More

    PHOTO: ಸವಾಲಿನ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ವಿರಾಟ್ ಕೊಹ್ಲಿ ಪಡೆ

    ಮುಂಬೈ/ಜೊಹಾನ್ಸ್‌ಬರ್ಗ್: ಹರಿಣಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸುವ ಮಹತ್ವಾಕಾಂಕ್ಷೆಯೊಂದಿಗೆ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಗುರುವಾರ ದಕ್ಷಿಣ ಆಫ್ರಿಕಾ ತಲುಪಿದೆ. ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ವ್ಯತಿರಿಕ್ತ ಹೇಳಿಕೆ-ಪ್ರತಿಹೇಳಿಕೆಯ ವಿವಾದದ ನಡುವೆ ಪ್ರವಾಸ ಶುರುವಾಗುತ್ತಿದ್ದು, ಮೈದಾನದಲ್ಲಿ ಐತಿಹಾಸಿಕ ಸಾಧನೆ ತೋರುವತ್ತ ಟೀಮ್ ಇಂಡಿಯಾ ಗಮನಹರಿಸಬೇಕಾಗಿದೆ.

    ಗುರುವಾರ ಬೆಳಗ್ಗೆ ಮುಂಬೈನಿಂದ ನಿರ್ಗಮಿಸಿದ ಭಾರತ ತಂಡ ಸಂಜೆಯ ವೇಳೆ ಜೊಹಾನ್ಸ್‌ಬರ್ಗ್ ತಲುಪಿತು. ಬಿಸಿಸಿಐ ಟ್ವಿಟರ್‌ನಲ್ಲಿ ಈ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೊಂಡಿದೆ. 3 ಪಂದ್ಯಗಳ ಟೆಸ್ಟ್ ಸರಣಿಗೆ ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಚಾಲನೆ ಸಿಗಲಿದೆ. ಉಪನಾಯಕ ರೋಹಿತ್ ಶರ್ಮ ಗಾಯದಿಂದಾಗಿ ಕೊನೇಕ್ಷಣದಲ್ಲಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಭಾರತ ತಂಡ ವಿಶೇಷ ಬಾಡಿಗೆ ವಿಮಾನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದು, ಪ್ರವಾಸದ ಮೊದಲ ದಿನವಷ್ಟೇ ಕ್ವಾರಂಟೈನ್‌ನಲ್ಲಿರಲಿದೆ. ಬಳಿಕ ಬಯೋಬಬಲ್‌ನಲ್ಲೇ ಅಭ್ಯಾಸ ಆರಂಭಿಸಲಿದೆ.

    ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಹಾವಳಿ ಹೆಚ್ಚಾಗಿರುವ ನಡುವೆ ಈ ಸರಣಿ ನಿಗದಿಯಾಗಿದೆ. ಬುಧವಾರ ದಕ್ಷಿಣ ಆಫ್ರಿಕಾದಲ್ಲಿ 26 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ದಾಖಲಾಗಿರುವುದು ಆತಂಕ ಹೆಚ್ಚಿಸಿದೆ. ಪ್ರವಾಸದ ವೇಳಾಪಟ್ಟಿ ಈ ಮೊದಲೇ ಬದಲಾವಣೆ ಕಂಡಿದ್ದು, ಒಂದು ವಾರ ತಡವಾಗಿ ಟೆಸ್ಟ್ ಸರಣಿ ಶುರುವಾಗಲಿದೆ ಮತ್ತು ಟಿ20 ಸರಣಿಯನ್ನು ಕೈಬಿಡಲಾಗಿದೆ.

    ಪುತ್ರಿ ವಾಮಿಕಾ ಚಿತ್ರ ಸೆರೆ ಹಿಡಿಯದಂತೆ ಮನವಿ
    ಎಲ್ಲ ಆಟಗಾರರು ಕುಟುಂಬದ ಸದಸ್ಯರ ಜತೆ ಪ್ರವಾಸಕ್ಕೆ ತೆರಳಿದ್ದು, ಅದರಂತೆ ಕೊಹ್ಲಿ ಜತೆಗೆ ಪತ್ನಿ ಅನುಷ್ಕಾ ಶರ್ಮ ಮತ್ತು ಪುತ್ರಿ ವಾಮಿಕಾ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಬಸ್‌ನಿಂದ ಮೊದಲಿಗೆ ಇಳಿದು ಬಂದ ಕೊಹ್ಲಿ, ‘ಮಗುವಿನ ಚಿತ್ರ ಕ್ಲಿಕ್ಕಿಸಬೇಡಿ’ ಎಂದು ಮನವಿ ಮಾಡಿಕೊಂಡರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಧ್ಯಮ ಛಾಯಾಗ್ರಾಹಕರು, ಆಟಗಾರರು ಮತ್ತು ಇತರ ಕುಟುಂಬ ಸದಸ್ಯರ ಚಿತ್ರಗಳನ್ನು ಮಾತ್ರ ಕ್ಲಿಕ್ಕಿಸಿದರು.

    ಆಶಸ್ ಸರಣಿಯ 2ನೇ ಟೆಸ್ಟ್‌ನಲ್ಲಿ ಆಸೀಸ್‌ಗೆ ವಾರ್ನರ್, ಲಬುಶೇನ್ ಆಸರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts