಯಾಗಿರುವ ಆತಂಕವಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts