More

    ಸಾಗರದ ಅಕ್ಷಯ ಪಂಡಿತ್‌ಗೆ 2021ರ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ; ಮೇ 1ರಂದು ಬೆಂಗಳೂರಿನಲ್ಲಿ ಪ್ರದಾನ

    ಬೆಂಗಳೂರು: ಸಾಗರದ ಅಕ್ಷಯ ಪಂಡಿತ್ ಅವರ ‘ಬಯಲಲಿ ತೇಲುತ ತಾನು’ ಅಪ್ರಕಟಿತ ಕಥಾಸಂಕಲನ 2021ರ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿ 10 ಸಾವಿರ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ.

    ಅಕ್ಷಯ ಪಂಡಿತ್ ಪ್ರಸ್ತುತ ಬೆಂಗಳೂರಿನ ನಾಸ್ಡಾಕ್ ಸಾಫ್ಟ್‌ವೇರ್ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಖ್ಯಾತ ವಿಮರ್ಶಕ ಡಾ. ಓ.ಎಲ್. ನಾಗಭೂಷಣಸ್ವಾಮಿ ಈ ಬಾರಿಯ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ವಿಭಾಗದ ತೀರ್ಪುಗಾರರಾಗಿದ್ದರು.

    ಮೇ 1ರಂದು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ನಡೆಯಲಿರುವ ‘ಈ ಹೊತ್ತಿಗೆ’ಯ ಹೊನಲು ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

    ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

    ಇದೇ ಸಮಯದಲ್ಲಿ 26ರ ವಯೋಮಿತಿಯ ಕಥೆಗಾರರಿಗಾಗಿ ‘ಈ ಹೊತ್ತಿಗೆ’ ಆಯೋಜಿಸಿದ್ದ ಕಥಾಸ್ಪರ್ಧೆಯಲ್ಲಿ, ಈ ಬಾರಿ ಬಹುಮಾನಕ್ಕೆ ಯೋಗ್ಯವಾದ ಕಥೆಗಳು ಬಂದಿರದ ಕಾರಣ ಯಾವ ಕಥೆಗೂ ಬಹುಮಾನ ಕೊಡುತ್ತಿಲ್ಲ. ಪರ್ಯಾಯವಾಗಿ ‘ಈ ಹೊತ್ತಿಗೆ’ಯು ಮುಂದಿನ ದಿನಗಳಲ್ಲಿ 2 ದಿನಗಳ ಆನ್‌ಲೈನ್ ಕಥಾಕಮ್ಮಟವನ್ನು ಏರ್ಪಡಿಸಲಿದ್ದು, ಈ ವರ್ಷ ಸ್ಪರ್ಧೆಯಲ್ಲಿ ಭಾಗವಹಿಸಿದ ಕಥೆಗಾರರಿಗೆ ಉಚಿತ ಪ್ರವೇಶವನ್ನು ನೀಡುವ ಮೂಲಕ ಅವರೊಳಗಿನ ಕಥೆಗಾರರಿಗೆ ಸರಿಯಾದ ಮಾರ್ಗದರ್ಶನ ದೊರೆಯುವಂತೆ ಮಾಡಿ ಅವರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ಸೃಜನಶೀಲ ಸಾಹಿತಿ ಚಿದಂಬರ ನರೇಂದ್ರ ಅವರು ಈ ವಿಭಾಗದ ತೀರ್ಪುಗಾರರಾಗಿದ್ದರು.

    ಶಿರಸಿ ತಾಲೂಕಿನಲ್ಲಿ ಭೂಕುಸಿತ! ಅಪಾರ ಪ್ರಮಾಣದ ಹಾನಿ

    ಅಭಿಮಾನಿಗಳೇ ನಮ್ಮನೆ ದೇವ್ರು; ರಾಜ್ಯಾದ್ಯಂತ ಪುನೀತ್ ಪ್ರವಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts