More

    VIDEO| ಡಾ.ಬಿ.ಆರ್​.ಅಂಬೇಡ್ಕರ್​ ಅವರ 125 ಅಡಿ ಎತ್ತರದ ಪುತ್ಥಳಿ ಅನಾವರಣ

    ಹೈದರಾಬಾದ್​: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್​ ಡಾ.ಬಿ.ಆರ್​.ಅಂಬೇಡ್ಕರ್​ ಅವರ 132ನೇ ಜನ್ಮ ಜಯಂತಿ ಪ್ರಯುಕ್ತ ಅವರ 125 ಅಡಿ ಉದ್ದದ ಪ್ರತಿಮೆಯನ್ನು ತೆಲಂಗಾಣದ ರಾಜಧಾನಿ ಹೈದರಾಬಾದಿನಲ್ಲಿ ಲೋಕಾರ್ಪಣೆ ಮಾಡಲಾಗಿದೆ.

    ಭಾರತದಲ್ಲಿ ಅಂಬೇಡ್ಕರ್​ ಅವರ ಅತಿ ಎತ್ತರವಾದ ಪ್ರತಿಮೆಯಾಗಿದ್ದು ಹೈದರಾಬಾದಿನ ಹುಸೇನ್​ಸಾಗರ್​ ಸರೋವರದ ದಡದಲ್ಲಿ ನಿರ್ಮಿಸಲಾಗಿದೆ. ಇದರ ಉದ್ಘಾಟನಾ ಕಾರ್ಯವನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಹಾಗೂ ಅಂಬೇಡ್ಕರ್​ ಅವರ ಮೊಮ್ಮಗ ಪ್ರಕಾಶ್​ ನೆರವೇರಿಸಿದರು.

    ಎಲ್ಲರಿಗೂ ಸ್ಪೂರ್ತಿ ನೀಡುತ್ತದೆ

    ಇನ್ನು ಪ್ರತಿಮೆ ಉದ್ಘಾಟನೆ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ರಾಜ್ಯ ಸಚಿವಾಲಯದ ಪಕ್ಕ ಸ್ಥಾಪಿಸಿರುವ ಅಂಬೇಡ್ಕರ್ ಅವರ ಪ್ರತಿಮೆ ಜನರಿಗೆ ಹಾಗೂ ಆಡಳಿತ ವರ್ಗಕ್ಕೆ ಸ್ಪೂರ್ತಿ ನೀಡುತ್ತದೆ.

    98 ವರ್ಷದ ಶಿಲ್ಪಿ ರಾಮ್​ ವಾಂಜಿ ಸುತಾರ್​ ಪ್ರತಿಮೆ ನಿರ್ಮಾಣದಲ್ಲಿ ನಮ್ಮ ಜೊತೆ ಕೈ ಜೋಡಿಸಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್​ ಪ್ರಶಂಶಿಸಿದ್ಧಾರೆ.

    ಸನ್ಮಾನ

    ತೆಲಂಗಾಣ ಸರ್ಕಾರ ವತಿಯಿಂದ ಪದ್ಮಭೂಷಣ ಪ್ರಶ್ತಿ ಪುರಸ್ಕೃತರಾದ ರಾಮ್​ ವಾಂಜಿ ಸುತಾರ್​​ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ತೆಲಂಗಾಣ ಸಚಿವ ಸಂಪುಟದ ಸದಸ್ಯರು, ಶಾಸಕರು ಹಾಗೂ ಅಂಬೇಡ್ಕರ್​ ಅವರ ಮೊಮ್ಮಗ ಪ್ರಕಾಶ್​ ಉಪಸ್ಥಿತರಿದ್ದರು.

    ಕಾರ್ಯಕ್ರಮಕ್ಕೆ ಸುಮಾರು ಎರಡು ಲಕ್ಷ ಜನ ಸೇರಿದ್ದರು ಎಂದು ಹೇಳಲಾಗಿದೆ. ಎಲ್ಲರಿಗೂ ಮಜ್ಜಿಗೆ, ಸಿಹಿ ತಿನಿಸು, ಬೋಜನ ಹಾಗೂ ನೀರಿನ ಪ್ಯಾಕೆಟ್​ಗಳ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts