More

    ಶಿಕ್ಷಕರು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ

    ಲಿಂಗಸುಗೂರು: ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಬಹುದೊಡ್ಡ ಹೊಣೆಗಾರಿಕೆ ಶಿಕ್ಷಕರ ಮೇಲಿದ್ದು, ಶಿಕ್ಷಕರು ಜವಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿದರೆ ಅವರ ವೃತ್ತಿಗೆ ಗೌರವ ಸಿಗಲಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

    ಇದನ್ನೂ ಓದಿ: ಶಿಕ್ಷಕರು ಮಾನಸಿಕ ಆರೋಗ್ಯದ ಕಡೆಗೂ ಗಮನಹರಿಸಬೇಕು-ಡಾ.ವಿನಾಯಕ

    ಶುಕ್ರವಾರ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದ ಭವನದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಶಿಕ್ಷಣ ಪ್ರೇಮಿಯಾಗಿ ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟ ಡಾ.ರಾಧಾಕೃಷ್ಣನ್ ಶಿಕ್ಷಕರಿಗೆ ಮಾದರಿಯಾಗಿದ್ದರು. ಅವರ ಮಾರ್ಗದರ್ಶನದಂತೆ ಶಿಕ್ಷಕರು ಕರ್ತವ್ಯ ನಿರ್ವಹಿಸಿ ಮಕ್ಕಳನ್ನು ರಾಷ್ಟ್ರದ ಸತ್ಪ್ರಜೆಗಳನ್ನಾಗಿ ರೂಪಿಸಿದಾಗ ಮಾತ್ರ ಶಿಕ್ಷಕರ ದಿನಾಚರಣೆಗೆ ಅರ್ಥ ಬರಲಿದೆ ಎಂದರು.

    ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಲು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಶಿಲ್ಪಿಗಳು ಕಾಡುಗಲ್ಲನ್ನು ಮೂರ್ತಿಯನ್ನಾಗಿ ನಿರ್ಮಿಸಿದಂತೆ

    ಮತ್ತು ವಿಶ್ವಕರ್ಮರು ಕಟ್ಟಿಗೆ, ಚಿನ್ನ, ಬೆಳ್ಳಿ ಲೋಹಗಳಿಂದ ಸುಂದರ ವಿಗ್ರಹ, ಆಭರಣಗಳನ್ನು ನಿರ್ಮಿಸಿದಂತೆ ಮಗುವನ್ನು ತಿದ್ದಿ ತೀಡಿ ಸಂಸ್ಕಾರವಂತರನ್ನಾಗಿಸಿ ಉಜ್ವಲ ಭವಿಷ್ಯ ರೂಪಿಸುವ ಜವಬ್ದಾರಿ ಶಿಕ್ಷಕರ ಮೇಲಿದೆ.

    ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ವೇಗ ತಂದಿದ್ದು, ಮಕ್ಕಳ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಲಭಿಸಲು ಅನುಕೂಲವಾಗಲಿದೆ. ಶಾಲಾ ಕೊಠಡಿ, ದುರಸ್ತಿ, ಕ್ರೀಡಾಂಗಣ ಸೇರಿ ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು.

    ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಬಿಇಒ ಹುಂಬಣ್ಣ ರಾಠೋಡ್,
    ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕುಳಗೇರಿ, ಅಕ್ಷರ ದಾಸೋಹ ಅಧಿಕಾರಿ ನಾಗನಗೌಡ ಪಾಟೀಲ್,
    ದೈಹಿಕ ಶಿಕ್ಷಣಾಧಿಕಾರಿ ಚನ್ನಬಸವರಾಜ ಮೇಟಿ,
    ಬಸಪ್ಪ ಹಂದ್ರಾಳ, ಗುರುಸಂಗಯ್ಯ ಗಣಾಚಾರಿ, ಪ್ರಭುಲಿಂಗ ಗದ್ದಿ, ಚನ್ನಪ್ಪ ರಾಠೋಡ್, ಅಮರಪ್ಪ ಸಾಲಿ, ಜಿತೇಂದ್ರ ಗುತ್ತೇದಾರ,
    ಅಮರೇಶ ನಾಡಗೌಡ, ಗಂಗಮ್ಮ ಕಟ್ಟಿಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts