More

    ಶಿಕ್ಷಕ ವೃತ್ತಿ ಸರ್ವಶ್ರೇಷ್ಠ

    ನಾಲತವಾಡ: ಹೆತ್ತ ತಂದೆ, ತಾಯಿ, ವಿದ್ಯೆ ನೀಡಿದ ಗುರುವಿನ ಋಣಕ್ಕೆ ಬೆಲೆ ಕಟ್ಟಲು ಆಗದು ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಹೇಳಿದರು.

    ಪಟ್ಟಣದ ಹಳ್ಳೂರ ಪ್ಯಾಲೇಸ್‌ನಲ್ಲಿ 1996-97ನೇ ಶೈಕ್ಷಣಿಕ ಸಾಲಿನಲ್ಲಿ ಕಲಿತ ಶ್ರೀವೀರೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ತಂದೆಗೆ ಒಳ್ಳೆಯ ಮಗ, ಗುರುವಿಗೆ ಒಳ್ಳೆಯ ಶಿಷ್ಯರು ದೊರೆಯುವುದು ತಂದೆ ಹಾಗೂ ಗುರುವಿನ ಪೂರ್ವ ಜನ್ಮದ ಪುಣ್ಯ. ಎಲ್ಲ ವೃತ್ತಿ, ಸೇವೆಗಳಿಗಿಂತ ಸರ್ವಶ್ರೇಷ್ಠವಾದುದು ಶಿಕ್ಷಕ ವೃತ್ತಿ. ಅದರಲ್ಲಿ ದಕ್ಷತೆ, ಪ್ರಾಮಾಣಿಕತೆ ಹಾಗೂ ಒಳ್ಳೆಯ ಸೇವಾ ಮನೋಭಾವದಿಂದ ನಾಳಿನ ನಾಡಿನ ಸತ್ಪ್ರಜೆಗಳನ್ನು ರೂಪಿಸುವ ಶಕ್ತಿ ಶಿಕ್ಷಕ ವೃತ್ತಿಯಲ್ಲಿದೆ. ಇಂಥಹ ಗುರುವಿನ ಋಣ ತೀರಿಸಲಾಗದು. ಶಿಷ್ಯನಾದವನು ಬಾಗಿದ ತಲೆ ಮುಗಿದ ಕೈ ಉಳ್ಳವನಾಗಬೇಕು. ಯಾವಾಗಲೂ ಸಜ್ಜನಿಕೆ, ಸಭ್ಯತೆಯನ್ನು ಮೈಗೂಡಿಸಿಕೊಂಡು ಹೋಗಬೇಕು. ವೇಷ ಭೂಷಣ ಧರಿಸಿರುವ ಢಾಂಬಿಕ ತನಕ್ಕಿಂತ ನಿಷ್ಕಲ್ಮಶ ಹೃದಯ ಶ್ರೇಷ್ಠ ಎಂದರು.

    ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾಂತೇಶ ಗಂಗನಗೌಡರ, ಬಸವರಾಜ ಗಂಗನಗೌಡರ, ಮುದ್ದನಗೌಡ ಮಸ್ಕಿ, ಮುತ್ತು ಹಾದಿಮನಿ, ಭೀಮಣ್ಣ ಗುರಿಕಾರ, ಮುನ್ನಾ ನಧಾಪ, ವೀರೇಶ ಆಲೂರ, ವೀರೇಶ ಗಂಗನಗೌಡರ, ಮಲ್ಲು ಭಜಂತ್ರಿ, ಗುರದೇವಿ ಬೂದಿಹಾಳ, ಸುಧಾ ಚಿನಿವಾಲ, ಅಂಬ್ರಮ್ಮ ಮಸ್ಕಿ ಇತರರಿದ್ದರು.

    ಶಿಕ್ಷಕರನ್ನು ಪುಷ್ಪವೃಷ್ಠಿಯ ಮೂಲಕ ವೇದಿಕೆಗೆ ಕರೆತಂದರು. ಮಹಾಂತೇಶ ಹಾದಿಮನಿ ಸ್ವಾಗತಿಸಿದರು. ಡಾ. ಗುರುಮೂರ್ತಿ ಕಣಕಾಲಮಠ ಪ್ರಾಸ್ತಾವಿಕ ಮಾತನಾಡಿದರು. ಸಿದ್ದು ಒಳಕಲದಿನ್ನಿ ಹಾಗೂ ಮಲ್ಲು ಭಜಂತ್ರಿ ಅನಿಸಿಕೆ ವ್ಯಕ್ತಪಡಿಸಿದರು. ಬಸವರಾಜ ಹಾದಿಮನಿ ಹಾಗೂ ಸುಧಾ ಚಿನಿವಾಲರ ನಿರೂಪಿಸಿದರು.

    ಶಿಕ್ಷಕರಾದ ಎಲ್.ಆರ್. ಗೊಳಸಂಗಿ, ಎಂ.ಐ. ಬಿಜ್ಜೂರ, ವಿ.ಎಂ. ಹಾದಿಮನಿ, ಎ.ಎಸ್. ಪಟ್ಟಣಶೆಟ್ಟಿ, ಸಿ.ಬಿ. ಇಟಗಿ, ಸಿ.ಎಸ್. ಸ್ಥಾವರಮಠ, ಸಿ.ಐ. ಕುಪ್ಪಸ್ತ, ಎಂ.ಬಿ. ಬಿರಾದಾರ, ಪಿ.ಐ. ಮಠ, ಎಸ್.ಎನ್. ಕಂಗಳ, ಮಹಾದೇವಿ ಮೋಟಗಿ, ಎಲ್.ಎಸ್. ನಾಯಕ, ಹುಸೇನಸಾಬ ಅತ್ತಾರ, ಶರಣಪ್ಪ ಸಜ್ಜನ, ಶಾವಕ್ಕ ಕಸಬೇಗೌಡರ, ಜಗದೀಶ ಕೆಂಭಾವಿ, ವಿಜಯ ನಡಗಟ್ಟಿ, ವೀರೇಶ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts