More

    VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ ತೆರೆಯಲು ಮುಂದಾದ ಯುವತಿಯರಿಗೆ ಕಾದಿತ್ತು ಭಾರಿ ಶಾಕ್​!

    ವಾಷಿಂಗ್ಟನ್​: ಅಮೆರಿಕದ ವಾಷಿಂಗ್ಟನ್​ ಸ್ಟೇಟ್​ನ ಕಡಲ ಕಿನಾರೆಯ ಸಣ್ಣ ಬಂಡೆಗಳ ನಡುವೆ ಬಿದ್ದಿದ್ದ ದೊಡ್ಡದಾದ ಸೂಟ್​ಕೇಸ್​ ಅನ್ನು ನೋಡಿದ ಯುವತಿಯರಿಬ್ಬರು ಅದನ್ನು ತೆರೆಯಲು ಮುಂದಾಗಿ, ತಡವಾಗಿ ಅದರಲ್ಲಿದ್ದ ವಸ್ತುವಿನ ಬಗ್ಗೆ ತಿಳಿದು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಟಿಕ್​ಟಾಕ್​ ವಿಡಿಯೋ ಸಹ ವೈರಲ್​ ಆಗಿದೆ.

    ವಾಷಿಂಗ್ಟನ್​ನ ದುವಾಮಿಶ್ ಹೆಡ್ ಪಶ್ಚಿಮ ಸಿಯಾಟಲ್‌ನ ಉತ್ತರ ಭಾಗದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಇಬ್ಬರು ಯುವತಿಯರು ಸೂಟ್​ಕೇಸ್ ಕಂಡ ಬೆನ್ನಲ್ಲೇ ತೆರಯಲು ಯತ್ನಿಸಿ, ಅದರಿಂದ ಬಂದ ದುರ್ವಾಸನೆ ಕಂಡು ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸುತ್ತಾರೆ. ಇದನ್ನೂ ಓದಿ: ಕರೊನಾಗೆ ಹೆದರಿ ಬಸ್​ನಲ್ಲೇ ನೇಣುಬಿಗಿದುಕೊಂಡು ಪೊಲೀಸ್ ಕಾನ್ಸ್​ಟೇಬಲ್​ ಆತ್ಮಹತ್ಯೆ

    ಮೊದಲು ಈ ಬಗ್ಗೆ ಮಾತನಾಡಿರುವ ಯುವತಿಯರು ನಾವು ಕಪ್ಪು ಸೂಟ್​ಕೇಸ್​ ಅನ್ನು ನೋಡಿದೆವು. ಅದರಲ್ಲಿ ಹಣ ಇರಬಹುದು, ನಮ್ಮ ಭವಿಷ್ಯವೇ ಬದಲಾಗುಬಹುದು ಎಂದು ಜೋಕ್ಸ್​ ಮಾಡುತ್ತಿದ್ದೆವು. ಆದರೆ, ಅದರಿಂದ ಹೊರಬರುತ್ತಿದ್ದ ವಾಸನೆ ತುಂಬಾ ಕೆಟ್ಟದಾಗಿತ್ತು ಎಂದಿದ್ದಾರೆ. ಅಲ್ಲದೆ, ಬಹುಶಃ ಸ್ಯಾನಿಟೈಸರ್​ ಇರಬಹುದು ಎಂದು ತಿಳಿದುಕೊಂಡಿದ್ದರಂತೆ.

    ಸ್ಥಳೀಯ ಪೊಲೀಸರು ಘಟನೆ ಬಗ್ಗೆ ಮಾತನಾಡಿ, ಅನುಮಾನಸ್ಪಾದ ಬ್ಯಾಗ್​ ಇದೆ ಎಂಬ ವಿಚಾರ ದೂರವಾಣಿ ಕರೆ ಮೂಲಕ ತಿಳಿದು ಸ್ಥಳಕ್ಕೆ ಧಾವಿಸಿದೆವು. ಈ ವೇಳೆ ಸಮುದ್ರದ ತಟದದಲ್ಲಿ ಬ್ಯಾಗ್​ ಒಂದು ಪತ್ತೆಯಾಯಿತು. ಅದನ್ನು ತೆರೆದು ನೋಡಿದಾಗ ಅದರಲ್ಲಿ ಮಾನವನ ಅವಶೇಷಗಳು ಇರುವುದು ಪತ್ತೆಯಾಯಿತು ಎಂದು ತಿಳಿಸಿದ್ದಾರೆ.

    ಅವಶೇಷಗಳನ್ನು ಪಶ್ಚಿಮ ಸಿಯಾಟಲ್‌ನ ಕಿಂಗ್​ ಕೌಂಟಿ ಮೆಡಿಕಲ್​ ಪರೀಕ್ಷಕರ ಕಚೇರಿಗೆ ಕೊಂಡೊಯ್ಯಲಾಯಿತು. ಸದ್ಯ ಪರೀಕ್ಷಕರು ಮಾನವನ ಅವಶೇಷಗಳು ಯಾರದು ಹಾಗೂ ಸಾವಿಗೆ ಕಾರಣ ಏನೆಂಬದನ್ನು ಪತ್ತೆಹಚ್ಚುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಸಚಿವ ಸುಧಾಕರ್ ತಂದೆಗೆ ಕರೊನಾ ಸೋಂಕು ಬೆನ್ನಲ್ಲೇ ಪತ್ನಿ, ಮಗಳಿಗೂ ಮಹಾಮಾರಿ ಕಂಟಕ

    ಸೂಟ್​ಕೇಸ್​ನಲ್ಲಿ ಮಾನವನ ಅವಶೇಷಗಳಿದ್ದವು ಎಂಬುದನ್ನು ತಡವಾಗಿ ತಿಳಿದ ಯುವತಿಯರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಸೂಟ್​ಕೇಸ್​ನಲ್ಲಿ ಹಣವಿರಬಹುದು, ನಮ್ಮ ಭವಿಷ್ಯವೇ ಬದಲಾಗಬಹುದು ಅಂದುಕೊಂಡಿದ್ದ ಯುವತಿಯರಿಗೆ ನಿಜ ಮಾಹಿತಿ ತಿಳಿದು ಶಾಕ್​ಗೆ ಒಳಗಾಗಿದ್ದಾರೆ. ಇತ್ತ ಸೂಟ್​ಕೇಸ್​ ಪತ್ತೆಯಾದ ವಿಡಿಯೋವನ್ನು ಟಿಕ್​ಟಾಕ್​ನಲ್ಲಿ ಪೋಸ್ಟ್​ ಮಾಡಿದ್ದು ಭಾರಿ ವೈರಲ್​ ಆಗಿದೆ. (ಏಜೆನ್ಸೀಸ್​)

    @ughhenrySomething traumatic happened that changed my life checkkkk 😐🥺 @natthecvt ##fyp ##viral ##crime ##murder ##randonautica ##randonauting ##scary ##washington♬ Creepy, scary, horror, synth, tension – Sound Production Gin

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts