More

    ಲಸಿಕೆ ತಾಂತ್ರಿಕ ಸಮಿತಿ ಶಿಫಾರಸು : ಕೋವಿಶೀಲ್ಡ್​ ಡೋಸ್​ಗಳ ಅಂತರ ಹೆಚ್ಚಿಸಿ, ಸೋಂಕಿತರು 6 ತಿಂಗಳು ಕಾಯಿರಿ

    ನವದೆಹಲಿ : ಭಾರತದಲ್ಲಿ ಕರೊನಾ ಲಸಿಕೆ ಪಡೆಯುವ ಬಗ್ಗೆ ಹಲವು ಸಲಹೆಗಳನ್ನು ಲಸಿಕೆಯ ಬಗೆಗಿನ ತಾಂತ್ರಿಕ ಸಮಿತಿಯಾದ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಷನ್ (ಎನ್​ಟಿಎಜಿಐ) ನೀಡಿದೆ. ಇದರ ಪ್ರಕಾರ ಕೋವಿಶೀಲ್ಡ್​ ಲಸಿಕೆಯ ಮೊದಲನೇ ಡೋಸ್​ ಪಡೆದ ನಂತರ 12 ರಿಂದ 16 ವಾರಗಳ ಅಂತರ ಬಿಟ್ಟು ಎರಡನೇ ಡೋಸ್​ ಕೊಟ್ಟರೆ ಆ ಲಸಿಕೆಯ ಪರಿಣಾಮಕಾರಿತ್ವ ಇನ್ನೂ ಹೆಚ್ಚಲಿದೆ ಎನ್ನಲಾಗಿದೆ.

    ಹಾಲಿ ಕೋವಿಶೀಲ್ಡ್​ ಎರಡನೇ ಡೋಸ್​ ಪಡೆಯಲು ಇರುವ 4 ರಿಂದ 8 ವಾರಗಳ ಅಂತರವನ್ನು ಏರಿಸಿರುವ ಎನ್​ಟಿಎಜಿಐ, ಕೋವಾಕ್ಸಿನ್​​ಗೆ ಈ ರೀತಿಯ ಯಾವುದೇ ಬದಲಾವಣೆಯನ್ನು ಹೇಳಿಲ್ಲ. ಸಮಿತಿಯ ಇತರ ಶಿಫಾರಸುಗಳೆಂದರೆ :-

    * ಕರೊನಾ ಸೋಂಕಿಗೆ ಒಳಗಾಗಿರುವವರು, ಗುಣಮುಖರಾಗಿ ಆರು ತಿಂಗಳು ಕಳೆಯುವವರೆಗೆ ಲಸಿಕೆ ಪಡೆಯುವುದನ್ನು ಮುಂದೂಡಬೇಕು.
    * ಗರ್ಭಿಣಿಯರು ಭಾರತದಲ್ಲಿ ಲಭ್ಯವಿರುವ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್​ ಎರಡೂ ಲಸಿಕೆಗಳಲ್ಲಿ ಯಾವುದನ್ನು ಬೇಕಾದರೂ ಪಡೆಯಬಹುದು.
    * ಹೆರಿಗೆಯ ನಂತರ ಮಗುವಿಗೆ ಹಾಲು ಕುಡಿಸುತ್ತಿರುವ ಬಾಣಂತಿಯರು ಯಾವುದೇ ಸಮಯದಲ್ಲಿ ಬೇಕಾದರೂ ಲಸಿಕೆ ಪಡೆಯಬಹುದು.

    ಎನ್‌ಟಿಎಜಿಐನ ಈ ಶಿಫಾರಸುಗಳನ್ನು ಕೋವಿಡ್-19 ಲಸಿಕೆ ನಿರ್ವಹಣೆಗಾಗಿ ರಚಿಸಲಾಗಿರುವ ರಾಷ್ಟ್ರೀಯ ತಜ್ಞರ ಗುಂಪಿಗೆ ಕಳುಹಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

    ಜೂನ್ 1 ರವರೆಗೆ ಮಹಾ ಲಾಕ್​ಡೌನ್ ವಿಸ್ತರಣೆ ; ರಾಜ್ಯ ಪ್ರವೇಶಿಸಲು ನೆಗೆಟಿವ್ ವರದಿ ಕಡ್ಡಾಯ

    ಲಸಿಕೆ ಪಡೆಯಲು ಹೋದ ಆಟೋ ಡ್ರೈವರ್​… ಮನೆಗೆ ವಾಪಸಾದಾಗ ಅಲ್ಮೆರಾ ಖಾಲಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts