More

    ಶಿಕ್ಷಕರಿಗೆ ಒಂದು ಸಿಹಿಸುದ್ದಿ: ಶಿಕ್ಷಕಸ್ನೇಹಿ ವರ್ಗವಾಣೆ ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ

    ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ- 2020ಕ್ಕೆ ವಿಧಾನಪರಿಷತ್​ನಲ್ಲಿ ಬುಧವಾರ ಅನುಮೋದನೆ ದೊರೆತಿದೆ. ವಿಧಾನಸಭೆಯಲ್ಲಿ ಅನುಮೋದನೆಗೊಂಡಿದ್ದ ವಿಧೇಯಕವನ್ನು ಸಚಿವ ಸುರೇಶ್​ಕುಮಾರ್ ಮಂಡಿಸಿದರು.

    ಕಡ್ಡಾಯ ವರ್ಗಾವಣೆಯಿಂದ ಶಿಕ್ಷಕರಿಗೆ ಶಿಕ್ಷೆ ನೀಡುತ್ತಿದ್ದೇವೆ. ಅದನ್ನು ತಪ್ಪಿಸಿ, ಶಿಕ್ಷಕರು ಸಂತಸದಿಂದ ವಿದ್ಯೆ ಕಲಿಸಲು ಬೇಕಾದ ವಾತಾವರಣ ಸೃಷ್ಟಿಸಲು ಶಿಕ್ಷಕಸ್ನೇಹಿ ವಿಧೇಯಕ ರೂಪಿಸಲಾಗಿದೆ. ಶಿಕ್ಷಕರ ಹಿತ, ಶಿಕ್ಷಣದ ಉನ್ನತೀಕರಣ, ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಪ್ರತಿ ವರ್ಷ ಜೂನ್ ತಿಂಗಳೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಅನುಕೂಲವಾಗುವಂತೆ ಸಿದ್ಧಪಡಿಸಿದ್ದು, ಅನುಮೋದನೆ ನೀಡುವಂತೆ ಸಚಿವರು ಮನವಿ ಮಾಡಿದರು. ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸದಸ್ಯರಾದ ಕೆ.ಸಿ.ಕೊಂಡಯ್ಯ, ಶರಣಪ್ಪ ಮಟ್ಟೂರು, ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಭೋಜೇಗೌಡ ಮೊದಲಾದ ಸದಸ್ಯರು ಅಗತ್ಯ ಸಲಹೆಗಳನ್ನು ನೀಡಿದರು. ನಂತರ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಧ್ವನಿಮತಕ್ಕೆ ಹಾಕಿ, ಸದನದ ಅನುಮತಿ ಪಡೆದು, ಅಂಗೀಕರಿಸಿದರು.

    ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ; ಬಿಜೆಪಿ ಮತ್ತು ಪೊಲೀಸ್​ ಇಲಾಖೆಯ ವಿರುದ್ಧ ಡಿಕೆಶಿ, ದಿಗ್ವಿಜಯ ಸಿಂಗ್​ ಗುಡುಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts