More

    ಅಫ್ಘಾನಿಸ್ತಾನ ಟಿ20 ಲೀಗ್‌ನಲ್ಲಿ ತಂಡದ ಮಾಲೀಕನೇ ಆಡಲು ಇಳಿದ! ಮುಂದೇನಾಯ್ತು?

    ಕಾಬೂಲ್: ಇತ್ತ ಯುಎಇಯಲ್ಲಿ ಐಪಿಎಲ್ ಟೂರ್ನಿಗೆ ಸಿದ್ಧತೆಗಳು ನಡೆಯುತ್ತಿರುವ ನಡುವೆ ಅತ್ತ ಅಫ್ಘಾನಿಸ್ತಾನದಲ್ಲಿ ದೇಶೀಯ ಟಿ20 ಕ್ರಿಕೆಟ್ ಟೂರ್ನಿ ‘ಶ್ಪಗೀಜ ಕ್ರಿಕೆಟ್ ಲೀಗ್’ ಆರಂಭಗೊಂಡಿದೆ. 6 ತಂಡಗಳ ಟೂರ್ನಿಯ ಪಂದ್ಯವೊಂದರಲ್ಲಿ ಕಾಬೂಲ್ ಈಗಲ್ಸ್ ತಂಡದ ಮಾಲೀಕನೇ ಪಂದ್ಯ ಆಡಲು ಇಳಿದರು. ಇದರ ಬೆನ್ನಲ್ಲೇ ದೊಡ್ಡ ಅವಾಂತರವನ್ನೇ ಸೃಷ್ಟಿಸಿಬಿಟ್ಟಿದ್ದಾರೆ!

    ಕಾಬೂಲ್ ಈಗಲ್ಸ್ ತಂಡದ ಮಾಲೀಕ ಅಬ್ದುಲ್ ಕಾಬುಲ್ ಆಯೂಬಿ ಮಧ್ಯಮ ವೇಗಿಯೂ ಆಗಿದ್ದು, ಸ್ಪೀನ್ ಘರ್ ಟೈಗರ್ಸ್‌ ತಂಡದ ವಿರುದ್ಧ ಲೀಗ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿದು ಎಲ್ಲರಿಗೂ ಅಚ್ಚರಿ ಮೂಡಿಸಿದರು. 40 ವರ್ಷದ ಅವರು ಪಂದ್ಯದಲ್ಲಿ ಒಂದು ಓವರ್ ಎಸೆದು 16 ರನ್ ಕೂಡ ಬಿಟ್ಟುಕೊಟ್ಟರು.

    ಈ ರೀತಿ ಕಾನೂನು ಬಾಹಿರವಾಗಿ ಪಂದ್ಯದಲ್ಲಿ ಆಡಲು ಮೈದಾನಕ್ಕೆ ಇಳಿದ ಕಾರಣಕ್ಕಾಗಿ ಮಾತ್ರವಲ್ಲದೆ, ಆಡಿದ ಈ ಒಂದು ಪಂದ್ಯದ ವೇಳೆ ತೋರಿದ ಅಶಿಸ್ತಿನ ವರ್ತನೆಗಾಗಿಯೂ ಅಬ್ದುಲ್ ಆಯೂಬಿಗೆ ಈಗ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಟೂರ್ನಿಯಿಂದಲೇ ನಿಷೇಧ ಹೇರಿದೆ. ತಂಡದ ಆಟಗಾರರು ಮತ್ತು ಸಿಬ್ಬಂದಿಯೊಂದಿಗೆ ಮಾತ್ರವಲ್ಲದೆ, ಟೂರ್ನಿಯ ವೀಕ್ಷಕವಿವರಣೆಕಾರರೊಂದಿಗೂ ಆಯೂಬಿ ಅಸಭ್ಯ ವರ್ತನೆ ತೋರಿದ್ದಾರೆ ಎಂದು ದೂರಲಾಗಿದೆ.

    ಇದನ್ನೂ ಓದಿ: ರೈನಾ ಸಂಬಂಧಿಕರ ಮೇಲಿನ ದಾಳಿ ಪ್ರಕರಣವನ್ನು ಕೊನೆಗೂ ಭೇದಿಸಿದ ಪಂಜಾಬ್ ಪೊಲೀಸರು

    ಇದೀಗ ಟೂರ್ನಿಯ ಮುಂದಿನ ಯಾವುದೇ ಪಂದ್ಯಗಳಿಗೆ ಹಾಜರಾಗದಂತೆ ಆಯೂಬಿಯನ್ನು ನಿರ್ಬಂಧಿಸಲಾಗಿದೆ. ಈ ನಡುವೆ ಲೀಗ್ ಹಂತದಲ್ಲಿ ಅಜೇಯ ಸಾಧನೆ ಮಾಡಿದ ಅವರ ಮಾಲೀಕತ್ವದ ಕಾಬೂಲ್ ಈಗಲ್ಸ್ ತಂಡ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮಿಸ್ ಐನಾಕ್ ನೈಟ್ಸ್ ತಂಡಕ್ಕೆ ಆಘಾತ ನೀಡಿ ಪ್ರಶಸ್ತಿ ಸುತ್ತಿಗೂ ಏರಿದೆ.

    VIDEO | ಕ್ವಾರಂಟೈನ್‌ನಿಂದಲೇ ಕಿಂಗ್ಸ್ ಇಲೆವೆನ್‌ಗೆ ವಿಶೇಷ ಸಂದೇಶ ನೀಡಿದ ಪ್ರೀತಿ ಝಿಂಟಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts