More

    ಶಿಕ್ಷಕರ ಸ್ವಾಭಿಮಾನಕ್ಕೆ ಧಕ್ಕೆ ತರುವ ರಾಜಕಾರಣಿಗಳಿಗೆ ಬುದ್ದಿ ಕಲಿಸಿ

    ಚಿಕ್ಕಮಗಳೂರು: ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವರು ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಶಿಕ್ಷಕರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿರುವ ರಾಜಕಾರಣಿಗಳನ್ನು ವಿರೋಧಿಸಿ ಶಿಕ್ಷಕರ ಪರವಾಗಿರುವ ನನಗೆ ಈ ಬಾರಿಯ ನೈಋತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಿ.ಆರ್.ನಂಜೇಶ್ ಮನವಿ ಮಾಡಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿಕ್ಷಕರು ಎಂದಿಗೂ ಸ್ವಾಭಿಮಾನ ಬಿಡುವುದಿಲ್ಲ. ಈ ಚುನಾವಣೆಯಲ್ಲಿ ವ್ಯಕ್ತಿಯ ಯೋಗ್ಯತೆ ಮತ್ತು ವ್ಯಕ್ತಿತ್ವ ಮುಖ್ಯವಾಗುತ್ತದೆಯೇ ಹೊರತು ಪಕ್ಷವಲ್ಲ. ಹೀಗಾಗಿ ಶಿಕ್ಷಕರು ಈ ಬಾರಿ ತಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು.
    ಶಿಕ್ಷಕರು ದುಡ್ಡಿಗೆ ಮತ ನೀಡುತ್ತಾರೆ ಎಂದು ಕೆಲ ರಾಜಕಾರಣಿಗಳು ಹೇಳುತ್ತಿದ್ದು, ಇದರಿಂದ ಶಿಕ್ಷಕರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದೆ. ಇಂಥ ರಾಜಕಾರಣಿಗಳಿಗೆ ಮುಂಬರುವ ಚುನಾವಣೆಯಲ್ಲಿ ಶಿಕ್ಷಕರು ತಕ್ಕ ಪಾಠ ಕಲಿಸಲಿದ್ದಾರೆ. ಶಿಕ್ಷಕರ ಸ್ವಾಭಿಮಾನದ ಈ ಚುನಾವಣೆಯಲ್ಲಿ ಶಿಕ್ಷಕರೆಲ್ಲರೂ ಸೇರಿ ಒಬ್ಬ ಶಿಕ್ಷಕನನ್ನು ಆಯ್ಕೆ ಮಾಡುವುದಾದರೆ ಶಿಕ್ಷಕರ ಸಮಸ್ಯೆಗಳನ್ನು ಅರಿತಿರುವ ಶಿಕ್ಷಕನಾದ ನನಗೆ ಆಶೀರ್ವದಿಸಬೇಕು ಎಂದು ವಿನಂತಿಸಿದರು.
    ಕಳೆದ ಡಿಸೆಂಬರ್ ಅಂತ್ಯದವರೆಗೆ ೧೯,೩೮೦ ಶಿಕ್ಷಕರ ಹೆಸರುಗಳು ನೈಋತ್ಯ ಶಿಕ್ಷಕರ ಕ್ಷೇತ್ರದ ಅರ್ಹ ಮತದಾರರ ಪಟ್ಟಿಯಲ್ಲಿ ಸೇರಿವೆ. ಕಳೆದ ಬಾರಿ ಸುಮಾರು ೨೨ ಸಾವಿರ ಮತದಾರರು ನೊಂದಾಯಿಸಿದ್ದರು. ಆದರೆ ಕೇವಲ ೧೩ ಸಾವಿರ ಮತಗಳು ಚಲಾವಣೆಯಾಗಿದ್ದವು. ಈ ಬಾರಿ ಶಿಕ್ಷಕರನ್ನು ನೇರವಾಗಿ ಸಂಪರ್ಕ ಮಾಡಿ ಮತದಾನದ ಪ್ರಮಾಣ ಹೆಚ್ಚು ಮಾಡಲು ಕ್ರಮವಹಿಸುವುದಾಗಿ ತಿಳಿಸಿದರು.
    ಸುದ್ದಿಗೋಷ್ಟಿಯಲ್ಲಿ ಬೆಂಬಲಿಗರಾದ ಹರೀಶ್, ಮನೋಜ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts