More

    ಆತ್ಮಹತ್ಯೆಗೆ ಶರಣಾದ ರೈತ ದಾನಪ್ಪನ – ಕುಟುಂಬದ ಸದಸ್ಯರಿಗೆ ತಹಸೀಲ್ದಾರ್ ಸಾಂತ್ವನ

    ಮುದ್ದೇಬಿಹಾಳ : ಸಾಲದ ಬಾಧೆ ತಾಳದೇ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ರೈತ ದಾನಪ್ಪ ಹೆಬ್ಬಾಳ ಅವರ ಮನೆಗೆ ಬುಧವಾರ ತಹಸೀಲ್ದಾರ್ ಬಿ.ಎಸ್. ಕಡಕಭಾವಿ ಭೇಟಿ ನೀಡಿ ಮತ ರೈತನ ಕುಟುಂಬದವರಿಗೆ ಸಾಂತ್ವನ ಹೇಳಿದರು.

    ಈ ವೇಳೆ ಮಾತನಾಡಿದ ಅವರು, ಸರಕಾರಕ್ಕೆ ನಿಮ್ಮ ಪರಿಸ್ಥಿತಿ ಬಗ್ಗೆ ವರದಿ ಕಳುಹಿಸಲಾಗುವುದು. ಈ ನಿಟ್ಟಿನಲ್ಲಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.

    ಈ ವೇಳೆ ಮಾತನಾಡಿದ ಗ್ರಾಮಸ್ಥರು, ಆತ್ಮಹತ್ಯೆ ಮಾಡಿಕೊಂಡ ರೈತ ದಾನಪ್ಪ ಹೆಬ್ಬಾಳ ಕುಟುಂಬ ತುಂಬಾ ಬಡತನದಲ್ಲಿದ್ದು ಅವರಿವರ ಬಳಿ ಕೈ ಸಾಲ ಮಾಡಿಕೊಂಡು ಮನೆ ಕಟ್ಟುತ್ತಿದ್ದ. ಅಲ್ಲದೇ ಹೊಲದಲ್ಲಿ ರಾಶಿ ಮಾಡವ ಹಂತದಲ್ಲಿದ್ದ ಸಜ್ಜೆ ಬೆಳೆ ಮಳೆ ಬಂದು ನಾಶವಾಯಿತು. ಮನೆ ಕೂಡಾ ಅರ್ಧಕ್ಕೆ ನಿಂತಿದೆ. ಇದೆಲ್ಲವನ್ನು ಮನಸ್ಸಿಗೆ ಹಚ್ಚಿಕೊಂಡು ತಾನು ಮಾಡಿದ ಸಾಲ ಹೇಗೆ ತೀರಿಸಬೇಕು ಎಂದು ಚಿಂತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಕುಟುಂಬಕ್ಕೆ ಸರಕಾರದಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

    ಮತ ರೈತನ ಪತ್ನಿ ರೇಖಾ ಹೆಬ್ಬಾಳ, ಮಕ್ಕಳಾದ ಕಿರಣ್, ಐಶ್ವರ್ಯಾ, ಕಂದಾಯ ಇಲಾಖೆ ಸಿಬ್ಬಂದಿ ಮಹಾಂತೇಶ ಮಾಗಿ, ಕವಡಿಮಟ್ಟಿ ಗ್ರಾಪಂ ಪಿಡಿಓ ಪಿ.ಎಸ್. ಕಸನಕ್ಕಿ, ಮತ ರೈತನ ಸಹೋದರರಾದ ಶಿವಣ್ಣ ಹೆಬ್ಬಾಳ, ಸಿದ್ದಣ್ಣ ಹೆಬ್ಬಾಳ, ಗ್ರಾಪಂ ಸದಸ್ಯ ಮುತ್ತು ಹುಣಶ್ಯಾಳ ಇದ್ದರು.

    ತಮ್ಮ ಮನವಿಯ ಮೇರೆಗೆ ಶಿರೋಳ ಗ್ರಾಮದ ರೈತನ ಮನೆಗೆ ತಹಸೀಲ್ದಾರರು ಭೇಟಿ ನೀಡಿದ್ದನ್ನು ಸ್ವಾಗತಿಸಿದ ಅಸ್ಕಿ ೌಂಡೇಶನ್ ಅಧ್ಯಕ್ಷ ಸಿ.ಬಿ .ಅಸ್ಕಿ ಅವರು, ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಕುಟುಂಬಸ್ಥರು ಕಡು ಬಡತನದಲ್ಲಿದ್ದು ಅವರಿಗೆ ಸರಕಾರದಿಂದ ಬರುವ ಪರಿಹಾರವನ್ನು ದೊರಕಿಸಿಕೊಡಬೇಕು ಎಂದು ತಹಸೀಲ್ದಾರ್‌ರಿಗೆ ಮನವಿ ಮಾಡಿಕೊಂಡಿದ್ದಾಗಿ ಪತ್ರಕರ್ತರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts