More

    ತಹಸೀಲ್ದಾರ್‌ಗೆ ಕರೊನಾ ಬಂದಿದ್ದೇ ನೆಪ ಮಾಡ್ಕೊಂಡು 75 ಲಕ್ಷ ರೂ. ಗುಳುಂ!

    ಯಾದಗಿರಿ: ಬ್ಯಾಂಕ್ ಅಧಿಕಾರಿಯೊಬ್ಬರು ತಹಸೀಲ್ದಾರರ ನಕಲಿ ಸಹಿ ಮತ್ತು ಸೀಲ್ ಬಳಸಿ ಬರೋಬ್ಬರಿ 75.59 ಲಕ್ಷ ರೂ. ಲಪಟಾಯಿಸಿದ ಘಟನೆ ಸುರಪುರ ತಹಸಿಲ್ ಕಚೇರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ತಹಸೀಲ್ದಾರ್ ನಿಂಗಣ್ಣ ಬಿರಾದಾರ ಕರೊನಾ ಸೋಂಕಿನಿಂದ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಮಧ್ಯೆ ಅವರು ಪಟ್ಟಣದ ಎಕ್ಸಿಸ್ ಬ್ಯಾಂಕ್‌ನಲ್ಲಿ ತಹಸಿಲ್ ಖಾತೆ ಸ್ಟೇಟ್‌ಮೆಂಟ್ ಪಡೆಯಲು ಮುಂದಾದಾಗ ತಮ್ಮ ಸಹಿ ಮತ್ತು ಮೊಹರು ನಕಲಿ ಮಾಡಿ, ವಿಜಯಪುರ ಜಿಲ್ಲೆ ತಾಳಿಕೋಟೆ ಮೂಲದ ಮಹಾಲಕ್ಷ್ಮೀ ಎಂಟರ್‌ಪ್ರೈಸಸ್ ಎಂಬುವರ ಖಾತೆಗೆ ದೊಡ್ಡ ಮೊತ್ತ ಜಮೆಯಾಗಿದ್ದನ್ನು ಕಂಡು ಅಚ್ಚರಿಗೊಂಡಿದ್ದಾರೆ.

    ಯಾದಗಿರಿ ಜಿಲ್ಲಾಧಿಕಾರಿ 2019ರ ಅಕ್ಟೋಬರ್ 19ರಿಂದ ಜುಲೈ 23ರವರೆಗೆ ನೈಸರ್ಗಿಕ ವಿಕೋಪದಡಿ ಬೇರೆ ಬೇರೆ ದಿನಗಳಂದು 3.55 ಕೋಟಿ ಜಮೆ ಮಾಡಿದ್ದಾರೆ. ಈ ಮಧ್ಯೆ ಅನುದಾನ ಬೇಕಿದ್ದರೆ ಪತ್ರದ ಮೂಲಕ ಕೋರುವಂತೆ ಡಿಸಿ ಸೂಚನೆ ನೀಡಿದ್ದರು. ಹೀಗಾಗಿ ತಹಸೀಲ್ದಾರರು ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯಲು ಮುಂದಾದಾಗ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಡ್ರಗ್​ ಪ್ರಕರಣದ ಆರೋಪಿ ವೀರೇನ್​ ಖನ್ನಾಗೆ ಸಹಕರಿಸಿದ ಆರೋಪ: ಎಸಿಪಿಗೆ ಕಂಟಕ!

    ತಹಸಿಲ್ ಕಚೇರಿಯಿಂದ ಎಕ್ಸಿಸ್ ಬ್ಯಾಂಕ್‌ಗೆ ಹಣ ಜಮೆ ಮಾಡುವ ಚೆಕ್ ಬುಕ್‌ನಲ್ಲಿ ಕೊನೆಯ ಚೆಕ್ ಅನ್ನು ಬ್ಯಾಂಕ್ ಅಧಿಕಾರಿಯೊಬ್ಬರು ಇಟ್ಟುಕೊಂಡಿದ್ದರು. ತಹಸೀಲ್ದಾರರಿಗೆ ಕರೊನಾ ತಗುಲಿರುವ ವಿಷಯ ತಿಳಿಯುತ್ತಿದ್ದಂತೆ ಮಹಾಲಕ್ಷ್ಮೀ ಎಂಟರ್‌ಪ್ರೈಸಸ್ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ಈ ಕೃತ್ಯಕ್ಕೆ ಬ್ಯಾಂಕ್ ಅಧಿಕಾರಿ ರಾಜು ಎಂಬಾತನನ್ನು ಬಳಸಿಕೊಂಡು ತಹಸೀಲ್ದಾರರ ಸಹಿ ನಕಲಿ ಮಾಡಿ, ಎಂಟರ್‌ಪ್ರೈಸಸ್ ಖಾತೆಗೆ ಜೂನ್ 1ರಂದು ಅನಾಮತ್ತಾಗಿ 75.59 ಲಕ್ಷ ರೂ. ಜಮೆ ಮಾಡಿದ್ದಾರೆ.

    ನಂತರ ಹಣ ಡ್ರಾ ಮಾಡಿದ ಅಧಿಕಾರಿ, ರಾಜು ಎಂಬಾತನಿಗೆ 5 ಲಕ್ಷ ರೂ. ನೀಡಿ 70 ಲಕ್ಷ ರೂ. ಕಬಳಿಸಿದ್ದಾನೆ. ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.

    ಏಳು ರಾಜ್ಯದ ಮುಖ್ಯಮಂತ್ರಿಗಳ ಜತೆ ಕೋವಿಡ್​ ಪರಿಸ್ಥಿತಿ ಪರಿಶೀಲಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts