More

    ಪಬ್​ಜಿ ಆಟವಾಡುತ್ತಲೇ ಇರಲು ಪಾಲಕರ ಬ್ಯಾಂಕ್​ ಖಾತೆಯಿಂದ 16 ಲಕ್ಷ ರೂ. ಖರ್ಚು ಮಾಡಿದ ಬಾಲಕ…!

    ParagraphShortcodesFormats 

    ಅಮೃತಸರ್​: ಪ್ಲೇಯರ್ಸ್​ ಅನ್​ನೌನ್​ ಬ್ಯಾಟಲ್​ ಗ್ರೌಂಡ್​ (ಪ್​ಬ್​ಜಿ) ಮೊಬೈಲ್​ ಗೇಮ್​ ಆಟವಾಡುತ್ತಲೇ ಇರಲು ಬಾಲಕನೊಬ್ಬ ಬರೋಬ್ಬರಿ 16 ಲಕ್ಷ ರೂ. ಖರ್ಚು ಮಾಡಿದ್ದಾನೆ. ಪ್ರಕರಣ ಪೊಲೀಸ್​ ಠಾಣೆಟ್ಟಿಲೇರಿದ್ದರೂ ಅವರು ಕೂಡ ಅಸಹಾಯಕರಾಗಿದ್ದಾರೆ. ಏಕೆಂದರೆ, ಬಾಲಕ ಗೊತ್ತಿದ್ದೇ ಇಷ್ಟೊಂದು ಮೊತ್ತ ಖರ್ಚು ಮಾಡಿದ್ದಾನೆ ಎಂದು ಕೈಚೆಲ್ಲಿದ್ದಾರೆ.

    ಅಮೃತಸರ್​: ಪ್ಲೇಯರ್ಸ್​ ಅನ್​ನೌನ್​ ಬ್ಯಾಟಲ್​ ಗ್ರೌಂಡ್​ (ಪ್​ಬ್​ಜಿ) ಮೊಬೈಲ್​ ಗೇಮ್​ ಆಟವಾಡುತ್ತಲೇ ಇರಲು ಬಾಲಕನೊಬ್ಬ ಬರೋಬ್ಬರಿ 16 ಲಕ್ಷ ರೂ. ಖರ್ಚು ಮಾಡಿದ್ದಾನೆ. ಪ್ರಕರಣ ಪೊಲೀಸ್​ ಠಾಣೆಟ್ಟಿಲೇರಿದ್ದರೂ ಅವರು ಕೂಡ ಅಸಹಾಯಕರಾಗಿದ್ದಾರೆ. ಏಕೆಂದರೆ, ಬಾಲಕ ಗೊತ್ತಿದ್ದೇ ಇಷ್ಟೊಂದು ಮೊತ್ತ ಖರ್ಚು ಮಾಡಿದ್ದಾನೆ ಎಂದು ಕೈಚೆಲ್ಲಿದ್ದಾರೆ.

    ಪಬ್​ಜಿ ಗೇಮ್​ ಮೊಬೈಲ್​ ಗೇಮ್​ ಮಾತ್ರವಲ್ಲ, ಇದೊಂದು ಗೀಳಾಗಿ ಪರಿಣಮಿಸುತ್ತದೆ. ಇದನ್ನು ಆಟವಾಡಲು ಹೋಗಿ ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ದುಡ್ಡು ಕಳೆದುಕೊಂಡ ಪ್ರಕರಣಗಳು ನಡೆದಿದ್ದರೂ ಇಷ್ಟೊಂದು ಮೊತ್ತ ಖರ್ಚು ಮಾಡಿದ್ದು ಇದೇ ಮೊದಲ ಬಾರಿ ಎನ್ನಲಾಗಿದೆ.

    ಇದನ್ನೂ ಓದಿ; 7 ತಿಂಗಳಲ್ಲಿ ಪಬ್​ಜಿ ಆದಾಯ 22,403 ಕೋಟಿ ರೂ.ಗೆ ಏರಿಕೆ…! 

    ಪಬ್​ಜಿ ಆಟವನ್ನು ಮುಂದುವರಿಸಲು ಹಲವು ಹಂತಗಳನ್ನು ದಾಟಬೇಕಾಗುತ್ತದೆ ಹಾಗೂ ಅದಕ್ಕಾಗಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಜತೆಗೆ ಆ್ಯಪ್​ನಲ್ಲಿ ಕೆಲವನ್ನು ಖರೀದಿಸಲು ಸೂಚಿಸಲಾಗುತ್ತದೆ. ಪಂಜಾಬ್​ನ 17 ವರ್ಷದ ಬಾಲಕನಿಗೆ ಇದೊಂದು ಗೀಳಾಗಿ ಪರಿಣಮಿಸಿದ್ದರಿಂದ ಇಷ್ಟೊಂದು ಮೊತ್ತ ಖರ್ಚು ಮಾಡಿದ್ದಾನೆ.

    ತಂದೆಯ ಮೂರು ಬ್ಯಾಂಕ್​ ಖಾತೆಗಳನ್ನು ನಿರ್ವಹಿಸುತ್ತಿದ್ದ ಬಾಲಕ ಒಂದೊಂದೇ ಖಾತೆಯಿಂದ ತಂದೆಗೆ ತಿಳಿಯದಂತೆ ಹಣ ವರ್ಗಾಯಿಸಿದ್ದಾನೆ. ಅವರಿಗೆ ಗೊತ್ತಾಗದಿರಲು ಬ್ಯಾಂಕ್​ನಿಂದ ಬರುತ್ತಿದ್ದ ಮೇಸೆಜ್​ಗಳನ್ನು ಡಿಲೀಟ್​ ಮಾಡುತ್ತಿದ್ದ.

    ಇದನ್ನೂ ಓದಿ; ಆರೇ ತಿಂಗಳಲ್ಲಿ ಅಂಬಾನಿ ಮೀರಿಸುವಂತೆ ಬೆಳೆದ; ಬಳಿಕ ಹುದ್ದೆಯನ್ನೇ ತೊರೆದ ಜಾಕ್​ ಮಾ ಪ್ರತಿಸ್ಪರ್ಧಿ 

    ಮೊಬೈಲ್​ ಫೋನ್​ನ್ನು ಅಭ್ಯಾಸಕ್ಕಾಗಿ ಉಪಯೋಗಿಸುತ್ತಿದ್ದೇನೆ ಪಾಲಕರಿಗೆ ತಿಳಿಸಿದರೂ, ಆತ ಹೆಚ್ಚಿನ ಸಮಯವನ್ನು ಪಬ್​ಜಿ ಆಡುವುದರಲ್ಲಿಯೇ ಕಳೆಯುತ್ತಿದ್ದ. ತನಗೆ ಮಾತ್ರವಲ್ಲ, ತನ್ನೊಂದಿಗೆ ಆಟವಾಡುತ್ತಿದ್ದವರಿಗಾಗಿಯೂ ಅಪ್​ಗ್ರೇಡ್​ಗಳನ್ನು ಖರೀದಿಸುತ್ತಿದ್ದ.
    ತಂದೆ ಸರ್ಕಾರಿ ನೌಕರರಾಗಿದ್ದು, ಆತನ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ವೆಚ್ಚಕ್ಕಾಗಿ ತಂದೆ ಈ ಹಣವನ್ನು ಉಳಿತಾಯ ಮಾಡಿದ್ದರು. ಇತ್ತೀಚೆಗೆ ಪಾಲಕರ ಖಾತೆಯಲ್ಲಿದ್ದ ಹಣದ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ 16 ಲಕ್ಷ ರೂ. ಖರ್ಚಾಗಿರುವುದು ಗೊತ್ತಾಗಿದೆ. ಆತ ತಿಳಿದೇ ಈ ಮೊತ್ತ ಖರ್ಚು ಮಾಡಿರುವುದರಿಂದ ಪೊಲೀಸರ ಕೂಡ ಏನೂ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts