More

    ಬೋಧನೆ ನಡೆಸಲು ಕ್ರಮವಹಿಸಿ

    ಕನಕಗಿರಿ: ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿಯ ಧರಣಿಯಿಂದ ತರಗತಿಗಳು ನಡೆಯುತ್ತಿಲ್ಲ, ಈ ಸಮಸ್ಯೆ ಬಗೆಹರಿಸಿ ಪಾಠ-ಪ್ರವಚನಗಳು ನಡೆಯುವಂತೆ ಅನುವು ಮಾಡಿ ಎಂದು ಇಲ್ಲಿನ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿಗಳು ತಹಸೀಲ್ದಾರ್ ವಿ.ಎಚ್.ಹೊರಪೇಟರಗೆ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಅಕ್ಬರುದ್ದೀನ್ ಓವೈಸಿ ತೆಲಂಗಾಣ ಹಂಗಾಮಿ ಸ್ಪೀಕರ್‌ : ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧನೆ

    ಅತಿಥಿ ಉಪನ್ಯಾಸಕರೇ ಆಧಾರವಾಗಿರುವ ಕಾಲೇಜಿಗೆ ಉಪನ್ಯಾಸಕರ ಧರಣಿಯಿಂದಾಗಿ ಬೋಧನೆ ನಡೆಯುತ್ತಿಲ್ಲ. ಮುಷ್ಕರ ಅಂತ್ಯ ಯಾವಾಗ ಎನ್ನುವುದು ತಿಳಿದಿಲ್ಲ. ಈಗಾಗಲೇ ಹಲವು ದಿನಗಳು ಕಳೆದಿದ್ದು, ಶೈಕ್ಷಣಿಕ ಚಟುವಟಿಕೆ ಹಿನ್ನಡೆಯಾಗುತ್ತಿದೆ. ಅದಕ್ಕೆ ಸರ್ಕಾರ ಎಚ್ಚೆತ್ತು ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ, ಪಾಠ ನಡೆಯುವಂತೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

    ಎಎಸ್‌ಐ ಲಕ್ಕಣ್ಣಮ ಬಸವರಾಜ್ ತೋಳದ್, ಕಾಲೇಜು ಯುವ ಉತ್ತೇಜನ ಸೇವಾಪಡೆ ಸಂಘಟನೆಯ ವಿದ್ಯಾರ್ಥಿಗಳಾದ ಬಸವರಾಜ ರೆಡ್ಡಿ, ಯೋಗಿ, ಹೊನ್ನೂರ ಹುಸೇನ, ಇಸ್ಮಾಯಿಲ್, ಕಿರಣ, ಗಿರಿರಾಜ್, ಬಸವ, ವೀರೇಶ, ವೀಣಾ, ಸೌಂದರ್ಯ, ಅಶ್ವಿನಿ, ಭೀಮಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts