More

    ಓ ವಿಧಿಯೇ ನೀನೆಷ್ಟು ಕ್ರೂರಿ… ಶವಪೆಟ್ಟಿಗೆಗೆ ಮುತ್ತಿಟ್ಟು ಕಣ್ಣೀರಿಟ್ಟ ಬ್ರಿಗೇಡಿಯರ್​ ಲಿಡ್ಡರ್​ ಪತ್ನಿ

    ನವದೆಹಲಿ: ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್​ ದುರಂತದಲ್ಲಿ ಸಾವಪ್ಪಿದ ಬ್ರಿಗೇಡಿಯರ್​ ಲಖ್ವಿಂದರ್​ ಸಿಂಗ್​ ಲಿಡ್ಡರ್​ ಅವರ ಪಾರ್ಥಿವ ಶರೀರಕ್ಕೆ ಇಂದು ಅಂತಿಮ ನಮನ ಸಲ್ಲಿಸಲಾಯಿತು. ದೆಹಲಿಯ ಬ್ರಾರ್​ ಸ್ಕ್ವೇರ್​ ಕ್ರೆಮೆಟೋರಿಯಂನಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಮತ್ತು ಹಿರಿಯ ಸೇನಾಧಿಕಾರಿಗಳು ಹೂಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು.

    ಓ ವಿಧಿಯೇ ನೀನೆಷ್ಟು ಕ್ರೂರಿ... ಶವಪೆಟ್ಟಿಗೆಗೆ ಮುತ್ತಿಟ್ಟು ಕಣ್ಣೀರಿಟ್ಟ ಬ್ರಿಗೇಡಿಯರ್​ ಲಿಡ್ಡರ್​ ಪತ್ನಿ

    ದಿವಂಗತ ಲಿಡ್ಡರ್​​ ಅವರ ಪತ್ನಿ ಗೀತಿಕಾ, ಅವ​​ರ ಪಾರ್ಥಿವ ಶರೀರವಿರಿಸಿದ್ದ ರಾಷ್ಟ್ರಧ್ವಜದಿಂದ ಸುತ್ತಲಾಗಿದ್ದ ಶವಪೆಟ್ಟಿಗೆ​ಗೆ ರೋಧಿಸುತ್ತಾ ಮುತ್ತಿಟ್ಟರು. ಅವರ 17 ವರ್ಷದ ಪುತ್ರಿ ಆಶ್ನಾ ಕಣ್ಣೀರಿನೊಂದಿಗೆ ಹೂವು ಅರ್ಪಿಸಿ ಭಾವುಕ ವಿದಾಯ ಹೇಳಿದರು. ದುಃಖತಪ್ತ ಸೇನಾಧಿಕಾರಿಗಳು, ಸೇನಾ ಸಿಬ್ಬಂದಿ ಮತ್ತು ಬಂಧುಮಿತ್ರರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ, ಗೀತಿಕಾ ಲಿಡ್ಡರ್​, “ನಾನು ಸೈನಿಕನ ಪತ್ನಿಯಾಗಿ ಅವರನ್ನು ಮುಗುಳ್ನಗೆಯೊಂದಿಗೆ ಚೆನ್ನಾಗಿ ಕಳುಹಿಸಿಕೊಡಬೇಕು. ಆದರೆ, ಈ ರೀತಿ ಅವರು ವಾಪಸಾಗುತ್ತಾರೆ ಎಂದುಕೊಂಡಿರಲಿಲ್ಲ. ಇದು ತುಂಬಲಾರದ ನಷ್ಟ. ಏನು ಮಾಡುವುದು…ದೇವರಿಗೆ ಇದೇ ಒಪ್ಪಿಗೆ ಇತ್ತು” ಎಂದು ಭಾವುಕರಾಗಿ ನುಡಿದರು. “ಅವರು ತುಂಬಾ ಒಳ್ಳೆಯ ತಂದೆಯಾಗಿದ್ದರು. ನನ್ನ ಮಗಳು ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಾಳೆ” ಎಂದರು.

    ಓ ವಿಧಿಯೇ ನೀನೆಷ್ಟು ಕ್ರೂರಿ... ಶವಪೆಟ್ಟಿಗೆಗೆ ಮುತ್ತಿಟ್ಟು ಕಣ್ಣೀರಿಟ್ಟ ಬ್ರಿಗೇಡಿಯರ್​ ಲಿಡ್ಡರ್​ ಪತ್ನಿ

    ಬ್ರಿ.ಲಿಡ್ಡರ್​​ರ ಜೀವನ: 1969ರ ಜೂನ್​ 26 ರಂದು ಜನಿಸಿದ ಬ್ರಿಗೇಡಿಯರ್​​ ಎಲ್​.ಎಸ್​.ಲಿಡ್ಡರ್​​​, 1990ಕ್ಕೆ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್​ಗೆ ಸೇರಿ ಸೇವೆ ಆರಂಭಿಸಿದರು. ಕಾಂಗೋಗೆ ತೆರಳಿದ್ದ ಯುಎನ್​ ಶಾಂತಿಪಡೆಯ ಬಟಾಲಿಯನ್​ನ ಕಮ್ಯಾಂಡರ್​ ಆಗಿದ್ದರು. ಭಾರತದ ಉತ್ತರ ಭಾಗದ ಗಡಿಗಳಲ್ಲಿ ಸೇನಾ ಬ್ರಿಗೇಡ್​ಗಳನ್ನು ಕಮ್ಯಾಂಡ್​ ಮಾಡಿದ್ದರು. ಮಿಲಿಟರಿ ಆಪರೇಷನ್ಸ್​ ಡೈರೆಕ್ಟೊರೇಟ್​ನ ನಿರ್ದೇಶಕರಾಗಿ ಮತ್ತು ಕಜಾಕಿಸ್ತಾನದಲ್ಲಿ ರಕ್ಷಣಾ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. 2021ರ ಜನವರಿಯಿಂದ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ರ ರಕ್ಷಣಾ ಸಹಾಯಕರಾಗಿ ಕರ್ತವ್ಯ ಪಾಲಿಸುತ್ತಿದ್ದರು. ಮೇಜರ್​ ಜನರಲ್​ನ ರಾಂಕ್​ಗೆ ಅನುಮೋದನೆ ಪಡೆದಿದ್ದ ಬ್ರಿ.ಲಿಡ್ಡರ್​, ಬದುಕಿದ್ದರೆ ಒಂದು ಡಿವಿಷನ್​​ನ ಜವಾಬ್ದಾರಿ ಪಡೆಯಬೇಕಿತ್ತು. (ಏಜೆನ್ಸೀಸ್)

    VIDEO| ಮಂಡಿಯೂರಿ ಮಾಡಿದ ಪ್ರೇಮ ನಿವೇದನೆ: ಕ್ರಿಕೆಟ್​ ಮಧ್ಯೆ ವೀಕ್ಷಕರಿಗೆ ಸಿಕ್ಕ ಸವಿ ದೃಶ್ಯ!

    ಖ್ಯಾತ ಪ್ರವಚನಕಾರ ಡಾ.ಈಶ್ವರ ಮಂಟೂರ ಸ್ವಾಮೀಜಿ ಲಿಂಗೈಕ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts