More

    ಕೆ-ಸೆಟ್ ಅರ್ಜಿ ಸಲ್ಲಿಕೆಯಲ್ಲಿ ತಾಂತ್ರಿಕ ಸಮಸ್ಯೆ: ಅಭ್ಯರ್ಥಿಗಳಲ್ಲಿ ಆತಂಕ

    ಬೆಂಗಳೂರು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023ರ (ಕೆ-ಸೆಟ್) ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳಿಗೆ ತಾಂತ್ರಿಕ ಅಡೆತಡೆಗಳು ಎದುರಾಗಿವೆ. ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳಲ್ಲಿ ಅಭ್ಯರ್ಥಿಗಳ ಸಹಿ ಕಾಣಿಸದಿರುವುದು ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
    ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ 41 ವಿಷಯಗಳಿಗೆ ಕೆ-ಸೆಟ್ ಪರೀಕ್ಷೆ ನಡೆಸುತ್ತಿದೆ. ಅರ್ಜಿ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು. ಸಾವಿರಾರು ಅರ್ಹತಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ನಳಿಕ ಅಭ್ಯರ್ಥಿಗಳು ಪ್ರಿಂಟ್ ತೆಗೆದುಕೊಂಡರೆ, ಸಹಿ ಸ್ಥಳದಲ್ಲಿ ಸಹಿ ಕಾಣಿಸುತ್ತಿಲ್ಲ. ಇದರಿಂದ ಅರ್ಜಿ ಸಲ್ಲಿಕೆಯಾಗಿದೆಯೋ ಇಲ್ಲವೋ ಎಂಬ ದ್ವಂದ್ವ ಎದುರಾಗಿದೆ.

    ಸಮಸ್ಯೆಗೆ ಸ್ಪಂದಿಸದ ಕೆಇಎ:

    ಸಮಸ್ಯೆ ಬಗೆಹರಿಸಿಕೊಳ್ಳುವ ಸಂಬಂಧ ಕಳೆದ 8ರಿಂದ 10 ದಿನಗಳಿಂದ ಕೆಇಎ ಸಹಾಯವಾಣಿಗೆ ಕರೆ ಮಾಡಿದರೆ, ಕರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಗಂಟೆಗಟ್ಟಲೆ ನಿರಂತರವಾಗಿ ಪ್ರಯತ್ನಿಸಿದರೂ ಕರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ನೇರವಾಗಿ ಆಧಿಕಾರಿಗಳನ್ನು ಕೂಡ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಏನು ಮಾಡುವುದು ಎಂಬುದು ತಿಳಿಯದೆ, ಆತಂಕ ಎದುರಾಗಿದೆ ಎಂದು ಅಭ್ಯರ್ಥಿಗಳು ಪರದಾಟವನ್ನು ಹೇಳಿಕೊಂಡಿದ್ದಾರೆ.

    ಕೆಇಎ ಕಚೇರಿಗೂ ಭೇಟಿ:

    ಅರ್ಜಿ ಸಲ್ಲಿಸಿ ಈ ರೀತಿ ಸಮಸ್ಯೆ ಎದುರಾಗಿರುವ ಅಭ್ಯರ್ಥಿಗಳು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೂ ಭೇಟಿ ನೀಡಿ ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಭೇಟಿ ನೀಡುತ್ತಿದ್ದಾರೆ. ಅರ್ಜಿಯನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಲಾಗುತ್ತಿದೆ. ರಾಜ್ಯದ ಇತರೆ ಭಾಗದಲ್ಲಿರುವ ಅಭ್ಯರ್ಥಿಗಳು ಅಂಚೆ ಮೂಲಕವೂ ಸಮಸ್ಯೆಗಳನ್ನು ತಲುಪಿಸುತ್ತಿದ್ದಾರೆ.

    ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸಂಪೂರ್ಣ ಡಿಜಿಟಲ್ ಆಗಿದೆ. ಅಭ್ಯರ್ಥಿಗಳ ಮೊಬೈಲ್ ಮತ್ತು ಆಧಾರ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೆ, ಆತಂಕಪಡುವ ಅಗತ್ಯವಿಲ್ಲ.
    – ಎಸ್. ರಮ್ಯಾ, ಕೆಇಎ ಕಾರ್ಯನಿರ್ವಹಕ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts