More

    ಸರ್ಫಾಜ್ ಖಾನ್ ಜೆರ್ಸಿ ನಂ.97ರ ಹಿಂದಿನ ರಹಸ್ಯ ಗೊತ್ತಾ? : ಕುಂಬ್ಳೆ-ಸರ್ಫಾಜ್ ರನೌಟ್ ಬ್ಯಾಡ್‌ಲಕ್!

    ರಾಜ್‌ಕೋಟ್: ದೇಶೀಯ ಕ್ರಿಕೆಟ್‌ನಲ್ಲಿ ರನ್ ಮಳೆ ಹರಿಸಿದ್ದ ಮುಂಬೈ ಬ್ಯಾಟರ್ ಸರ್ಫಾಜ್ ಖಾನ್ ಹಾಗೂ ಧ್ರುವ ಜುರೆಲ್ ಕ್ರಮವಾಗಿ 311,312ನೇ ಆಟಗಾರರಾಗಿ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 26 ವರ್ಷದ ಸರ್ಫಾಜ್ ಟೀಮ್ ಇಂಡಿಯಾ ಪರ ಆಡುವ ಬಾಲ್ಯದ ಕನಸು ನನಸಾದ ಅವಿಸ್ಮರಣೀಯ ಕ್ಷಣಕ್ಕೆ ಅವರ ತಂದೆ ಹಾಗೂ ಕೋಚ್ ನೌಶಾದ್ ಖಾನ್ ಮತ್ತು ಸರ್ಫಾಜ್ ಪತ್ನಿ ರೋಮನಾ ಜಹೂರ್ ಸಾಕ್ಷಿಯಾದರು ಮತ್ತು ಭಾವುಕರಾಗಿ ಆನಂದಬಾಷ್ಪ ಸುರಿಸಿದರು.

    ನಂ. 97 ಜೆರ್ಸಿ ತಂದೆಗೆ ಅರ್ಪಣೆ: ಸರ್ಫಾಜ್ ಖಾನ್ 97 ಸಂಖ್ಯೆಯ ಜೆರ್ಸಿ ಧರಿಸುವ ಮೂಲಕ ತಂದೆಗೆ ಗೌರವ ಸಲ್ಲಿಸಿರುವುದು ವಿಶೇಷ. ಸರ್ಫಾಜ್ ತಂದೆ ಹೆಸರು ನೌಶಾದ್. ಹಿಂದಿಯಲ್ಲಿ 9 ಸಂಖ್ಯೆಯನ್ನು ‘ನೌ’ ಹಾಗೂ 7 ಸಂಖ್ಯೆಯನ್ನು ‘ಸಾತ್’ ಎನ್ನುತ್ತಾರೆ. ಇವೆರಡನ್ನೂ ಒಟ್ಟಾಗಿ ಹೇಳಿದಾಗ ‘ನೌಶಾದ್’ ಎಂದಂತೆಯೇ ಕೇಳುವುದರಿಂದ ಸರ್ಫಾಜ್ ಈ ಸಂಖ್ಯೆ ಆರಿಸಿಕೊಂಡಿದ್ದಾರೆ. ಸರ್ಫಾಜ್ ಕಿರಿಯ ಸಹೋದರ ಮುಶೀರ್ ಖಾನ್ ಸಹ ಇತ್ತೀಚೆಗೆ ಮುಕ್ತಾಯಗೊಂಡ 19 ವಯೋಮಿತಿಯ ಏಕದಿನ ವಿಶ್ವಕಪ್‌ನಲ್ಲಿ 97 ಸಂಖ್ಯೆಯ ಜೆರ್ಸಿ ಧರಿಸಿ ಆಡಿದ್ದರು.

    ಕುಂಬ್ಳೆ-ಸರ್ಫಾಜ್ ರನೌಟ್ ಬ್ಯಾಡ್‌ಲಕ್!: ಪಂದ್ಯಕ್ಕೆ ಮುನ್ನ ಸರ್ಫಾಜ್ ಖಾನ್‌ಗೆ ಸ್ಪಿನ್ ದಿಗ್ಗಜ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಚೊಚ್ಚಲ ಟೆಸ್ಟ್ ಕ್ಯಾಪ್ ನೀಡಿದರು. ಸರ್ಫಾಜ್ ರನೌಟ್ ಆದ ಬಳಿಕ, ಅನಿಲ್ ಕುಂಬ್ಳೆ ಕೂಡ 1990ರಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ತನ್ನ ಪದಾರ್ಪಣೆಯ ಟೆಸ್ಟ್‌ನಲ್ಲೂ ರನೌಟ್ ಆಗಿರುವ ಅಂಶ ಕ್ರಿಕೆಟ್ ಪ್ರೇಮಿಗಳ ಗಮನಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts